ಇಳಕಲ್ಲ[ಜು.12]: ಅಂಗಡಿ ಪ್ರಾರಂಭೋತ್ಸವ ಹಿನ್ನೆಲೆ 100 ರು.ಗೆ ಒಂದರಂತೆ ತಲಾ ನೂರು ಜನರಿಗೆ ಮೊಬೈಲ್‌ ಕೊಡುವುದಾಗಿ ಮೊಬೈಲ್‌ ಮಳಿಗೆಯೊಂದು ನೀಡಿದ ಆಫರ್‌ ನೋಡಿ ಸಾವಿರಾರು ಮಂದಿ ಮೊಬೈಲ್‌ ಅಂಗಡಿಗೆ ಮುತ್ತಿಗೆ ಹಾಕಿದ ಘಟನೆ ಗುರುವಾರ ನಡೆದಿದೆ.

ಗ್ರಾಹಕರನ್ನು ಸೆಳೆಯುವ ಸಲುವಾಗಿ ಮಳಿಗೆಯೊಂದು ಪ್ರಾರಂಭೋತ್ಸವ ಹಿನ್ನೆಲೆಯಲ್ಲಿ 100 ರು.ಗೆ 100 ಜನರಿಗೆ ಮೊಬೈಲ್‌ ನೀಡುವುದಾಗಿ ಪ್ರಕಟಿಸಿತ್ತು. ಈ ಹಿನ್ನೆಲೆ ಅಂಗಡಿ ಪ್ರಾರಂಭೋತ್ಸವದ ದಿನವಾದ ಗುರುವಾರ ಮುಂಜಾನೆಯಿಂದಲೇ 2 ಸಾವಿರಕ್ಕೂ ಅಧಿಕ ಮಂದಿ ಅಂಗಡಿ ಮಂದಿ ಸಾಲುಗಟ್ಟಿನಿಂತಿದ್ದರು.

ಏಕಾಏಕಿ ಇಷ್ಟುಮಂದಿ ಸಾಲುಗಟ್ಟಿರುವುದನ್ನು ಕಂಡು ದಂಗಾದ ಅಂಗಡಿ ಮಾಲೀಕರು, ಕೊನೆಗೆ ಪೊಲೀಸರ ನೆರೆವಿನಿಂದ ಅಂಗಡಿ ಉದ್ಘಾಟಿಸಿದರು. ಕೊನೆಗೆ ಸಾಲಿನಲ್ಲಿ ನಿಂತಿದ್ದ 50 ಮಂದಿ ಸ್ತ್ರೀಯರು ಹಾಗೂ 50 ಮಂದಿ ಪುರುಷರು ಸೇರಿದಂತೆ ಒಟ್ಟು 100 ಮಂದಿಗೆ ತಲಾ ಒಂದರಂತೆ .100ಕ್ಕೆ ಮೊಬೈಲ್‌ ವಿತರಿಸಿದರು