2018ರಲ್ಲಿ ಗರಿಷ್ಠ ಮಾರಾಟವಾದ ಸ್ಮಾರ್ಟ್ ಫೋನ್ ಪಟ್ಟಿ ಪ್ರಕಟ!

First Published 31, Jul 2018, 7:20 PM IST
OnePlus 6 becomes top selling premium smartphone in India in Q2
Highlights

2018ರಲ್ಲಿ ಭಾರತೀಯರು ಹೆಚ್ಚು ಇಷ್ಟಪಟ್ಟ ಸ್ಮಾರ್ಟ್‌ಫೋನ್ ಯಾವುದು ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ವರ್ಷದ ಎರಡನೇ ಭಾಗದಲ್ಲಿ ಗರಿಷ್ಠ ಮಾರಾಟವಾದ ಫೋನ್‌ಗಳ ಪಟ್ಟಿ ಪ್ರಕಟಗೊಂಡಿದೆ. ಇಲ್ಲಿದೆ ಸಂಪೂರ್ಣ ವಿವರ.

ಬೆಂಗಳೂರು(ಜು.31):  ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಯಶಸ್ಸು ಸಾಧಿಸಿದರೆ ಬೇರೇನು ಬೇಕಿಲ್ಲ ಅನ್ನೋದು ಸದ್ಯದ ಮಾತು. ಹೀಗಾಗಿಯೇ ಭಾರತದಲ್ಲಿ ಸ್ಮಾರ್ಟ್ ಫೋನ್‌ ಪ್ರತಿ ದಿನ ಭಾರಿ ಪೈಪೋಟಿ ಎದುರಿಸುತ್ತಿದೆ. ಇದೀಗ 2018ರ ಎರಡನೆ ಭಾಗದಲ್ಲಿ ಗರಿಷ್ಠ ಮಾರಾಟವಾದ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಪ್ರಕಟವಾಗಿದೆ.

ನೂತನ ಪಟ್ಟಿಯಲ್ಲಿ ಚೀನಾ ಸ್ಮಾರ್ಟ್‌ಫೋನ್ ಒನ್ ಪ್ಲಸ್ 6 ಫೋನ್ ಮೊದಲ ಸ್ಥಾನ ಅಲಂಕರಿಸಿದೆ. ಒನ್ ಪ್ಲಸ್ 6 ಶೇಕಡಾ 40 ರಷ್ಟು ಮಾರಾಟವಾಗಿದೆ. ಇನ್ನು ಸಾಮ್ಸಂಗ್ ಎರಡನೇ ಸ್ಥಾನದಲ್ಲಿದೆ. ಸಾಮ್ಸಂಗ್ 34 ಪ್ರತಿಶತ ಮಾರುಕಟ್ಟೆ ಆಕ್ರಮಿಸಿಕೊಂಡಿದೆ. 

ಆಪಲ್ ಫೋನ್ ಕೇವಲ ಶೇಕಡಾ 14 ರಷ್ಟು ಮಾರಾಟವಾಗೋ ಮೂಲಕ ಸ್ಮಾರ್ಟ್‌ಫೋನ್‌ ಮಾರಾಟಗಳಲ್ಲಿ ಕೊನೆಯ ಸ್ಥಾನ ಪಡೆದಿದೆ. ಅಧಿಕ ಬೆಲೆ ಕಾರಣ ಆಪಲ್ ಫೋನ್‌ಗಳತ್ತ ಜನಸಾಮಾನ್ಯರು ಮುಖಮಾಡುತ್ತಿಲ್ಲ.

2018ರಲ್ಲಿ 30000 ಸಾವಿರಕ್ಕಿಂತ ಹೆಚ್ಚಿನ ಬೆಲೆಯ ಫೋನ್‌ಗಳ ಮಾರಾಟದಲ್ಲಿ ಏರಿಕೆ ಕಂಡಿದೆ. ಕಳೆದ ವರ್ಷ 10 % ಏರಿಕೆಯಲ್ಲಿದ್ದ ಈ ಫೋನ್‌ಗಳು ಈ ಬಾರಿ 19% ಏರಿದೆ. ಒನ್ ಪ್ಲಸ್, ಸಾಮ್ಸಂಗ್ ಹಾಗೂ ಆಪಲ್ ಫೋನ್‌ಗಳು ಭಾರತದ 88% ಮಾರುಕಟ್ಟೆಯನ್ನ ಆಕ್ರಮಿಸಿಕೊಂಡಿದೆ. ಈ ಮೂಲಕ ವಿದೇಶಿ ಫೋನ್‌ಗಳಿಗೆ ಬೇಡಿಕೆ ಏರಕೆಯಾಗಿದೆ.

loader