Asianet Suvarna News Asianet Suvarna News

ದಿನವೂ ತಂಬಾಕು ಸೇವಿಸ್ತಿದ್ದಾರಂತೆ 5 ಸಾವಿರಕ್ಕೂ ಹೆಚ್ಚು ಮಕ್ಕಳು: ನಿಮ್ಮ ಮಕ್ಕಳ ಮೇಲೂ ಒಂದು ಕಣ್ಣಿಡಿ

ಕೇಂದ್ರದ ಶಿಕ್ಷಣ ಹಾಗೂ ಆರೋಗ್ಯ ಇಲಾಖೆ ಬೆಚ್ಚಿ ಬೀಳಿಸುವ ವರದಿಯೊಂದನ್ನು ಬಹಿರಂಗಪಡಿಸಿದೆ. ವರದಿಯೊಂದರ ಪ್ರಕಾರ ಭಾರತದಲ್ಲಿ ಪ್ರತಿದಿನವೂ 5 ಸಾವಿರಕ್ಕೂ ಹೆಚ್ಚು ಮಕ್ಕಳು ದಿನವೂ ತಂಬಾಕು ಸೇವಿಸುವ ಚಟಕ್ಕೆ ಒಳಗಾಗಿದ್ದಾರೆ

Shocking discovery of GYTS survey: Over 5k school children using tobacco daily
Author
First Published Sep 22, 2024, 6:17 PM IST | Last Updated Sep 22, 2024, 6:42 PM IST

ನವದೆಹಲಿ: ಕೇಂದ್ರದ ಶಿಕ್ಷಣ ಹಾಗೂ ಆರೋಗ್ಯ ಇಲಾಖೆ ಬೆಚ್ಚಿ ಬೀಳಿಸುವ ವರದಿಯೊಂದನ್ನು ಬಹಿರಂಗಪಡಿಸಿದೆ. ವರದಿಯೊಂದರ ಪ್ರಕಾರ ಭಾರತದಲ್ಲಿ ಪ್ರತಿದಿನವೂ 5 ಸಾವಿರಕ್ಕೂ ಹೆಚ್ಚು ಮಕ್ಕಳು ದಿನವೂ ತಂಬಾಕು ಸೇವಿಸುವ ಚಟಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಹಾಗೂ ಆರೋಗ್ಯ ಸಚಿವಾಲಯವೂ ಜಂಟಿ ಸಲಹಾವಳಿಯೊಂದನ್ನು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಿದೆ. ಯುವ ಜನರಲ್ಲಿ ಹೆಚ್ಚುತ್ತಿರುವ ತಂಬಾಕು ಬಳಕೆಯ ಸಮಸ್ಯೆಯನ್ನು ನಿಭಾಯಿಸುವ ಪ್ರಯತ್ನದ ಭಾಗವಾಗಿ ಕೇಂದ್ರ ಈ ಪ್ರಯತ್ನ ಮಾಡಿದೆ.

ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆ (ToFEI) ಹೆಸರಿನಲ್ಲಿ ಕೈಪಿಡಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಕೇಂದ್ರ ಸರ್ಕಾರವೂ ರಾಜ್ಯ ಸರ್ಕಾರಕ್ಕೆ ಕಳುಹಿಸಿರುವ ಜಂಟಿ ಸಲಹಾವಳಿ ಕರೆ ನೀಡಿದೆ. ಇದು ತಂಬಾಕು ಅಪಾಯಗಳಿಂದ ವಿದ್ಯಾರ್ಥಿಗಳನ್ನು ರಕ್ಷಿಸಲು ವಿನ್ಯಾಸಗೊಳಿಸಲಾದ ಪ್ರಮುಖ ದಾಖಲೆಯಾಗಿದೆ. 

ಇವರೇ ನೋಡಿ ಗುಟ್ಕಾ ಪ್ರಿಯರ ಬ್ರ್ಯಾಂಡ್ ಅಂಬಾಸಿಡರ್!

ಈ ಕೈಪಿಡಿಯೂ  ಜಾಗತಿಕ ಯುವ ತಂಬಾಕು ಸಮೀಕ್ಷೆ (GYTS) 2019ರ ಕಳವಳಕಾರಿ ಅಂಕಿ ಅಂಶಗಳನ್ನು ಎತ್ತಿ ತೋರಿಸುತ್ತಿದೆ. ಇದರಲ್ಲಿರುವ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಪ್ರತಿದಿನವೂ  13 ರಿಂದ 15 ವರ್ಷ ವಯಸ್ಸಿನ 8.5% ರಷ್ಟು ಶಾಲಾ ವಿದ್ಯಾರ್ಥಿಗಳು ವಿವಿಧ ರೂಪಗಳಲ್ಲಿ ತಂಬಾಕು ಸೇವಿಸುತ್ತಾರೆ. ಇನ್ನೂ ಆತಂಕಕಾರಿ ವಿಚಾರ ಎಂದರೆ ಪ್ರತಿದಿನವೂ ಹೊಸದಾಗಿ 5,500ಕ್ಕೂ ಹೆಚ್ಚು ಮಕ್ಕಳು ದಿನವೂ  ತಂಬಾಕು ಸೇವಿಸುವ ಚಟವನ್ನು  ಶುರು ಮಾಡ್ತಿದ್ದಾರೆ. 

