ಇಲೆಕ್ಟ್ರಾನಿಕ್ಸ್ ಉತ್ಪನ್ನಗಳಿಗೆ ಹೆಸರುವಾಸಿಯಾಗಿರುವ ಪ್ಯಾನಸೋನಿಕ್ ಕಂಪನಿ, ಹೊಸ ಮಾದರಿಯ ಸ್ಮಾರ್ಟ್‌ಫೋನನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹೇಗಿದೆ ಆ ಫೋನ್? ಏನಿದೆ ಆ ಫೋನಿನಲ್ಲಿ? ಇಲ್ಲಿದೆ ವಿವರ...
ಇಲೆಕ್ಟ್ರಾನಿಕ್ಸ್ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಪ್ಯಾನಸೋನಿಕ್, ಮೊಬೈಲ್ ಮಾರುಕಟ್ಟೆಯಲ್ಲಿ ಹಿಂದೆ ಬಿದ್ದಿಲ್ಲ. ಈಗ ಭಾರತದ ಮಾರುಕಟ್ಟೆಗೆ ಹೊಸ ಸ್ಮಾರ್ಟ್ ಪೋನ್ ಬಿಡುಗಡೆ ಮಾಡಿದೆ.
Eluga Ray 800 ಎಂಬ ಹೊಸ ಮಾದರಿಯ ಸ್ಮಾರ್ಟ್‌ಫೋನನ್ನು ಪ್ಯಾನಸೋನಿಕ್ ಹೊರತಂದಿದೆ. . 4GB RAM ಹಾಗೂ 64GB ROM ನ ಈ ಫೋನ್ ಮೆಟಾಲಿಕ್ ಬಾಡಿ ಹೊಂದಿದ್ದು, 5.5 ಫುಲ್ ಎಚ್‌ಡಿ ಡಿಸ್ಪ್ಲೇ ಇದೆ.
ಇದನ್ನೂ ಓದಿ: ಫೇಸ್‌ಬುಕ್‌ನಲ್ಲಿ ನಿಮ್ಮ ಯಾವ ಮಾಹಿತಿ ಕಳುವಾಗಿದೆ ತಿಳಿಬೇಕಾ?
13 ಮೆಗಾ ಪಿಕ್ಸೆಲ್ ಅಟೋ ಫೋಕಸ್ ರಿಯರ್ ಕ್ಯಾಮೆರಾ ಹಾಗೂ 8 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಈ Eluga Ray 800 ಫೋನ್ ಹೊಂದಿದೆ. ಫ್ರಂಟ್ ಕ್ಯಾಮೆರಾದಲ್ಲಿ ಫ್ಲ್ಯಾಶ್ ಇರುವ ಕಾರಣ ಫೋಟೋಗಳು ಮಂಕಾಗಲ್ಲ.
ಆ್ಯಂಡ್ರಾಯಿಡ್ ಒರಿಯೊ 7.1 ಆಪರೇಟಿಂಗ್ ಸಿಸ್ಟಮ್ ಮೇಲೆ ಕಾರ್ಯಾಚರಿಸುವ Eluga Ray 800 ಮಲ್ಟಿಟಾಸ್ಕ್‌ಗಳಿಗೆ ಉಪಯೋಗಕಾರಿ ಎಂಬುದು ಕಂಪೆನಿ ಅಂಬೋಣ.
Panasonic Eluga Ray 800 ನಲ್ಲಿರುವ ಇನ್ನೊಂದು ವಿಶೇಷ ಸೌಲಭ್ಯ ಅಂದರೆ ವೀಡಿಯೋ ನೋಡೋದು ಮತ್ತು ಚಾಟಿಂಗ್‌ಗಳನ್ನು ಏಕಕಾಲಕ್ಕೆ ಮಾಡಬಹುದು. ಇದರಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವೂ ಇದೆ.
ನಮ್ಮ ದಿನಚರಿಯನ್ನು ಫೋನ್‌ನಲ್ಲಿ ಸೆಟ್ ಮಾಡಿಟ್ಟುಕೊಳ್ಳಬಹುದು. ಆ ದಿನದ ಶೆಡ್ಯೂಲ್ ನೆನಪಿಸುವಲ್ಲಿ ಈ ತಂತ್ರಜ್ಞಾನ ಸಹಾಯಕ್ಕೆ ಬರುತ್ತದೆ. ಫ್ರಂಟ್ ಫಿಂಗರ್ ಪ್ರಿಂಟ್ ಸೆನ್ಸರೂ ಇದೆ. ಮಾರುಕಟ್ಟೆಯಲ್ಲಿ ಇದರ ಬೆಲೆ ₹ 9999 ರು.
ಇದನ್ನೂ ಓದಿ: ನಿಮ್ಮ ವಾಟ್ಸಪ್ ಚಟುವಟಿಕೆ ಯಾರು ನೋಡ್ತಾ ಇಲ್ಲ ಅಂತಾ ಭಾವಿಸಿದ್ದೀರಾ...?
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 7, 2019, 8:54 PM IST