ಒನ್ ಪ್ಲಸ್ ಹಾಗೂ ಇ-ಕಾಮರ್ಸ್ ದೈತ್ಯ ಅಮೆಜಾನ್ ತಮ್ಮ ಸಹಬಾಗಿತ್ವದ ನಾಲ್ಕನೆ  ವಾರ್ಷಿಕೋತ್ಸವನ್ನು ಆಚರಿಸುತ್ತಿವೆ. ಈ ಸಂದರ್ಭದಲ್ಲಿ  ಗ್ರಾಹಕರಿಗೆ ಭರ್ಜರಿ ಆಫರ್ ಗಳನ್ನು ಪ್ರಕಟಿಸಿದೆ.

ಈ ಸಂದರ್ಭದಲ್ಲಿ ಇತ್ತೀಚೆಗೆ ಬಿಡುಗಡೆಯಾದ OnePlus 6T ಖರೀದಿಸುವವರಿಗೆ ಕ್ಯಾಷ್ ಬ್ಯಾಕ್ ಆಫರ್ ಗಳನ್ನು ಸಂಸ್ಥೆಯು ನೀಡುತ್ತಿದೆ. ನ.30 ರಿಂದ ಈ ಆಫರ್ ಶುರುವಾಗಲಿದ್ದು,  ಸಿಟಿಬ್ಯಾಂಕ್ ಡೆಬಿಟ್ ಅಥವಾ  ಕ್ರೆಡಿಟ್ ಕಾರ್ಡ್ ಮೂಲಕ OnePlus 6T ಖರೀದಿಸಿದರೆ ₹1500 ಕ್ಯಾಷ್ ಬ್ಯಾಕ್ ಸಿಗಲಿದೆ. 

ಇದನ್ನೂ ಓದಿ: WhatsAppನಿಂದ ಮತ್ತೊಂದು ಬಂಪರ್ ಫೀಚರ್! ಬೇಕಂತಿಲ್ಲ ‘ಲಾಸ್ಟ್ ಸೀನ್‘ ಟೆನ್ಷನ್

ಹಳೆಯ OnePlus ಫೋನ್  ವಿನಿಮಯ ಮಾಡಿ OnePlus 6T ಖರೀದಿಸುವುದಾದರೆ ₹3000 ಹೆಚ್ಚುವರಿ ರಿಯಾಯಿತಿ ಪಡೆಯಬಹುದಾಗಿದೆ. ಈ ಆಫರ್ ಗಳು ಕ್ರೋಮಾ, ರಿಲಯನ್ಸ್ ಡಿಜಿಟಲ್, ಒನ್ ಪ್ಲಸ್ ಸ್ಟೋರ್ಸ್ ಹಾಗೂ oneplus.in ನಲ್ಲೂ ಲಭ್ಯವಿದೆ.

6GB RAM + 128 GB ಸ್ಟೋರೆಜ್ ಸಾಮರ್ಥ್ಯದ OnePlus 6T ಫೋನ್ ಬೆಲೆ ₹37,999 ಆಗಿದೆ. ಭಾರತದಲ್ಲಿ Google Pixel 3 ಬಳಿಕ Android 9 Pie ತಂತ್ರಾಶವನ್ನು ಬಳಸಿದ ಹೆಗ್ಗಳಿಕೆ OnePlus 6Tದ್ದಾಗಿದೆ.  3,700 mAh ಬ್ಯಾಟರಿ ಸಾಮರ್ಥ್ಯ ಹೊಂದಿರುವ  OnePlus 6T, ಹಳೆಯ OnePlusಗೆ ಹೋಲಿಸಿದರೆ 20% ಹೆಚ್ಚು ಸಾಮರ್ಥ್ಯ ಹೊಂದಿದೆ.

OnePlus 6Tಯ ಕ್ಯಾಮೆರಾದಲ್ಲೂ ಅತ್ಯಾಧುನಿಕ ತಂತ್ರಜ್ಞಾನವನ್ನೇ ಬಳಸಲಾಗಿದೆ.  ಮಂದ ಬೆಳಕು ಹಾಗೂ ಹೆಚ್ಚು ಸದ್ದಿರುವಲ್ಲೂ ಉತ್ಕರ್ಷ ಗುಣಮಟ್ಟದ ಫೋಟೋ ಹಾಗೂ ವಿಡಿಯೋ ತೆಗೆಯಲು ಸಹಕಾರಿಯಾಗುವಂತೆ ಕ್ಯಾಮೆರಾವನ್ನು ವಿನ್ಯಾಸಗೊಳಿಸಲಾಗಿದೆ. 

OnePlus 6T ಹೇಗಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