ಈ ತಂಬಾಕು ಸೇವನೆ ಚಟವು  ಪ್ರಮುಖ  ಮಾರಕ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ. ಇದರ ಜೊತೆಗೆ ಇತರ  ಹಾನಿಕಾರಕ ಪದಾರ್ಥಗಳ ಸೇವನೆಗೆ ಇದು ರಹದಾರಿ ಮಾಡಿಕೊಡುತ್ತದೆ.  ಈ ಜಂಟಿ ಸಲಹಾವಳಿ ಪ್ರಕಾರ ಶೇಕಡಾ 55% ರಷ್ಟು ಜೀವಮಾನವಿಡಿ  ತಂಬಾಕು ಬಳಸುವವರು ತಮಗೆ 20 ವರ್ಷ ತುಂಬುವ ಮೊದಲೇ ಈ ಅಭ್ಯಾಸವನ್ನು ಶುರು ಮಾಡಿಕೊಂಡವರಾಗಿದ್ದಾರೆ. ಈ ಆತಂಕಕಾರಿ ಅಂಶವೂ ಈ ತಂಬಾಕು ಚಟಕ್ಕೆ ಒಳಗಾಗುತ್ತಿರುವ ಹದಿಹರೆಯದ ಮಕ್ಕಳನ್ನು ರಕ್ಷಿಸುವ ಮಹತ್ವದ ಬಗ್ಗೆ ಒತ್ತಿ ಹೇಳುತ್ತದೆ. 

ಆಂಧ್ರ ಪ್ರದೇಶಕ್ಕೆ ಮಾತ್ರ ಹೆಚ್ಚುವರಿ ತಂಬಾಕು ಮಾರಾಟಕ್ಕೆ ಕೇಂದ್ರ ಸರ್ಕಾರದಿಂದ ಓಕೆ: ಕರ್ನಾಟಕಕ್ಕೆ ಇಲ್ಲ

ತಂಬಾಕು ಮುಕ್ತ ಶಿಕ್ಷಣ ಸಂಸ್ಥೆ ಹೆಸರಿನ ಈ  ಕೈಪಿಡಿಯು ತಂಬಾಕು ವಿರೋಧಿ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಶಾಲೆಗಳಿಗೆ ಅಧಿಕಾರ ನೀಡುತ್ತದೆ. ಇದು ತಂಬಾಕು ಮುಕ್ತ ವಾತಾವರಣವನ್ನು ಶಾಲೆಗಳಲ್ಲಿ ಸೃಷ್ಟಿಸಲು ಶಿಕ್ಷಣ ಸಂಸ್ಥೆಗಳಿಗೆ ಹಂತ ಹಂತವಾದ ವಿವರಗಳನ್ನುಮತ್ತು ತಂತ್ರಗಳನ್ನು ಒದಗಿಸುತ್ತದೆ. ಧೂಮಪಾನ ಮತ್ತು ತಂಬಾಕು ಬಳಕೆಯ ಹಾನಿಕಾರಕ ಪರಿಣಾಮಗಳನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಬಯಸುತ್ತದೆ. 

ಈ ಸಲಹೆಯು ತಂಬಾಕು ವ್ಯಸನದ ಅಪಾಯಗಳಿಂದ ಯುವಜನರನ್ನು ರಕ್ಷಿಸಲು ಎಲ್ಲರ ಸಹಕಾರ ಹಾಗೂ  ಪ್ರಯತ್ನಗಳ ಅಗತ್ಯವನ್ನು ಒತ್ತಿಹೇಳುತ್ತದೆ. ಅಪ್ರಾಪ್ತ ಮಕ್ಕಳನ್ನು ಈ ತಂಬಾಕು ದುಶ್ಚಟದಿಂದ ಕಾಪಾಡುವುದಕ್ಕೆ  ರಾಷ್ಟೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಭಾಗವಾಗಿ ಟಿಒಎಫ್‌ಇಐ ಗೈಡ್‌ಲೈನ್‌ಗಳನ್ನು ಕೇಂದ್ರ ಆರೋಗ್ಯ ಸಚಿವಾಲಯವೂ ಬಿಡುಗಡೆ ಮಾಡಿದೆ.  ಶಾಲಾ ಶಿಕ್ಷಣ ಮಂಡಳಿ ಹಾಗೂ ಸಾಕ್ಷರತೆಯ ಸಹಕಾರದಿಂದ ಈ ಮಾರ್ಗಸೂಚಿ ಬಿಡುಗಡೆಯಾಗಿದೆ.

Latest Videos
Follow Us:
Download App:
  • android
  • ios