ಕೊಳ್ತೀರೋ ಇಲ್ವೋ, ಈ ಮೊಬೈಲ್ ಮಾತ್ರ ಸಖತ್ ಆಗಿದೆ Oppoಕೊಳ್ಳೇಬೇಕು!

ಜಾಗತಿಕವಾಗಿ ಭಾರತ ಮೊಬೈಲ್ ತಯಾರಕರಿಗೆ ಪ್ರಮುಖ ಮಾರುಕಟ್ಟೆ. 2015ರಲ್ಲಿ 239 ಮಿಲಿಯನ್ ಇದ್ದ ಮೊಬೈಲ್ ಬಳಕೆದಾರರ ಸಂಖ್ಯೆ 2018ರ ಅಂತ್ಯದಲ್ಲಿ 382 ಮಿಲಿಯನ್ ಆಗುವ ಅಂದಾಜು ಇದೆ. ತಂತ್ರಜ್ಞಾನ ಬದಲಾದಂತೆ, ಬಳಕೆದಾರರ ಅವಶ್ಯಕತೆಗೆ ತಕ್ಕಂತೆ ಮೊಬೈಲ್ ಕಂಪನಿಗಳು ಹೊಸ ಫೋನ್ ಗಳನ್ನು ಬಿಡುಗಡೆ ಮಾಡುತ್ತವೆ. Oppo ಹೊಸ ಮೊಬೈಲ್ ಫೋನನ್ನು ಬಿಡುಗಡೆ ಮಾಡಿದೆ. ಇಲ್ಲಿದೆ ವಿವರ:

Oppo Launches R17 Pro Smartphone in India Features Specifications

ದೀಪಾವಳಿ ಆಯ್ತು, ಕ್ರಿಸ್‌ಮಸ್ ಮತ್ತು ಹೊಸ ವರ್ಷಕ್ಕೆ ಕೆಲ ದಿನಗಳೇ ಬಾಕಿಯಿದೆ. ಯಾವುದೇ ಹಬ್ಬ-ಹರಿದಿನವಿರಲಿ, ಭಾರತದ ಮೊಬೈಲ್ ಪ್ರಿಯರಿಗಂತೂ ಯಾವಾಗಲೂ ಸುಗ್ಗಿಕಾಲ!  ಭಾರತದ ಮೊಬೈಲ್ ಮಾರುಕಟ್ಟೆ ದಿನದಿಂದ ದಿನಕ್ಕೆ ವಿಸ್ತರಿಸುತ್ತಲೇ ಇದೆ, ಹೊಸ ಹೊಸ ಮಾದರಿಯ ಮೊಬೈಲ್ ಫೋನ್‌ಗಳು ಕೈಗೆ ಬರುತ್ತಲೇ ಇವೆ. ಇದೀಗ, ಜನಪ್ರಿಯ ಮೊಬೈಲ್ ಕಂಪನಿ Oppo ಕೂಡಾ ಹೊಸ ಫೋನೊಂದನ್ನು ಬಿಡುಗಡೆ ಮಾಡಿದೆ.

ಹೌದು, Oppo ಕೊನೆಗೂ ಭಾರತದಲ್ಲಿ R ಸರಣಿಯ ಫೋನನ್ನು ಬಿಡುಗಡೆ ಮಾಡಿದೆ.  ಸೂಪರ್ ಫಾಸ್ಟ್ ಚಾರ್ಜಿಂಗ್, ತ್ರಿವಳಿ ಹಿಂಬದಿ ಕ್ಯಾಮೆರಾ, ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್, 8GB RAM, 128GB ಸ್ಟೋರೆಜ್‌ನಂತಹ ಪ್ರಮುಖ ಫೀಚರ್‌ಗಳಿರುವ Oppo R17 Pro ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

ಇದನ್ನೂ ಓದಿ: ವೈರಸ್ ಹಾವಳಿ, 22 ಆ್ಯಪ್‌ ಪ್ಲೇಸ್ಟೋರ್‌ನಿಂದ ಡಿಲೀಟ್! ನಿಮ್ಮ ಫೋನಿನಲ್ಲಿದಿಯಾ

OnePlus 6Tಗೆ ಸ್ಪರ್ಧೆ ನೀಡಲೆಂದೇ ಮಾರುಕಟ್ಟೆಗೆ ಇಳಿದಿರುವ Oppo R17 Pro ಮೊದಲು ಚೀನಾದಲ್ಲಿ ಬಿಡುಗಡೆಯಾಗಿತ್ತು.  ಇದೀಗ ಭಾರತದ ಮಾರುಕಟ್ಟೆಗೆ ಎಂಟ್ರಿಕೊಟ್ಟಿದೆ.

6.4-inch AMOLED ತಂತ್ರಜ್ಞಾನ ಹೊಂದಿರುವ Oppo R17 Pro ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ಬರೇ 183 ಗ್ರಾಂ ಇರುವ ಈ ಫೋನ್ ಹಗುರವಾಗಿರುವುದರ ಜೊತೆಗೆ ಹ್ಯಾಂಡಿಯಾಗಿಯೂ ಇದೆ. Snapdragon 710 octa-core ಪ್ರೊಸೆಸರ್ ಒಳಗೊಂಡಿರುವ Oppo R17 Pro, 8GB RAM, 128GB ಸ್ಟೋರೆಜ್ ಹೊಂದಿದೆ.

ಜೊತೆಗೆ ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್, 12+20 ಮೆಗಾ ಪಿಕ್ಸೆಲ್ ಸಾಮರ್ಥ್ಯದ ತ್ರಿವಳಿ ಕ್ಯಾಮೆರಾವನ್ನು ಕೂಡಾ ಈ ಫೋನ್ ಹೊಂದಿದೆ.

Oppo Launches R17 Pro Smartphone in India Features Specifications

Oppo R17 Pro ಫೋನ್ 3,700mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಅದರಲ್ಲೇನು ವಿಶೇಷ ಅಂತಿರಾ? ಹೌದು ಈ ಬ್ಯಾಟರಿಯನ್ನು ಚಾರ್ಜ್ ಮಾಡುವ Super VOOC ತಂತ್ರಜ್ಞಾನ ಈ ಫೋನ್ ವಿಶೇಷ. ಬಹಳ ವೇಗವಾಗಿ ಫೋನನ್ನು ಚಾರ್ಜ್ ಮಾಡಲು ಸಹಕಾರಿಯಾಗಿದೆ. 40% ಬ್ಯಾಟರಿಯನ್ನು ಬರೇ 10 ನಿಮಿಷಗಳಲ್ಲಿ ಚಾರ್ಜ್ ಮಾಡಬಹುದೆಂದು ಕಂಪನಿಯ ವಾದ!     

ಇದನ್ನೂ ಓದಿ: ವಾಟ್ಸಪ್ ಗ್ರೂಪ್ ಇನ್ನು ಸುಲಭವಲ್ಲ? ಬರಲಿದೆ ಹೊಸ ನಿಯಮ!

ಅಂದ ಹಾಗೇ ಈ ಫೋನ್ ಬೆಲೆ ಎಷ್ಟು ಎಂಬುವುದನ್ನು ಯೋಚ್ನೆ ಮಾಡ್ತಿದ್ದೀರಾ? ಹೌದು.. ಇದರ ಬೆಲೆ ಬರೋಬ್ಬರಿ ಬೆಲೆ ₹45,990. 
 

Latest Videos
Follow Us:
Download App:
  • android
  • ios