ಸಮುದ್ರದಿಂದ ಪ್ಲ್ಯಾಸ್ಟಿಕ್ ತೆಗೆಯಬಲ್ಲ ಹಡಗಿನ ಡಿಸೈನ್ ರಚಿಸಿದ 12ರ ಪೋರ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 23, Jan 2019, 5:15 PM IST
Pune Boy  Designs Ship To Remove Plastic From Ocean
Highlights

ಭಾರತದ ವಿದ್ವತ್ತಿಗೆ ಸರಿಸಾಟಿ ಇದೆಯೇನಣ್ಣ?| ವಿಶ್ವಕ್ಕೆ ದಾರಿದೀಪವಾಗಬಲ್ಲದು ಭಾರತದ ಜ್ಞಾನ ಸಂಪತ್ತು| ಮಕ್ಕಳ ಜ್ಞಾನ ಜಗತ್ತು ಕೆದಕಿದಷ್ಟು ಸಿಗುವ ವಿಸ್ಮಯ| ಸಮುದ್ರದಿಂದ ಪ್ಲ್ಯಾಸ್ಟಿಕ್ ತೆಗೆಯಬಲ್ಲ ಹಡಗಿನ ಡಿಸೈನ್ ರಚಿಸಿದ 12ರ ಪೋರ| ಪುಣೆಯ ಹಾಜಿಕ್ ಖಾಜ್ವಿ ಅನ್ವೇಷಣೆಗೆ ಜಗತ್ತಿನ ನಮನ

ಪುಣೆ(ಜ.23): ಭಾರತದ ವಿದ್ವತ್ತು ವಿಶ್ವಕ್ಕೆ ದಾರಿದೀಪ ಅನ್ನೋದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಚಿಕ್ಕ ಮಕ್ಕಳ ಜ್ಞಾನ ಜಗತ್ತನ್ನು ಕೆದಕಿದರೆ ಹಲವು ವಿಸ್ಮಯಗಳು, ಮಾನವ ಹಿಂದೆಂದೂ ಕಂಡು ಕೇಳರಿಯದ ಅನ್ವೇಷಣೆಗಳು ದೊರೆಯುತ್ತಾ ಹೋಗುತ್ತವೆ.

ಅದರಂತೆ ಪುಣೆಯ 12ರ ಪೋರನೊಬ್ಬ ಜಲಚರ ಜೀವಿಗಳಿಗೆ ಮಾರಕವಾಗಿರುವ ಪ್ಲ್ಯಾಸ್ಟಿಕ್ ತ್ಯಾಜ್ಯವನ್ನು ಸಮುದ್ರದಿಂದ ತೆಗೆಯಬಲ್ಲ ವಿನೂತನ ಹಡಗಿನ ಡಿಸೈನ್ ರಚಿಸಿದ್ದಾನೆ.

ಇಲ್ಲಿನ ಹಾಜಿಕ್ ಖಾಜಿ ಎಂಬ12 ವರ್ಷದ ಬಾಲಕ ಎರ್ವಿಸ್ ಎಂಬ ಹಡಗಿನ ಡಿಸೈನ್ ರಚಿಸಿದ್ದು, ಇದು ಸಮುದ್ರದಿಂದ ಪ್ಲ್ಯಾಸ್ಟಿಕ್ ತ್ಯಾಜ್ಯವನ್ನು ತೆಗೆಯಬಲ್ಲ ಸಾಮರ್ಥ್ಯವನ್ನು ಹೊಂದಿದೆ.

ಎರ್ವಿಸ್ ಹಡಗಿನ ಮೂಲಕ ಸಮುದ್ರದ ಆಳದಿಂದ ನೀರನ್ನು ಮೇಲೆತ್ತಿ ನಂತರ ಅದರಿಂದ ಜಲಚರಗಳನ್ನು ಮತ್ತು ಪ್ಲ್ಯಾಸ್ಟಿಕ್ ತ್ಯಾಜ್ಯವನ್ನು ಬೇರ್ಪಡಿಸಲಾಗುವುದು. ನಂತರ ಜಲಚರಗಳನ್ನು ನೀರಿನ ಸಮೇತ ಮತ್ತೆ ಸಮುದ್ರಕ್ಕೆ ಮರಳಿ ಬಿಡುವ ತಂತ್ರಜ್ಞಾನವನ್ನು ಈ ಹಡಗು ಒಳಗೊಂಡಿದೆ.

ಆ ಬಳಿಕ 5 ಹಂತಗಳಲ್ಲಿ ಪ್ಲ್ಯಾಸ್ಟಿಕ್ ತ್ಯಾಜ್ಯವನ್ನು ಸಂಸ್ಕರಿಸಿ ಅದನ್ನು ಸಂಪೂರ್ಣವಾಗಿ ಕ್ರಶ್ ಮಾಡುವ ವಿಧಾನವನ್ನು ಖಾಜಿ ಕಂಡು ಹಿಡಿದಿದ್ದಾನೆ. ಇನ್ನು 12 ವರ್ಷದ ಪೋರನ ಈ ಆವಿಷ್ಕಾರಕ್ಕೆ ಜಗತ್ತಿನ ಹಲವು ಭಾಗಗಳಿಂದ ಪ್ರಶಂಸೆ ವ್ಯಕ್ತವಾಗಿದೆ.

loader