ಗ್ರಾಹಕರಿಗೆ ಜಿಯೋ ಹೊಸ ಆಫರ್!

Reliance Jio offers additional data discounts to its users
Highlights

ಪ್ರತಿದಿನ ‘ಹೆಚ್ಚು ಮೌಲ್ಯ’ಭರವಸೆ  ಮುಂದುವರೆಸಿದ ಜಿಯೋ | ಯಾವುದೇ ಡೇಲಿ-ರಿಕರಿಂಗ್ ಡೇಟಾ ಪ್ಯಾಕ್‌ನೊಡನೆ ರೀಚಾರ್ಜ್ ಮಾಡುವ ಎಲ್ಲ ಗ್ರಾಹಕರಿಗೂ ಪ್ರತಿ ದಿನ 1.5 ಜಿಬಿ ಹೆಚ್ಚುವರಿ 4ಜಿ ಡೇಟಾ 

ಬೆಂಗಳೂರು: ಜೂನ್ ತಿಂಗಳು ಪೂರ್ತಿ ಎಲ್ಲ ಜಿಯೋ ಗ್ರಾಹಕರಿಗೂ ದುಪ್ಪಟ್ಟು ಡೇಟಾ (ಪ್ರತಿದಿನ 3 ಜಿಬಿ), ಜೊತೆಗೆ ರೂ. 399 ಪ್ಲಾನ್ ಮೇಲೆ ರೂ. 100 ರಿಯಾಯಿತಿ ಸಿಗಲಿದೆ.

ಜಿಯೋ ತನ್ನ ಸೇವೆ ಪ್ರಾರಂಭಿಸುವ ಸಂದರ್ಭದಲ್ಲಿ ನೀಡಿದ 'ಪ್ರತಿದಿನ ಹೆಚ್ಚು ಮೌಲ್ಯ' (ಎವೆರಿಡೇ ಮೋರ್ ವ್ಯಾಲ್ಯೂ, ಇಡಿಎಂವಿ) ವಾಗ್ದಾನವನ್ನು ಮುಂದುವರೆಸಿದೆ. ಎಲ್ಲ ಜಿಯೋ ಗ್ರಾಹಕರೂ ಸದಾಕಾಲ ಅತ್ಯುತ್ತಮ ಟ್ಯಾರಿಫ್‌ಗಳನ್ನು ಪಡೆಯುತ್ತಾರೆ. ಇತರ ಮೊಬೈಲ್ ಸೇವೆಗಳ ಹೋಲಿಕೆಯಲ್ಲಿ ಜಿಯೋ ಗ್ರಾಹಕರು ಯಾವಾಗಲೂ ಹೆಚ್ಚುವರಿ ಸವಲತ್ತುಗಳನ್ನು ಪಡೆಯುವುದನ್ನು ಇಡಿಎಂವಿ ವಾಗ್ದಾನ ಖಾತರಿಪಡಿಸುತ್ತದೆ, ಎಂದು ಜಿಯೋ ಪ್ರಕಟಣೆ ತಿಳಿಸಿದೆ.

ಯಾವುದೇ ಡೇಲಿ-ರಿಕರಿಂಗ್ ಡೇಟಾ ಪ್ಯಾಕ್‌ನೊಡನೆ ರೀಚಾರ್ಜ್ ಮಾಡುವ ತನ್ನ ಎಲ್ಲ ಗ್ರಾಹಕರಿಗೂ ಜಿಯೋ ಪ್ರತಿ ದಿನ 1.5 ಜಿಬಿ ಹೆಚ್ಚುವರಿ 4ಜಿ ಡೇಟಾ ನೀಡಲಿದೆ.

1. ಪ್ರತಿದಿನ 1.5 ಜಿಬಿ ಡೇಟಾ ಪ್ಯಾಕ್ ಬಳಕೆದಾರರು - ರೂ. 149, ರೂ. 349, ರೂ. 399 ಹಾಗೂ ರೂ. 449 ಪ್ಲಾನುಗಳಲ್ಲಿ ಇದೀಗ ಪ್ರತಿದಿನ 3 ಜಿಬಿ ಡೇಟಾ ಪಡೆಯಲಿದ್ದಾರೆ.

