ಸಾರ್ವಜನಿಕರಿಗೆ 20 ಸಾವಿರ ರೂ. ವರೆಗೂ ಸೂಪರ್ ಆಫರ್ ನೀಡಿದ ಒನ್'ಪ್ಲಸ್ ಮೊಬೈಲ್ ಸಂಸ್ಥೆ

First Published 2, Feb 2018, 4:29 PM IST
OnePlus Buyback offer on old Apple Samsung Xiaomi devices
Highlights

ಆಫರ್ ಲಭ್ಯವಿರುವುದು ಒನ್'ಪ್ಲಸ್ ಅಧಿಕೃತ ವೆಬ್'ಸೈಟ್'ನಲ್ಲಿ

ಬೆಂಗಳೂರು(ಫೆ.02): ಪ್ರತಿಷ್ಟಿತ ಮೊಬೈಲ್ ಸಂಸ್ಥೆ ಒನ್'ಪ್ಲಸ್ ಸಾರ್ವಜನಿಕರಿಗೆ ಸೂಪರ್ ಆಫರ್ ಒಂದನ್ನು ನೀಡಿದೆ. ಕೈಗೆಟಕುವ ಬೆಲೆಯಲ್ಲಿ ಬೈಬ್ಯಾಕ್ ಆಫರ್ ನೀಡಿದೆ.               

ತಮ್ಮ ಹಳೆಯ ಫೋನನ್ನು ನೀಡಿ ಕಡಿಮೆ ಬೆಲೆಯಲ್ಲಿ ಒನ್ ಪ್ಲಸ್ 5ಟಿ ಹಾಗೂ ಒನ್'ಪ್ಲಸ್ 5 ಒಳಗೊಂಡು ಕೆಲವು ಫೋನ್'ಗಳನ್ನು ಪಡೆದುಕೊಳ್ಳಬಹುದು. ಈ ಆಫರ್ ಲಭ್ಯವಿರುವುದು ಒನ್'ಪ್ಲಸ್ ಅಧಿಕೃತ ವೆಬ್'ಸೈಟ್'ನಲ್ಲಿ ಆಪಲ್, ಆಸಸ್, ಬ್ಲ್ಯಾಕ್'ಬೆರ್ರಿ, ಜಿಯೋನಿ, ಗೂಗಲ್, ಹೆಚ್'ಟಿಸಿ, ಹವಾಯಿ, ಇನ್'ಟೆಕ್ಸ್,ಕಾರ್ಬ'ನ್,ಲೆನೋವಾ, ಲಿಇಕೋ,ಎಲ್'ಜಿ,ಒಪ್ಪೊ,ಮೈಕ್ರೋ'ಮ್ಯಾಕ್ಸ್, ಮೋಟರಾಲಾ,ಪೆನಾಸಾನಿಕ್,ಸೋನಿ, ಸ್ಯಾಮ್'ಸಂಗ್,ಸೋನಿ,ವಿವೋ,ರೆಡ್'ಮಿ ಹಾಗೂ ಝೊಲೋ ಕಂಪನಿಯ ಹಳೆಯ ಮೊಬೈಲ್'ಗಳನ್ನು ಕೊಟ್ಟು ಒನ್'ಪ್ಲಸ್ ನೂತನ ಮೊಬೈಲ್'ಗಳನ್ನು ಕೊಂಡುಕೊಳ್ಳಬಹುದು. ಬದಲಾವಣೆಯ ಆಫರ್ 20 ಸಾವಿರ ರೂ.ಗಳಿಗೂ ಲಭ್ಯವಿದೆ.

ಬೆಂಗಳೂರು ಸೇರಿದಂತೆ ಚೆನ್ನೈ, ಹೈದರಾಬಾದ್ ಒಳಗೊಂಡು ದೇಶದ 30ಕ್ಕೂ ಹೆಚ್ಚು ನಗರಗಳಲ್ಲಿ ಈ ಆಫರ್ ಲಭ್ಯವಿದೆ.

loader