ಸುನಿತಾ ವಿಲಿಯಮ್ಸ್​ಗೆ ಪ್ರಧಾನಿ ಮೋದಿ ಆಹ್ವಾನ: ಸಮೋಸಾ ಪಾರ್ಟಿಗೆ ಕುಟುಂಬಸ್ಥರ ಸಿದ್ಧತೆ! ಏನಿದು ಸ್ಟೋರಿ?

9 ತಿಂಗಳ ಬಳಿಕ ಭಾರತಕ್ಕೆ ಮರಳಿರುವ ಗಗನಯಾತ್ರಿ ಸುನಿತಾ ವಿಲಿಯಮ್ಸ್​ ಅವರಿಗೆ ಪ್ರಧಾನಿ ನರೇಂದ್ರ  ಮೋದಿ ಆಹ್ವಾನಿಸಿದ್ದಾರೆ. ಇದೇ ವೇಳೆ ಸುನಿತಾ ಕುಟುಂಬಸ್ಥರು ಸಮೋಸಾ ಪಾರ್ಟಿಗೆ ಚಿಂತನೆ ನಡೆಸಿದ್ದಾರೆ.  
 

PM Modi wrote letter to Sunita Williams to visit India and her family preparing for Samosa party suc

ಕಳೆದ 9 ತಿಂಗಳಿನಿಂದ ಬಾಹ್ಯಾಕಾಶದಲ್ಲಿ ಸಿಲುಕಿದ್ದ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್​ ಮತ್ತು ಬುಚ್​ ವಿಲ್ಮೋರ್​ ಭೂಮಿಗೆ ಕ್ಷೇಮದಿಂದ ಮರಳಿದ್ದಾರೆ. ಅತ್ತ ಅಮೆರಿಕದಲ್ಲಿ ಖುಷಿ ಮನೆಮಾಡಿದ್ದರೆ, ಭಾರತದ ಮೂಲದ ಸುನಿತಾ ಅವರ ಮರಳುವಿಕೆಗೆ ಭಾರತೀಯರು ಖುಷಿ ಪಡುತ್ತಿದ್ದಾರೆ. ಇದಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಸುನಿತಾ ಅವರನ್ನು ಭಾರತಕ್ಕೆ ಆಹ್ವಾನಿಸಿದ್ದಾರೆ. ಪತ್ರ ಮುಖೇನ ಗಗನಯಾತ್ರಿಗಳಿಗೆ ಶುಭಾಶಯ ಕೋರಿರುವ ಪ್ರಧಾನಿ, ಸುನಿತಾ ಅವರನ್ನು ಆಹ್ವಾನಿಸಿದ್ದಾರೆ.  ''ಸುನೀತಾ ವಿಲಿಯಮ್ಸ್ ಅವರ ಆರೋಗ್ಯ, ಕಾರ್ಯಾಚರಣೆ, ಸುರಕ್ಷತೆ ಹಾಗೂ ಭೂಮಿಗೆ ಯಶಸ್ವಿಯಾಗಿ ಮರಳುವ ಬಗ್ಗೆ ಭಾರತದ ಜನರು ಪ್ರಾರ್ಥಿಸಿದ್ದಾರೆ. ಆ ಜನರ ಪರವಾಗಿ ನಿಮಗೆ ಶುಭಾಶಯ ಕೋರುತ್ತೇನೆ'' ಎಂದಿದ್ದಾರೆ. ಭೂಮಿ ಹಿಂದಿರುಗಿದ ನಿಮ್ಮನ್ನು ಕಾಣಲು ಇಡಿ ಭಾರತವೇ ಕಾತದಿಂದ ಕಾಯುತ್ತಿದೆ. ಭಾರತೀಯ ಸಾಧಕಿ, ಹೆಮ್ಮೆಯ ಪುತ್ರಿಯ ಆತಿಥ್ಯ ವಹಿಸಿಕೊಳ್ಳುವುದು ಸಂತೋಷದ ಸಂಗತಿ ಎಂದು ಅವರು ತಿಳಿಸಿದ್ದಾರೆ. ಇದರಿಂದ ಸುನಿತಾ ಭಾರತಕ್ಕೆ ಯಾವಾಗ ಬರುತ್ತಾರೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.

