ಮಧ್ಯಮ ವರ್ಗದ ಹಾಟ್ ಫೇವರಿಟ್ Redmiಯಿಂದ 2 ಹೊಸ ಫೋನ್!
ರೆಡ್‌ಮಿ ಫೋನ್ ಬಿಡುಗಡೆ ಮಾಡಿದೆ ಅಂದ್ರೆ ಮೊಬೈಲ್ ಪ್ರಿಯರು ಖುಷಿ ಪಡದೇ ಇರಲ್ಲ. ಬಹುನಿರೀಕ್ಷಿತ Redmi K20, K20 Pro ರಿಲೀಸ್ ಆಗಿವೆ. ಇಲ್ಲಿದೆ ಹೆಚ್ಚಿನ ವಿವರ
ಮಧ್ಯಮ ವರ್ಗದ ಹಾಟ್ ಫೇವರಿಟ್ ಆಗಿರುವ ಕೆಲವು ಮೊಬೈಲ್ ಕಂಪನಿಗಳ ಪೈಕಿ Redmi ಕೂಡ ಒಂದು. Redmi ಈಗ Redmi K20 ಮತ್ತು Redmi K20 Pro ಎಂಬ ಎರಡು ಮೊಬೈಲ್ ಬಿಡುಗಡೆ ಮಾಡಿದೆ. ಫ್ಲಿಪ್‌ಕಾರ್ಟ್ ಮತ್ತು ಎಮ್‌ಐ ವೆಬ್‌ಸೈಟಿನಲ್ಲಿ ಮಾರಾಟಕ್ಕೆ ಲಭ್ಯವಿದೆ.
Redmi K20 Pro
20 ಮೆಗಾ ಪಿಕ್ಸೆಲ್‌ನ ಪಾಪ್-ಅಪ್ ಕ್ಯಾಮೆರಾ ಇದರ ಪ್ಲಸ್ ಪಾಯಿಂಟು. ಉಳಿದಂತೆ ಕ್ರಮವಾಗಿ 48 ಮೆಗಾ ಪಿಕ್ಸೆಲ್, 13 ಎಂಪಿ ಮತ್ತು 8 ಮೆಗಾ ಪಿಕ್ಸೆಲ್‌ನ ಮೂರು ರೇರ್ ಕ್ಯಾಮೆರಾಗಳಿವೆ. 6.39 ಇಂಚಿನ ಡಿಸ್‌ಪ್ಲೇ ಹೊಂದಿರುವ ಈ ಮೊಬೈಲ್ 4000 ಎಂಎಎಚ್ ಬ್ಯಾಟರಿ, ಆಕ್ಟಾಕೋರ್ ಕ್ವಾಲ್‌ಕಮ್ ಸ್ನಾಪ್‌ಡ್ರಾಗನ್ 855 ಪ್ರೊಸೆಸರ್ ಹೊಂದಿದೆ. ಇನ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಇದರ ವಿಶೇಷತೆ. 6 ಜಿಬಿ RAM, 128 ಜಿಬಿ ಸ್ಟೋರೇಜ್‌ನ K20 ಪ್ರೋ ಬೆಲೆ ರು.27,999. 8 ಜಿಬಿ RAM, 256 ಜಿಬಿ ಸ್ಟೋರೇಜ್. K20 ಪ್ರೋ ಬೆಲೆ ರು.31,999.
Redmi K20
K20 ಪ್ರೋನಲ್ಲಿರುವ ಬಹುತೇಕ ಫೀಚರ್‌ಗಳು ಇದರಲ್ಲೂ ಇವೆ. ಆದರೆ ಇದು ಆಕ್ಟಾಕೋರ್ ಕ್ವಾಲ್‌ಕಮ್ ಸ್ನಾಪ್‌ಡ್ರಾಗನ್ 730 ಪ್ರೊಸೆಸರ್ ಹೊಂದಿದೆ. ಉಳಿದಂತೆ ಕ್ಯಾಮೆರಾ, ಬ್ಯಾಟರಿ ಸಾಮರ್ಥ್ಯ ಒಂದೇ. 6 ಜಿಬಿ ರಾರಯಮ್, 64 ಜಿಬಿ ಸ್ಟೋರೇಜ್ ಕೆ20 ಬೆಲೆ ರು.21,999. 6 ಜಿಬಿ ರಾರಯಮ್, 128 ಜಿಬಿ ಸ್ಟೋರೇಜ್ K20 ಬೆಲೆ ರು.23,999.