ಕಳೆದ ತಿಂಗಳು ಚೀನಾದಲ್ಲಿ ಬಿಡುಗಡೆಯಾಗಿ ಭಾರೀ ಸುದ್ದಿ ಮಾಡಿದ್ದ Oppo Reno 10 X Zoom Edition ಈಗ ಭಾರತದಲ್ಲೂ ಬಿಡುಗಡೆಯಾಗಿದೆ. Oppo Reno ಭಿನ್ನ ಮಾದರಿಯ ಮೊಬೈಲ್‌ಗಳಲ್ಲಿ ಮುಖ್ಯವಾದದ್ದು Reno 10 X Zoom Edition. ಇದರಲ್ಲಿ 10Xವರೆಗಿನ ವೈಡ್‌ ಆ್ಯಂಗಲ್‌ ಫೋಟೋಗಳನ್ನು ಅದ್ಭುತವಾಗಿ ಕ್ಲಿಕ್ಕಿಸುವ ಅವಕಾಶ ಕಲ್ಪಿಸಲಾಗಿದೆ. 

ಟ್ರಿಪ್ಪಲ್‌ ಲೆನ್ಸ್‌ ಇರುವ ಕಾರಣ ಫೋಟೋದ ಗುಣಮಟ್ಟುವೂ ಸಖತ್ತಾಗಿರುತ್ತದೆ. ಪಾಪ್‌ಅಪ್‌ ಸ್ಲೈಡರ್‌ ಹೊಂದಿರೋ ಕ್ಯಾಮೆರಾ ಈ ಫೋನ್‌ನ ಮತ್ತೊಂದು ಆಕರ್ಷಣೆ. ಇದರ ಪಾಪ್ ಅಪ್‌ ಫ್ರಂಟ್‌ ಕ್ಯಾಮೆರಾದಲ್ಲಿ ‘ಶಾರ್ಕ್ ಫಿನ್‌’ ಎಂಬ ಆಯ್ಕೆ ಇದೆ. ಶಾರ್ಕ್‌ನ ರೆಕ್ಕೆಗಳಂಥ ಈ ರಚನೆಯಿಂದ ಚೆಂದದ ಸೆಲ್ಫಿ ಕ್ಲಿಕ್ಕಿಸಬಹುದು. 

ColorOS 6 -Android Pie ಆಪರೇಟಿಂಗ್ ಸಿಸ್ಟಮ್ ಹೊಂದಿರುವ Oppo Reno 10x Zoom Edition ಹಾರ್ಡ್‌ವೇರ್‌ ತಂತ್ರಜ್ಞಾನವೂ ಬಹಳ ಆಧುನಿಕವಾದದ್ದು. ಈ ಫೋನ್ ಸ್ನಾಪ್‌ಡ್ರ್ಯಾಗನ್‌ 855 ಪ್ರೊಸೆಸರ್ ಹೊಂದಿದೆ.

ಇದನ್ನೂ ಓದಿ | 2.2 ಬಿಲಿಯನ್ ಫೇಸ್ಬುಕ್ ಖಾತೆ ಡಿಲೀಟ್! ನಿಯಮ ಮೀರಿದ್ರೆ ಇದೇ ಗತಿ!

6.60 ಇಂಚು ಪರದೆ ಹೊಂದಿರುವ ಈ ಫೋನ್ 16 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಹಾಗೂ 4065 mAh ಬ್ಯಾಟರಿ ಹೊಂದಿದೆ. ಭಾರತದಲ್ಲಿ 6GB RAM/ 128GB ಸ್ಟೋರೆಜ್ ವೇರಿಯಂಟ್ Oppo Reno 10X ಝೂಮ್‌ ಎಡಿಶನ್‌ಗೆ ಬೆಲೆ ₹ 39,990 ಆಗಿದ್ದರೆ, 8GB RAM/ 256GB ವೇರಿಯಂಟ್ ಗೆ ₹49,990.

ಜೆಟ್ ಬ್ಲ್ಯಾಕ್ ಮತ್ತು ಓಶಿಯನ್ ಗ್ರೀನ್ ಬಣ್ಣಗಳಲ್ಲಿ ಲಭ್ಯವಿರುವ Oppo Reno 10X ಝೂಮ್‌ ಎಡಿಶನ್‌ಗೆ ಈಗಾಗಲೇ ಪ್ರಿ-ಬುಕ್ಕಿಂಗ್ ಆರಂಭವಾಗಿದೆ. ಬಿಡುಗಡೆಯಾದ ಫೋನ್‌ಗಳು ಆನ್‌ಲೈನ್ ಮತ್ತು ಆಫ್ ಲೈನ್ ರಿಟೇಲ್ ಶಾಪ್‌ಗಳಲ್ಲಿ ಜೂನ್ 7ರಿಂದ ಲಭ್ಯವಾಗಲಿದೆ.  ಹಾಗೂ ಇಂಟರ್ ನ್ಯಾಶನಲ್ ವ್ಯಾರಂಟಿ ಹೊಂದಿದೆ.