ಮನೆಯಲ್ಲಿ ಟೇಬಲ್ ಮೇಲೆ ಚಾರ್ಜ್‌ಗಿಟ್ಟ ರೆಡ್ಮಿ 4ಎ ಮೊಬೈಲ್ ಸ್ಫೋಟಗೊಂಡಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಗದಗ: ಮನೆಯಲ್ಲಿ ಟೇಬಲ್ ಮೇಲೆ ಚಾರ್ಜ್‌ಗಿಟ್ಟಿದ್ದ ಮೊಬೈಲ್ ಬ್ಲಾಸ್ಟ್ ಆಗಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನ ಯೆರೆಬೇಲೇರಿ ಗ್ರಾಮದಲ್ಲಿ ಸಂಭವಿಸಿದೆ.

ವೀರೇಶ ಹಿರೇಮಠ ಎಂಬುವವರಿಗೆ ಸೇರಿರುವ ಮೊಬೈಲ್ ಸ್ಫೋಟಗೊಂಡಿದ್ದು, ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. 

ಕಳೆದ ವರ್ಷ ಬೈಕ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿಯ ಜೇಬಿನಲ್ಲಿದ್ದ ಮೈಕ್ರೋಮ್ಯಾಕ್ಸ್ ಮೊಬೈಲ್ ಬ್ಲ್ಯಾಸ್ಟ್ ಆಗಿರುವುದ ಸೇರಿ, ಇಂಥದ್ದೆ ಹಲವು ಘಟನೆಗಳು ವರದಿಯಾಗಿದ್ದವು. ಸ್ಯಾಮ್ಸ್‌ಸಂಗ್ ಮೊಬೈಲ್‌ನಲ್ಲಿಯೂ ದೋಷ ಕಂಡು ಬಂದಿದ್ದು, ಕಂಪನಿ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿತ್ತು.