ವಾಸ್ತವವಾಗಿ, ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಜುಲಾಸನ್ ಗ್ರಾಮವು ಸುನಿತಾ ವಿಲಿಯಮ್ಸ್ ಅವರ ಪೂರ್ವಜರ ಗ್ರಾಮವಾಗಿದೆ. ಅವರ ತಂದೆ ಭಾರತದಲ್ಲಿ ನರವಿಜ್ಞಾನಿಯಾದ ನಂತರ ಅಮೆರಿಕದಲ್ಲಿ ನೆಲೆಸಿದರು. ಅವರು ಇಲ್ಲೇ ಹುಟ್ಟಿ ಇಲ್ಲಿಯೇ ಅಧ್ಯಯನ ಮಾಡಿದರು. ವರದಿಗಳ ಪ್ರಕಾರ, ಸುನಿತಾ ವಿಲಿಯಮ್ಸ್ ಮತ್ತು ಅವರ ಪತಿ ಮೈಕೆಲ್ ಜೆ ವಿಲಿಯಮ್ಸ್ ಕೂಡ ಹಿಂದೂ ಪದ್ಧತಿಗಳನ್ನು ಅನುಸರಿಸುತ್ತಾರೆ. ಸುನಿತಾ ವಿಲಿಯಮ್ಸ್ ಮೂರು ಬಾರಿ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ್ದಾರೆ. ಈ ಬಾರಿ ವಿಳಂಬವಾದ್ದರಿಂದ ಅವರ ಜೀವನದ ಬಗ್ಗೆ ಜನರು ಚಿಂತಿತರಾಗಿದ್ದರು. ಅವರು ಜೀವಂತವಾಗಿ ಬರುವುದರ ಬಗ್ಗೆಯೂ ಹಲವಾರು ರೀತಿಯಲ್ಲಿ ಅನುಮಾನಗಳು ಇದ್ದವು. ಇದೀಗ ಅವರ ಸುಖಕರ ಪ್ರಯಾಣಕ್ಕೆ ಎಲ್ಲರೂ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಸುನಿತಾ ವಿಲಿಯಮ್ಸ್ ಜೊತೆಗೆ ಬಾಹ್ಯಾಕಾಶದಲ್ಲಿ ಗಣೇಶನ ವಿಗ್ರಹ, ಭಗವಗ್ದೀತೆ: ಗಗನಯಾತ್ರಿಯ ರೋಚಕ ಪಯಣ...

ಅದೇ ಇನ್ನೊಂದೆಡೆ, ಭಾರತದಲ್ಲಿ ಇರುವ ಸುನಿತಾ ಅವರ ಕುಟುಂಬವು ಕೂಡ ಅವರ ಬರುವಿಕೆಗಾಗಿ ಕಾಯುತ್ತಿದೆ. ಸಮೋಸಾ ಪಾರ್ಟಿ ಮಾಡಲು ಚಿಂತನೆ ನಡೆಸಲಾಗುತ್ತಿದೆ. ಅಷ್ಟಕ್ಕೂ ಬಾಹ್ಯಾಕಾಶಕ್ಕೆ ಗಣೇಶನ ವಿಗ್ರಹ, ಭಗವಗ್ದೀತೆ ಜೊತೆಗೆ ಇದೇ ಮೊದಲ ಬಾರಿಗೆ ಸುನಿತಾ ಅವರು ಸಮೋಸಾ ತೆಗೆದುಕೊಂಡು ಹೋಗಿದ್ದರು. ಆದ್ದರಿಂದ ಸಮೋಸಾ ಪಾರ್ಟಿ ಮಾಡುವುದಾಗಿ ಮನೆಯವರು ಹೇಳುತ್ತಿದ್ದಾರೆ. ಸುನಿತಾ ವಿಲಿಯಮ್ಸ್ ಅವರ ಸೋದರಸಂಬಂಧಿ ಫಲ್ಗುಣಿ ಪಾಂಡ್ಯ NDTV ಗೆ ಸುನಿತಾ ವಿಲಿಯಮ್ಸ್ ಈ ವರ್ಷ ಭಾರತಕ್ಕೆ ಭೇಟಿ ನೀಡಬಹುದು ಎಂದು ಹೇಳಿದ್ದಾರೆ.  ಭೇಟಿ ನೀಡುವ ದಿನಾಂಕವನ್ನು ಪ್ರಸ್ತುತ ನಿಗದಿಪಡಿಸಲಾಗಿಲ್ಲ, ಆದರೆ ಇದೇ ವರ್ಷ ಬರುವ ನಿರೀಕ್ಷೆ ಇದೆ. ಆಕೆಯ  ತಂದೆ ದೀಪಕ್ ಪಾಂಡ್ಯ ಗುಜರಾತ್‌ನವರಾಗಿರುವುದರಿಂದ ಅವರು ಭಾರತದೊಂದಿಗೆ ಆಳವಾದ ಸಂಬಂಧವನ್ನು ಹೊಂದಿದ್ದಾರೆ ಎಂದು ಫಲ್ಗುಣಿ ಹೇಳಿದ್ದಾರೆ.  ಸುನಿತಾ  ಅವರಿಗೆ ಭಾರತ ಮತ್ತು ಭಾರತೀಯರಿಂದ ಅಪಾರ ಪ್ರೀತಿ ಸಿಗುತ್ತಿದ್ದು, ಅವರು ಖಂಡಿತವಾಗಿಯೂ ಭಾರತಕ್ಕೆ ಬರುತ್ತಾರೆ ಎಂದಿದ್ದಾರೆ.  

