ಪಿಎಸ್‌ಎಲ್‌ವಿ- ಸಿ44 ರಾಕೆಟ್ ಮೂಲಕ ಮಿಲಿಟರಿ ಉಪಯೋಗಕ್ಕಾಗಿ ನಿರ್ಮಿಸಲಾದ ಮೈಕ್ರೋಸ್ಯಾಟ್ ಹಾಗೂ ವಿದ್ಯಾರ್ಥಿಗಳು ನಿರ್ಮಿಸಿರುವ ಆರ್ ಕಲಾಂ ಸ್ಯಾಟ್ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವಲ್ಲಿ ಇಸ್ರೋ ಯಶಸ್ವಿಯಾಗಿದೆ.
ಶ್ರೀಹರಿಕೋಟಾ(ಜ.25): ಬಾಹ್ಯಾಕಾಶ ಕ್ಷೇತ್ರದಲ್ಲಿ ಹಂತ ಹಂತವಾಗಿ ಸಾಧನೆಯ ಮೆಟ್ಟಿಲುಗಳನ್ನು ಏರುತ್ತಿರುವ ಇಸ್ರೋ, ಇದೀಗ ಮತ್ತೊಂದು ಗರಿಯನ್ನು ಮುಡಿಗೇರಿಸಿಕೊಂಡಿದೆ.
ಪಿಎಸ್‌ಎಲ್‌ವಿ- ಸಿ44 ರಾಕೆಟ್ ಮೂಲಕ ಮಿಲಿಟರಿ ಉಪಯೋಗಕ್ಕಾಗಿ ನಿರ್ಮಿಸಲಾದ ಮೈಕ್ರೋಸ್ಯಾಟ್ ಹಾಗೂ ವಿದ್ಯಾರ್ಥಿಗಳು ನಿರ್ಮಿಸಿರುವ ಆರ್ ಕಲಾಂ ಸ್ಯಾಟ್ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವಲ್ಲಿ ಇಸ್ರೋ ಯಶಸ್ವಿಯಾಗಿದೆ.
Andhra Pradesh: #ISRO launches #PSLVC44 mission, carrying #Kalamsat and #MicrosatR from Satish Dhawan Space Centre, Sriharikota. pic.twitter.com/yBI7xlKARK
— ANI (@ANI) January 24, 2019
ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಗುರುವಾರ ರಾತ್ರಿ 11-37 ರ ವೇಳೆಗೆ ಪಿಎಸ್‌ಎಲ್‌ವಿ- ಸಿ44 ಯಶಸ್ವಿಯಾಗಿ ನಭಕ್ಕೆ ಚಿಮ್ಮಿತು. ಇನ್ನು ಈ ಯಶಸ್ವಿ ಉಡಾವಣೆ ಮೂಲಕ ಇಸ್ರೋ ಮತ್ತೊಂದು ಸಾಧನೆ ಮಾಡಿದ್ದು, ಇದೇ ಮೊದಲ ಬಾರಿಗೆ ಉಪಗ್ರಹಗಳನ್ನು ಅತ್ಯಂತ ಎತ್ತರದ ಕಕ್ಷೆಗೆ ಸೇರಿಸಲಾಗಿದೆ.
ಪಿಎಸ್‌ಎಲ್‌ವಿ- ಸಿ44 ರಾಕೆಟ್ 740 ಕೆಜಿ ತೂಕದ ಮೈಕ್ರೋಸ್ಯಾಟ್ -ಆರ್ ಉಪಗ್ರಹವನ್ನು 13 ನಿಮಿಷ ಮತ್ತು 30 ಸೆಕೆಂಡ್ ಗಳಲ್ಲಿ ಕಕ್ಷೆಗೆ ಸೇರಿಸಿತು. ಇದು ಕಕ್ಷೆ ಸೇರುತ್ತಿದ್ದಂತೆ ನಿಯಂತ್ರಣ ಸೆಂಟರ್‌ನಲ್ಲಿದ್ದ ಇಸ್ರೋ ವಿಜ್ಞಾನಿಗಳು ಸಂಭ್ರಮದಿಂದ ಕುಪ್ಪಳಿಸಿದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 25, 2019, 12:14 PM IST