Realme 3i: ಅಗ್ಗದ ಮೊಬೈಲ್ ನೋಡುವವರಿಗೆ ಚೆಂದದ ಫೋನ್!

ಕಡಿಮೆ ಬೆಲೆ ಮೊಬೈಲ್ ನೋಡುವವರಿಗೆ ಮತ್ತೊಂದು ಆಯ್ಕೆ Realme 3i | 3 GB RAM, 32 GB ಸ್ಟೋರೇಜ್ ಹೊಂದಿರುವ Realme 3i ಮೊಬೈಲ್ | ಫೀಚರ್ಸ್, ಬೆಲೆ ಇನ್ನಿತರ ಮಾಹಿತಿ  ಇಲ್ಲಿದೆ

Pocket Friendly Realme 3i Smartphone Launched Price Features

ಬೆಂಗಳೂರು (ಜು.16): Realme ಗೆದ್ದಿದ್ದೇ ಮಧ್ಯಮ ವರ್ಗದವರಿಂದಾಗಿ. ಸ್ವಲ್ಪ ರೀಸನೇಬಲ್ ಬೆಲೆ ಅಂತನ್ನಿಸುವ ಹಾಗೆ ಬೆಲೆ ನಿಗದಿ ಮಾಡಿ ಆಕರ್ಷಕ ಮೊಬೈಲನ್ನು ಕೊಟ್ಟ ಫಲವಾಗಿಯೇ ಅತಿ ಕಡಿಮೆ ಅವಧಿಯಲ್ಲಿ ಸ್ವಲ್ಪ ಜಾಸ್ತಿ ಜನರ ಗಮನವನ್ನು ಸೆಳೆದಿದೆ. ಈಗ Realme ಕಡಿಮೆ ಬೆಲೆ ಮೊಬೈಲ್ ಬತ್ತಳಿಕೆಗೆ ಮತ್ತೊಂದು ಬಾಣ ಸೇರಿಕೊಂಡಿದೆ. ಅದರ ಹೆಸರೇ Realme 3i.

ತಮ್ಮ ಬಹುನಿರೀಕ್ಷಿತ Realme X ಮೊಬೈಲ್ ಜತೆಯಲ್ಲೇ ಕಂಪನಿ Realme 3i ಮೊಬೈಲ್ ಅನ್ನೂ  ದೇಶಕ್ಕೆ ಅರ್ಪಿಸಿದೆ. 3 GB RAM, 32 GB ಸ್ಟೋರೇಜ್ ಹೊಂದಿರುವ Realme 3i ಮೊಬೈಲ್ ಬೆಲೆ ರು. 7999. 4 GB RAM, 64 GB ಸ್ಟೋರೇಜ್ ಹೊಂದಿರುವ ಮೊಬೈಲ್ ಬೆಲೆ ರು. 9999.

Realme 3i ವಿಶೇಷ: 

ಈಗೀಗ ಸ್ಮಾರ್ಟ್ ಫೋನುಗಳ ಶ್ರೇಷ್ಠತೆ ಅಳೆಯುವುದು ಅದರಲ್ಲಿ ಎಷ್ಟು ಹೊತ್ತು ಚಾರ್ಜ್ ಉಳಿಯುತ್ತದೆ ಅನ್ನುವುದರ ಮೇಲೆ. ಅದಕ್ಕೆ Realme ಒಂದೊಳ್ಳೆ ಐಡಿಯಾ ಮಾಡಿದೆ. Realme 3iನಲ್ಲಿ 4230 mAh ಸಾಮರ್ಥ್ಯದ ಅಲ್ಟ್ರಾ ಲಾರ್ಜ್ ಬ್ಯಾಟರಿ ಇಟ್ಟುಬಿಟ್ಟಿದೆ. ಹಾಗಾಗಿ ಇದರಲ್ಲಿ ಜಾಸ್ತಿ ಸಮಯ ಚಾರ್ಜು ಉಳಿಯಲಿದೆ.

ಇದನ್ನೂ ಓದಿ | Realme X ಮಾಸ್ಟರ್ ಎಡಿಷನ್‌ಗೆ ಈರುಳ್ಳಿ, ಬೆಳ್ಳುಳ್ಳಿಯೇ ಸ್ಫೂರ್ತಿ!

13 ಎಂಪಿ ಮತ್ತು 2 ಎಂಪಿ ರೇರ್ ಕ್ಯಾಮೆರಾ ಇದೆ. ಬೇರೆ ಬೇರೆ ಫೋಟೋಗ್ರಫಿ ಮೋಡ್ ಗಳಿರುವುದರಿಂದ ಒಳ್ಳೆಯ ಫೋಟೋ ತೆಗೆಯಬಹುದು. ಇಂಟರೆಸ್ಟಿಂಗ್ ಅಂದ್ರೆ ಇದರ ಫ್ರಂಟ್ ಕ್ಯಾಮೆರಾ ಕೂಡ 13 ಮೆಗಾ ಪಿಕ್ಸೆಲ್. 

ಜುಲೈ 23ರಿಂದ ಮಾರಾಟ:
Realme 3i ಜುಲೈ 23ರ ಮಧ್ಯಾಹ್ನ 12 ಗಂಟೆಯಿಂದ ಫ್ಲಿಪ್ ಕಾರ್ಟ್ ಮತ್ತು Realme  ವೆಬ್ ಸೈಟಿನಲ್ಲಿ ಮಾರಾಟಕ್ಕೆ ಲಭ್ಯ. ಮೂರು ಆಕರ್ಷಕ ಬಣ್ಣಗಳಲ್ಲಿ ಈ ಮೊಬೈಲ್ ಲಭ್ಯವಿದೆ. 

Latest Videos
Follow Us:
Download App:
  • android
  • ios