ನವದೆಹಲಿ[ಜು.20]: ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದ ರಿಲಯನ್ಸ್‌ ಜಿಯೋ ಬಳಕೆದಾರರ ಸಂಖ್ಯೆ ಇದೀಗ 32 ಕೋಟಿಗೂ ಅಧಿಕಗೊಂಡಿದೆ. ಈ ಮೂಲಕ ಏರ್‌ಟೆಲ್‌ ಅನ್ನು ಹಿಂದಿಕ್ಕಿ ದೇಶದ ಎರಡನೇ ಅತಿದೊಡ್ಡ ನೆಟ್‌ವರ್ಕ್ ಆಗಿ ಹೊರಹೊಮ್ಮಿದೆ.

ಟೆಲಿಕಾಂ ಕ್ಷೇತ್ರಕ್ಕೆ ಕಾಲಿಟ್ಟು ಅತ್ಯಾಕರ್ಷಕ ಕೊಡುಗೆಗಳನ್ನು ನೀಡುವ ಮೂಲಕ ರಿಲಯನ್ಸ್‌ ಜಿಯೋ ಕೆಲವೇ ವರ್ಷಗಳಲ್ಲಿ ದೇಶಾದ್ಯಂತ 32.29 ಕೋಟಿ ಗ್ರಾಹಕರನ್ನು ತನ್ನದಾಗಿಸಿಕೊಂಡಿದೆ. 1995ರ ರಿಂದ ಸೇವೆ ಆರಂಭಿಸಿದ್ದ ಭಾರತೀ ಏರ್‌ಟೆಲ್‌ ಪ್ರಸ್ತುತ 32.03 ಕೋಟಿ ಗ್ರಾಹಕರನ್ನು ಹೊಂದುವ ಮೂಲಕ ಮೂರನೇ ಸ್ಥಾನಕ್ಕೆ ಕುಸಿದಿದೆ.

ಕಳೆದ ವರ್ಷ ವೊಡಾಫೋನ್‌ ಮತ್ತು ಐಡಿಯಾ ಕಂಪನಿಗಳು ವಿಲೀನಗೊಂಡು 38.75 ಕೋಟಿ ಗ್ರಾಹಕರನ್ನು ಹೊಂದುವ ಮೂಲಕ ದೇಶದ ನಂ.1 ಟೆಲಿಕಾಂ ನೆಟ್‌ವರ್ಕ್ ಎಂದೆನಿಸಿಕೊಂಡಿದೆ.