ಚೀನಾ ಲ್ಯಾಪ್‌ಟಾಪ್ ಆಮದಿಗೆ ಇನ್ನೂ 3 ತಿಂಗಳು ಮಾತ್ರ ಅವಕಾಶ
ಇತ್ತೀಚೆಗಷ್ಟೇ ವಿದೇಶಗಳಿಂದ ಲ್ಯಾಪ್‌ಟಾಪ್, ಕಂಪ್ಯೂಟರ್ ಹಾಗೂ ಟ್ಯಾಬ್ಲೆಟ್‌ಗಳನ್ನು ಆಮದು ಮಾಡಿಕೊಳ್ಳಲು ಉದ್ಯಮಿಗಳು ಸರ್ಕಾರದಿಂದ ಲೈಸನ್ಸ್ ಪಡೆಯುವುದನ್ನು ಕಡ್ಡಾಯಗೊಳಿಸಿದ್ದ ಕೇಂದ್ರ ಸರ್ಕಾರ, ಇದೀಗ ಆ ಆದೇಶ ಜಾರಿಗೊಳಿಸುವುದನ್ನು ಅ.31ರವರೆಗೆ ಮುಂದೂಡಿದೆ.
ನವದೆಹಲಿ: ಇತ್ತೀಚೆಗಷ್ಟೇ ವಿದೇಶಗಳಿಂದ ಲ್ಯಾಪ್‌ಟಾಪ್, ಕಂಪ್ಯೂಟರ್ ಹಾಗೂ ಟ್ಯಾಬ್ಲೆಟ್‌ಗಳನ್ನು ಆಮದು ಮಾಡಿಕೊಳ್ಳಲು ಉದ್ಯಮಿಗಳು ಸರ್ಕಾರದಿಂದ ಲೈಸನ್ಸ್ ಪಡೆಯುವುದನ್ನು ಕಡ್ಡಾಯಗೊಳಿಸಿದ್ದ ಕೇಂದ್ರ ಸರ್ಕಾರ, ಇದೀಗ ಆ ಆದೇಶ ಜಾರಿಗೊಳಿಸುವುದನ್ನು ಅ.31ರವರೆಗೆ ಮುಂದೂಡಿದೆ. ಅಂದರೆ, ಇನ್ನೂ ಮೂರು ತಿಂಗಳ ಕಾಲ ಈ ವಸ್ತುಗಳನ್ನು ವಿದೇಶಗಳಿಂದ ಮುಕ್ತವಾಗಿ ಆಮದು ಮಾಡಿಕೊಳ್ಳಬಹುದಾಗಿದೆ.
ಮುಖ್ಯವಾಗಿ ಚೀನಾವನ್ನು ಗುರಿಯಾಗಿಸಿಕೊಂಡು ಹೊರಡಿಸಲಾಗಿತ್ತು ಎನ್ನಲಾದ ಆದೇಶ ಜಾರಿಗೆ ಸರ್ಕಾರ ಮೂರು ತಿಂಗಳು ಕಾಲಾವಕಾಶ ನೀಡಿರುವುದರಿಂದ ಅಲ್ಲಿಯವರೆಗೆ ಎಲೆಕ್ಟ್ರಾನಿಕ್ ಕಂಪನಿಗಳು ಲೈಸನ್ಸ್ ಇಲ್ಲದೆ ಈ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಅವಕಾಶ ದೊರೆತಿದೆ.
ಆ.3ರಂದು ತಕ್ಷಣದಿಂದ ಜಾರಿಗೆ ಬರುವಂತೆ ಲ್ಯಾಪ್‌ಟಾಪ್, ಕಂಪ್ಯೂಟರ್ (Computer), ಟ್ಯಾಬ್ಲೆಟ್‌ಗಳನ್ನು (Tablet) ಆಮದು ಮಾಡಿಕೊಳ್ಳುವುದಕ್ಕೆ ಲೈಸನ್ಸ್ ಕಡ್ಡಾಯಗೊಳಿಸಿ ವಿದೇಶಿ ವ್ಯಾಪಾರಗಳ ಮಹಾನಿರ್ದೇಶನಾಲಯ ಆದೇಶ ಹೊರಡಿಸಿತ್ತು. ಅದಕ್ಕೆ ಎಲೆಕ್ಟ್ರಾನಿಕ್ ಕಂಪನಿಗಳಿಂದ ಆಕ್ಷೇಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ತಿದ್ದುಪಡಿ ಆದೇಶ ಹೊರಡಿಸಿರುವ ನಿರ್ದೇಶನಾಲಯ, ನ.1ರಿಂದ ಲೈಸನ್ಸ್ ಕಡ್ಡಾಯ ನಿಯಮ ಜಾರಿಗೆ ಬರಲಿದೆ ಎಂದು ತಿಳಿಸಿದೆ.
ಚೀನಾಗೆ ಮತ್ತೊಂದು ಭರ್ಜರಿ ಹೊಡೆತ: ಲ್ಯಾಪ್‌ಟಾಪ್, ಟ್ಯಾಬ್, ಕಂಪ್ಯೂಟರ್ ಆಮದಿಗೆ ಕೇಂದ್ರದಿಂದ ನಿರ್ಬಂಧ
ಭದ್ರತಾ ಕಾರಣಗಳಿಂದ ಹಾಗೂ ದೇಶದಲ್ಲೇ ಲ್ಯಾಪ್‌ಟಾಪ್ (Laptop) ಮತ್ತು ಕಂಪ್ಯೂಟರ್‌ಗಳನ್ನು ಉತ್ಪಾದಿಸಲು ಉತ್ತೇಜನ ನೀಡುವ ದೃಷ್ಟಿಯಿಂದ ವಿದೇಶಗಳಿಂದ ಈ ವಸ್ತುಗಳನ್ನು ಆಮದು ಮಾಡಿಕೊಳ್ಳುವುದಕ್ಕೆ ಸರ್ಕಾರ ನಿರ್ಬಂಧ ಹೇರಿತ್ತು. ಚೀನಾ ಹಾಗೂ ಕೊರಿಯಾದಿಂದ ಈ ವಸ್ತುಗಳು ಹೆಚ್ಚಾಗಿ ಭಾರತಕ್ಕೆ ಆಮದಾಗುತ್ತವೆ. ಭಾರತ ಸರ್ಕಾರವು ಇತ್ತೀಚೆಗೆ ಎಲೆಕ್ಟ್ರಾನಿಕ್ ವಸ್ತುಗಳ ಉತ್ಪಾದನೆಗೆ ಪ್ರೋತ್ಸಾಹ ನೀಡಲು ಪಿಎಲ್‌ಐ 2.0 (ಉತ್ಪಾದನೆ ಆಧಾರಿತ ಪ್ರೋತ್ಸಾಹಧನ) ನೀತಿ ಜಾರಿಗೊಳಿಸಿದ್ದು, ಅದಕ್ಕೆ 44 ಐಟಿ ಹಾರ್ಡ್‌ವೇರ್ ಕಂಪನಿಗಳು ಈಗಾಗಲೇ ನೋಂದಣಿ ಮಾಡಿಕೊಂಡಿವೆ.
18ಕ್ಕಿಂತ ಕಡಿಮೆ ವಯಸ್ಕರಿಗೆ ಇನ್ಮುಂದೆ ದಿನಕ್ಕೆ 2 ಗಂಟೆ ಮಾತ್ರ ಸ್ಮಾರ್ಟ್‌ಫೋನ್ ಬಳಕೆಗೆ ಅವಕಾಶ!