2. ಪ್ರತಿದಿನ 2 ಜಿಬಿ ಡೇಟಾ ಪ್ಯಾಕ್ ಬಳಕೆದಾರರು - ರೂ. 198, ರೂ. 398, ರೂ. 448 ಹಾಗೂ ರೂ. 498 ಪ್ಲಾನುಗಳಲ್ಲಿ ಇದೀಗ ಪ್ರತಿದಿನ 3.5 ಜಿಬಿ ಡೇಟಾ ಪಡೆಯಲಿದ್ದಾರೆ.

3. ಪ್ರತಿದಿನ 3 ಜಿಬಿ ಡೇಟಾ ಪ್ಯಾಕ್ ಬಳಕೆದಾರರು - ರೂ. 299 ಪ್ಲಾನಿನಲ್ಲಿ ಇದೀಗ ಪ್ರತಿದಿನ 4.5 ಜಿಬಿ ಡೇಟಾ ಪಡೆಯಲಿದ್ದಾರೆ.

4. ಪ್ರತಿದಿನ 4 ಜಿಬಿ ಡೇಟಾ ಪ್ಯಾಕ್ ಬಳಕೆದಾರರು - ರೂ. 509 ಪ್ಲಾನಿನಲ್ಲಿ ಇದೀಗ ಪ್ರತಿದಿನ 5.5 ಜಿಬಿ ಡೇಟಾ ಪಡೆಯಲಿದ್ದಾರೆ.

5. ಪ್ರತಿದಿನ 5 ಜಿಬಿ ಡೇಟಾ ಪ್ಯಾಕ್ ಬಳಕೆದಾರರು - ರೂ. 799 ಪ್ಲಾನಿನಲ್ಲಿ ಇದೀಗ ಪ್ರತಿದಿನ 6.5 ಜಿಬಿ ಡೇಟಾ ಪಡೆಯಲಿದ್ದಾರೆ.

ಇಷ್ಟೇ ಅಲ್ಲದೆ, ಮೈಜಿಯೋ ಆಪ್ಲಿಕೇಶನ್ ಬಳಸಿ ಫೋನ್‌ಪೇ ಮೂಲಕ ಪಾವತಿಸಲಾದ ರೂ. 300 ಮೇಲ್ಪಟ್ಟ ಎಲ್ಲ ರೀಚಾರ್ಜ್‌ಗಳಿಗೆ ರೂ. 100 ರಿಯಾಯಿತಿಯನ್ನೂ ರೂ. 300ವರೆಗಿನ ರೀಚಾರ್ಜ್‌ಗಳಿಗೆ 20% ರಿಯಾಯಿತಿಯನ್ನೂ ಜಿಯೋ ನೀಡುತ್ತಿದೆ.  

ಇದರೊಡನೆ, ಜಿಯೋ ಗ್ರಾಹಕರು, 28 ದಿನಗಳವರೆಗೆ ಪ್ರತಿದಿನ 3 ಜಿಬಿ ಡೇಟಾ, ಉಚಿತ ಕರೆಗಳು, ಎಸ್ಸೆಮ್ಮೆಸ್ ಹಾಗೂ ಜಿಯೋ ಆಪ್ಸ್ ನೀಡುವ ರೂ. 149 ಪ್ಯಾಕ್ ಅನ್ನು ರೂ. 120 ವಾಸ್ತವಿಕ ಬೆಲೆಗೆ ಪಡೆಯಲಿದ್ದಾರೆ.

84 ದಿನಗಳವರೆಗೆ ಪ್ರತಿದಿನ 3 ಜಿಬಿ ಡೇಟಾ, ಉಚಿತ ಕರೆಗಳು, ಎಸ್ಸೆಮ್ಮೆಸ್ ಹಾಗೂ ಜಿಯೋ ಆಪ್ಸ್ ನೀಡುವ ರೂ. 399 ಪ್ಯಾಕ್'ನ್ನು ರೂ. 299 ವಾಸ್ತವಿಕ ಬೆಲೆಗೆ ಪಡೆಯಲಿದ್ದಾರೆ.

ಈ ಹೆಚ್ಚುವರಿ ಡೇಟಾ ಕೊಡುಗೆಯು ಜೂನ್ 12ರ ಸಂಜೆ 4 ಗಂಟೆಯ ನಂತರ ಪ್ರಾರಂಭವಾಗಿ ಜೂನ್ 30, 2018ರವರೆಗೆ ಲಭ್ಯವಿರಲಿದೆ. 

loader