ಚಾತಕಪಕ್ಷಿಯಂತೆ ಕಾಯ್ತಿದ್ದೀರಾ? ಅಂತೂ ಇಂತೂ Redmi Note 7 ಡೇಟ್ ಬಂತು!
ಜನವರಿಯಲ್ಲಿ ಚೀನಾದಲ್ಲಿ ಬಿಡುಗಡೆಯಾಗಿದ್ದ Redmi Note 7 ಸ್ಮಾರ್ಟ್ ಫೋನ್ | ಕ್ಯಾಮೆರಾ ಕಾರಣದಿಂದ ಭಾರೀ ಸಂಚಲನ ಮೂಡಿಸಿರುವ Note 7 | ಭಾರತದಲ್ಲಿ ಬಿಡುಗಡೆ ದಿನಾಂಕ ಫಿಕ್ಸ್
ಅಗ್ಗದ ಹಾಗೂ ಉತ್ತಮ ಗುಣಮಟ್ಟದ ಕಾರಣದಿಂದ ಸ್ಮಾರ್ಟ್‌ಫೋನ್ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿರುವ Xiaomi ಕಳೆದ ತಿಂಗಳು ಚೀನಾದಲ್ಲಿ Redmi Note 7 ಫೋನನ್ನು ಮಾರುಕಟ್ಟೆಗೆ ಬಿಡುಗಡೆಮಾಡಿದ್ದು ನಿಮಗೆ ತಿಳಿದಿರುವ ವಿಚಾರ. ಆದರೆ, ಭಾರತದಲ್ಲಿ ಯಾವಾಗ?.. ಯಾವಾಗ? ಎಂದು ಮೊಬೈಲ್ ಪ್ರಿಯರು ಕಳೆದೊಂದು ತಿಂಗಳಿನಿಂದ ಕೇಳ್ತಾನೇ ಇದ್ದಾರೆ.
ಹೌದು, ಈಗ ಮೊಬೈಲ್ ಪ್ರಿಯರ ಕಾಯುವಿಕೆಗೆ ಬ್ರೇಕ್ ಹಾಕುವಂತಹ ಸುದ್ದಿಯನ್ನು ಕಂಪನಿ ನೀಡಿದೆ. ಫೆ.28ಕ್ಕೆ Redmi Note 7 ಫೋನ್ ಭಾರತದಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಗೂಗಲ್‌ನಲ್ಲಿ ಬೆಸ್ಟ್ ಟಾಯ್ಲೆಟ್ ಪೇಪರ್ ಹುಡುಕಿದರೆ ಸಿಗೋದು ಪಾಕ್ ಧ್ವಜ!
ಹೊಸ ಮಾದರಿ ಫೋನ್ ಹಾಗೂ ಹೊಸ ಫೀಚರ್‌ಗಳನ್ನು ಒದಗಿಸುವ Xiaomi, Redmi Note 7ನಲ್ಲೂ ಅತ್ಯಾಧುನಿಕ ಫೀಚರ್‌ಗಳನ್ನು ನೀಡಿದೆ. 48 ಮೆಗಾಪಿಕ್ಸೆಲ್ ಕ್ಯಾಮೆರಾ Redmi Note 7ನ ಪ್ರಮುಖ ಆಕರ್ಷಣೆ. ಹಿಂಬದಿ ಇನ್ನೊಂದು ಕ್ಯಾಮೆರಾ 5 ಮೆಗಾ ಪಿಕ್ಸೆಲ್ ಇದ್ದು, ಮುಂದಿನ ಕ್ಯಾಮೆರ 13 ಮೆಗಾಪಿಕ್ಸೆಲ್ ಸಾಮರ್ಥ್ಯದ್ದಾಗಿದೆ.
ಇದನ್ನೂ ಓದಿ: ಜನಪ್ರಿಯ ಟಿಕ್ ಟಾಕ್ ಆ್ಯಪ್ ಬ್ಯಾನ್ ?
6.3 ಇಂಚು ಪರದೆ, 19.5:9 ಆ್ಯಸ್ಪೆಕ್ಟ್ ರೇಶ್ಯೋ, ಕ್ವಾಲ್‌ಕಾಮ್ ಸ್ನ್ಯಾಪ್ ಡ್ರಾಗನ್ 660 ಪ್ರೊಸೆಸರ್, 3GB, 4GB, 6GB RAM ಹೊಂದಿದೆ. 32GB ಹಾಗೂ 64GB ಸ್ಟೋರೆಜ್ ಸಾಮರ್ಥ್ಯವಿರುವ Redmi Note 7ನ್ನು 256GB ವರೆಗೆ ವಿಸ್ತರಿಸಬಹುದು.
ಬೆಲೆ ಎಷ್ಟು?
ಈಗ ಲಭ್ಯವಾಗಿರುವ ಮಾಹಿತಿ ಪ್ರಕಾರ, ನವದೆಹಲಿಯಲ್ಲಿ ನಡೆಯಲಿರುವ ಲಾಂಚ್ ಈವೆಂಟ್ ನಲ್ಲಿ 3GB/ 32GB ಆವೃತ್ತಿಯ ಬೆಲೆ ₹9,999 ಯಾಗಿರಬಹುದು ಎಂದು ಅಂದಾಜಿಸಲಾಗಿದೆ.