ನಾಸಾದ ಗಗನಯಾತ್ರಿ ಸುನೀತಾ ವಿಲಿಯಮ್ಸ್ 2006 ರಲ್ಲಿ ತಮ್ಮ ಮೊದಲ ಬಾಹ್ಯಾಕಾಶ ಪ್ರವಾಸ ಮಾಡಿದರು. ಈ ಪ್ರವಾಸದ ಸಮಯದಲ್ಲಿ, ಸುನಿತಾ ಭಾರತೀಯ ಆಹಾರ ಪದಾರ್ಥಗಳಲ್ಲಿ ಸಮೋಸಾವನ್ನು ನಾಸಾದ ಬಾಹ್ಯಾಕಾಶ ಕೇಂದ್ರಕ್ಕೆ ತೆಗೆದುಕೊಂಡು ಹೋಗಿದ್ದರು.  ಜೊತೆಗೆ, ಅವರು  ವಿಶೇಷ ರೀತಿಯಲ್ಲಿ ತಯಾರಿಸಲಾದ ಕೆಲವು ಭಾರತೀಯ ಆಹಾರ ಪದಾರ್ಥಗಳನ್ನೂ ತೆಗೆದುಕೊಂಡು ಹೋಗಿದ್ದರು. ಈ ಘಟನೆ ಭಾರತೀಯರಿಗೆ ವಿಶೇಷವಾಗಿ ಹೆಮ್ಮೆ ತಂದಿದೆ. ಆಕೆಗೆ ಭಾರತೀಯ ಆಹಾರ ತುಂಬಾ ಇಷ್ಟ ಮತ್ತು ಅವಳು ಅದನ್ನು ಹಲವು ಬಾರಿ ಹೇಳಿದ್ದಾರೆ ಎಂದು ಫಲ್ಗುಣಿ ತಿಳಿಸಿದ್ದಾರೆ. ಬಾಹ್ಯಾಕಾಶದಿಂದ ಹಿಂದಿರುಗಿದ ನಂತರ, ಸುನೀತಾ ವಿಲಿಯಮ್ಸ್ ಅವರೊಂದಿಗೆ ರಜಾದಿನಗಳನ್ನು ಕಳೆಯಲು ಯೋಜಿಸುತ್ತಿರುವುದಾಗಿ ಫಲ್ಗುಣಿ ಪಾಂಡ್ಯ ಹೇಳಿದರು. ಸುನಿತಾ  ಬಾಹ್ಯಾಕಾಶದಲ್ಲಿ ಸಮೋಸಾ ತಿಂದಿದ್ದರು, ಆದ್ದರಿಂದ ಈಗ ನಾವು ಅವರಿಗಾಗಿ ಸಮೋಸಾ ಪಾರ್ಟಿಯನ್ನು ಆಯೋಜಿಸುತ್ತೇವೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಸುನಿತಾ, ತಮ್ಮ 59 ನೇ ಹುಟ್ಟುಹಬ್ಬವನ್ನು ಬಾಹ್ಯಾಕಾಶದಲ್ಲಿ ಆಚರಿಸಿಕೊಂಡರು ಮತ್ತು ಈ ಸಂದರ್ಭದಲ್ಲಿ ಅವರ ಸೋದರಸಂಬಂಧಿ ಅವರಿಗೆ ಕಾಜು ಕಟ್ಲಿಯನ್ನು ಕಳುಹಿಸಿದರು ಎಂದಿದ್ದಾರೆ. ಭಾರತೀಯ ಆಹಾರ ಆಕೆಗೆ ತುಂಬಾ ಇಷ್ಟ ಮತ್ತು ಅದಕ್ಕಾಗಿಯೇ ಅವರು ಭಾರತಕ್ಕೆ ಭೇಟಿ ನೀಡುವ ಸಮಯದಲ್ಲಿ ಅನೇಕ ಆಹಾರಗಳನ್ನು ಆನಂದಿಸಲು ಯೋಚಿಸಿದ್ದೇವೆ ಎಂದಿದ್ದಾರೆ.  

ಮೇಲೆ ಹೋಗುವ ಗುಟುಕು ನೀರನ್ನೂ ಹಾರಿಯೇ ಕುಡಿಯಬೇಕು: ಬಾಹ್ಯಾಕಾಶದಿಂದ ಸುನಿತಾ ವಿಲಿಯಮ್ಸ್‌ ವಿಡಿಯೋ ವೈರಲ್‌
 

 
 
 
 
 
 
 
 
 
 
 
 
 
 
 

A post shared by Times Now (@timesnow)

Latest Videos
Follow Us:
Download App:
  • android
  • ios