ಇಲ್ಲಿಯೂ ಒನ್‌ಪ್ಲಸ್ ನಂಬರ್‌  1, ಮಾರುಕಟ್ಟೆ ಓಟಕ್ಕಿಲ್ಲ ಬ್ರೇಕ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 5, Feb 2019, 11:29 PM IST
OnePlus was best selling premium smartphone brand in 2018 Counterpoint Report
Highlights

ಒನ್‌ಪ್ಲಸ್ 2018 ರಲ್ಲಿ ಅತ್ಯುತ್ತಮ ಮಾರಾಟವಾದ ಪ್ರೀಮಿಯಂ ಸ್ಮಾರ್ಟ್‌ಫೋನ್/ ಕೌಂಟರ್‌ಪಾಯಿಂಟ್ ಮಾರ್ಕೆಟ್ ಮಾನಿಟರ್ ಸರ್ವೀಸ್ ಸಮೀಕ್ಷಾ ವರದಿಯಲ್ಲಿ ಬಹಿರಂಗ/  2018 ರ 4ನೇ ತ್ರೈಮಾಸಿಕದಲ್ಲಿ ಮಾರುಕಟ್ಟೆಯ ಶೇ.36 ರಷ್ಟು ಪಾಲು ಹೊಂದಿದ ಒನ್‌ಪ್ಲಸ್/ ಈ ಮೂಲಕ ಮುಂಚೂಣಿ ಮುಂದುವರಿಸಿದ ಒನ್‌ಪ್ಲಸ್

ಬೆಂಗಳೂರು[ಫೆ.05]   ಕೌಂಟರ್ ಪಾಯಿಂಟ್ ಮಾರ್ಕೆಟ್ ಮಾನಿಟರ್ ಸರ್ವೀಸ್ ಪ್ರಕಾರ 2018 ರಲ್ಲಿ ಒನ್‍ಪ್ಲಸ್ ಪ್ರೀಮಿಯಂ ಸ್ಮಾರ್ಟ್‍ಫೋನ್  ವಿಭಾಗದಲ್ಲಿ ಅತ್ಯುತ್ತಮ ಮಾರಾಟವಾದ ಫೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕೌಂಟರ್ ಪಾಯಿಂಟ್ ಬಿಡುಗಡೆ ಮಾಡಿರುವ 2018ರ 4ನೇ ತ್ರೈಮಾಸಿಕ ವರದಿಯ ಪ್ರಕಾರ, ಒನ್‍ಪ್ಲಸ್ ಕಂಪನಿ ಸ್ಮಾರ್ಟ್‍ಫೋನ್ ಮಾರುಕಟ್ಟೆಯ ಶೇ.36 ರಷ್ಟು ಪಾಲನ್ನು ಹೊಂದುವ ಮೂಲಕ 3 ನೇ ತ್ರೈಮಾಸಿಕದ ರೀತಿಯಲ್ಲಿಯೇ 4 ನೇ ತ್ರೈಮಾಸಿಕದಲ್ಲಿಯೂ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಇದೇ ಅವಧಿಯಲ್ಲಿ ಆ್ಯಪಲ್ ಮತ್ತು ಸ್ಯಾಮ್‌ಸಂಗ್ ಭಾರತದಲ್ಲಿ ಕ್ರಮವಾಗಿ ಶೇ. 30 ಮತ್ತು ಶೇ.26 ರಷ್ಟು ಪಾಲನ್ನು ಹೊಂದಿವೆ ಎಂದು ತಿಳಿಸಲಾಗಿದೆ.

2018ರಲ್ಲಿ ಪ್ರೀಮಿಯಂ ವರ್ಗದಲ್ಲಿ ಅತ್ಯಧಿಕ ಮಾರಾಟವಾದ ಸ್ಮಾರ್ಟ್‍ಫೋನ್ ಎಂದರೆ ಒನ್‍ಪ್ಲಸ್ 6. ಇದರ ನಂತರ ಒನ್‍ಪ್ಲಸ್ 6ಟಿ ಮಾರಾಟವಾಗಿದೆ. ಒನ್‍ಪ್ಲಸ್ ವಾರ್ಷಿಕವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರೀಮಿಯಂ ಸ್ಮಾರ್ಟ್‍ಫೋನ್ ಬ್ರ್ಯಾಂಡ್ ಎನಿಸಿದೆ. ಕಳೆದ ವರ್ಷಗಳಿಗೆ ಹೋಲಿಸಿದರೆ ಶೇ.85 ರಷ್ಟು ಬೆಳವಣಿಗೆ ಕಂಡಿದೆ. 2018ನೇ ಸಾಲಿನ 4ನೇ ತ್ರೈಮಾಸಿಕದಲ್ಲಿ ಒನ್‍ಪ್ಲಸ್ 6ಟಿ ಮಾರುಕಟ್ಟೆಯ ಪಾಲನ್ನು ಹೆಚ್ಚಿಸಿಕೊಳ್ಳಲು ನೆರವಾಗಿದ್ದು, ಹತ್ತಿರದ ಪ್ರತಿಸ್ಪರ್ಧಿಯ ನಡುವೆ ಇದ್ದ ಅಂತರವನ್ನು ಕಡಿಮೆ ಮಾಡಿದ್ದು, ಇದೀಗ ಈ ಅಂತರ ಶೇ. 10 ಕ್ಕೆ ಬಂದು ತಲುಪಿದೆ. 

ಮೊಬೈಲ್ ರಿವ್ಯೂ | Honor 10 Lite: ಆಹಾಹಾ... ಎಂಥ ಫೋನ್ ಮಾರಾಯ್ರೆ!

ಕೌಂಟರ್ ಪಾಯಿಂಟ್ ರಿಸರ್ಚ್‍ನ ಸಂಶೋಧನಾ ವಿಶ್ಲೇಷಕ ಕಾರ್ನ್ ಚೌಹಾಣ್ ಅವರು ಮಾತನಾಡಿ, "ಹಿಂದೆಂದಿಗಿಂತಲೂ ಅತ್ಯಧಿಕ ಮಾರಾಟವನ್ನು ಕಾಣುವ ಮೂಲಕ ಪ್ರೀಮಿಯಂ ಸ್ಮಾರ್ಟ್‍ಫೋನ್ ವರ್ಗದಲ್ಲಿ ಒನ್‍ಪ್ಲಸ್ ಸತತ ಮೂರು ತ್ರೈಮಾಸಿಕಗಳಲ್ಲಿ ಮೊದಲ ಸ್ಥಾನವನ್ನು ಹೊಂದಿದೆ. ಹೆಚ್ಚುವರಿಯಾಗಿ, ಕೇವಲ ಒಂದು ವರ್ಷದಲ್ಲಿ ಪ್ರೀಮಿಯಂ ಸ್ಮಾರ್ಟ್‍ಫೋನ್ ವಿಭಾಗದಲ್ಲಿ ಒನ್‍ಪ್ಲಸ್ ಒನ್ ಒಟ್ಟಾರೆ ಉತ್ತಮ ಫಲಿತಾಂಶವನ್ನು ಪಡೆದಿದೆ. ಹಬ್ಬದ ಸಂದರ್ಭದಲ್ಲಿ ಇತ್ತೀಚಿನ ಒನ್‍ಪ್ಲಸ್ 6ಟಿಗೆ ಭಾರೀ ಬೇಡಿಕೆ ಕಂಡುಬಂದಿದೆ. ಕಂಪನಿಯ ಎಕ್ಸ್‌ಪೀರಿಯನ್ಸ್ ಸ್ಟೋರ್ಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಮಾಹಿತಿ ನೀಡಿದರು.


 

 

loader