Asianet Suvarna News Asianet Suvarna News

ಬೆಸ್ಟ್ ಟಾಯ್ಲೆಟ್ ಪೇಪರ್ ಅಂತ ಗೂಗಲ್‌ನಲ್ಲಿ ಹೊಡೀರಿ.. ಏನ್ ಬರುತ್ತೆ ನೋಡಿ!

  • ಪುಲ್ವಾಮ ಭಯೋತ್ಪಾದಕ ದಾಳಿ ಬೆನ್ನಲ್ಲಿ ಗೂಗಲ್‌ನಲ್ಲಿ ಆಶ್ಚರ್ಯಕಾರಿ ಬೆಳವಣಿಗೆ!
  • Best Toilet Paper In The World ಹೊಡೀರಿ, ಮಜಾ ನೋಡಿ!
Image Search in Google shows Pakistan Flag for Best Toilet Paper in the World
Author
Bengaluru, First Published Feb 16, 2019, 7:12 PM IST

ಜಗತ್ತಿನ ಬೆಸ್ಟ್ ಟಾಯ್ಲೆಟ್ ಪೇಪರ್ ಯಾವುದು ಅಂತ ಗೂಗಲ್‌ನಲ್ಲಿ ಇಮೇಜ್ ಸರ್ಚ್ ಮಾಡಿದಾಗ ಯಾವುದಾದರೂ ಟಾಯ್ಲೆಟ್ ಪೇಪರ್ ಕಂಪನಿಯ ಫೋಟೋ, ಜಾಹೀರಾತು ಬರುತ್ತೆ ಎಂದು ನೀವು ಭಾವಿಸಿದರೆ ತಪ್ಪಾದೀತು!

ಹೌದು, ಕಳೆದ 2 ದಿನಗಳಿಂದ Best Toilet Paper In the World (ಜಗತ್ತಿನ ಬೆಸ್ಟ್ ಟಾಯ್ಲೆಟ್ ಪೇಪರ್ ) ಎಂದು ಗೂಗಲ್‌ನಲ್ಲಿ ಹುಡುಕಿದರೆ ನಿಮ್ಮ ಸ್ಕ್ರೀನ್‌ನಲ್ಲಿ ಕಾಣಸಿಗುವುದು ಪಾಕಿಸ್ತಾನದ ಧ್ವಜ!

ಪಾಕಿಸ್ತಾನ ಬೆಂಬಲಿತ ಉಗ್ರ ಸಂಘಟನೆಯು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ  44 ಯೋಧರನ್ನು ಬಲಿ ಪಡೆದ ಬೆನ್ನಲ್ಲೇ ಈ ಬೆಳವಣಿಗೆ ಘಟಿಸಿದೆ.

ದಾಳಿಯ ಹಿನ್ನೆಲೆಯಲ್ಲಿ ಭಾರತ ಹಾಗೂ ಜಗತ್ತಿನಾದ್ಯಂತ ಪಾಕಿಸ್ತಾನದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ನೆಟಿಜನ್ ಗಳು ಈ ಮೂಲಕ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ.

 

ಈ ಹಿಂದೆ, ಈಡಿಯಟ್ (idiot) ಎಂದು ಗೂಗಲ್‌ನಲ್ಲಿ ಇಮೇಜ್ ಸರ್ಚ್ ಮಾಡಿದಾಗ ಡೊನಾಲ್ಡ್‌ ಟ್ರಂಪ್ ಫೋಟೋ ತೋರಿಸಿರುವುದು ವಿವಾದಕ್ಕೆ ಕಾರಣವಾಗಿತ್ತು.  

Follow Us:
Download App:
  • android
  • ios