ಚಾಮರಾಜನಗರದ ಬಸವನಗುಡಿ ಗ್ರಾಮದಲ್ಲಿ ದಲಿತರಿಗೆಂದು ಮೀಸಲಿಟ್ಟಿದ್ದ ಸ್ಮಶಾನವೇ ಕಣ್ಮರೆ!
ಅವ್ರೆಲ್ಲಾ ಒಂದು ಕಾಲದಲ್ಲಿ ಕಾಡಲ್ಲೆ ಹುಟ್ಟಿ ಕಾಡಲ್ಲೆ ಬೆಳೆದು ಕಾಡಲ್ಲಿ ಮಣ್ಣಾಗುತ್ತಿದ್ದ ಸೋಲಿಗರು.. ಆದ್ರೆ ಕಾಲ ಚಕ್ರ ಉರುಳಿದಂತೆ. ಕಾಡನ್ನ ಬಿಟ್ಟು ನಾಡಿಗೆ ಬಂದ ಜನಾಂಗಕ್ಕೆ ಸರ್ಕಾರದಿಂದ ಸಕಲ ಸೌಲತ್ತು ನೀಡಲಾಯ್ತು.
ವರದಿ: ಪುಟ್ಟರಾಜು.ಆರ್. ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ (ಸೆ.21): ಅವ್ರೆಲ್ಲಾ ಒಂದು ಕಾಲದಲ್ಲಿ ಕಾಡಲ್ಲೆ ಹುಟ್ಟಿ ಕಾಡಲ್ಲೆ ಬೆಳೆದು ಕಾಡಲ್ಲಿ ಮಣ್ಣಾಗುತ್ತಿದ್ದ ಸೋಲಿಗರು.. ಆದ್ರೆ ಕಾಲ ಚಕ್ರ ಉರುಳಿದಂತೆ. ಕಾಡನ್ನ ಬಿಟ್ಟು ನಾಡಿಗೆ ಬಂದ ಜನಾಂಗಕ್ಕೆ ಸರ್ಕಾರದಿಂದ ಸಕಲ ಸೌಲತ್ತು ನೀಡಲಾಯ್ತು. ಇದೀಗ ಅಂತ ಕಾಡಿನ ಮಕ್ಕಳ ಮತ್ತೆ ಸಂಕಷ್ಟದಲ್ಲಿದ್ದಾರೆ. ಉಳ್ಳವರ ಉಪಟಳಕ್ಕೆ ಕಾಡಿನ ಮಕ್ಕಳಿಗಾ ಕಂಗಾಲಾಗಿದ್ದಾರೆ.
ಅರ್ಧ ಎಕರೆ ಜಮೀನಿನ ಸುತ್ತ ಹಾಕಿರೊ ಬೇಲಿ ತಂತಿ.. ಬೇಲಿ ತಂತಿ ಒಳಗೆ ಬೆಳೆದು ನಿಂತಿರೊ ಗಿಡ ಘಂಟಿಗಳು. ಪಕ್ಕದಲ್ಲೇ ತಲೆ ಎತ್ತಿ ನಿಂತಿರುವ ಮನೆಗಳು. ಈ ಎಲ್ಲಾ ದೃಶ್ಯ ಕಣ್ಣಿಗೆ ಬಿದ್ದಿದ್ದು ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಬಸವನಗುಡಿ ಗ್ರಾಮದಲ್ಲಿ..ಹೌದು ಅಂದ ಹಾಗೇ ಹೀಗೆ ತಲೆ ಎತ್ತಿ ನಿಂತಿರೊ ಮನೆ ನಿರ್ಮಾಣ ಆಗಿರುವುದು ಗಿರಿಜನರು, ದಲಿತರಿಗೆಂದೆ ಮೀಸಲಿಟ್ಟಿದ್ದ ಸ್ಮಶಾನದ ಜಾಗದಲ್ಲಿ.. ಹೌದು ಸರ್ವೆ ನಂಬರ್ 496 ರ ಪ್ರಕಾರ, ಸೋಲಿಗ, ಮಾದಿಗ ಜನಾಂಗ ಸೇರಿದಂತೆ ದಲಿತರಿಗಾಗಿ ಸ್ಮಶಾನಕ್ಕಾಗಿ ಒಂದುವರೆ ಎಕರೆಯಷ್ಟು ಜಾಗವನ್ನ ಮೀಸಲಿಡಲಾಗಿತ್ತು.
ಇಂದಿಗು ಆರ್.ಟಿ.ಸಿ. ಯಲ್ಲಿ ಸ್ಮಶಾನ ಎಂದೇ ನಮೂದಾಗಿದ್ದು ಆದ್ರೆ ಕೆಲವರು ಸುಳ್ಳು ದಾಖಲಾತಿಯನ್ನ ಸೃಷ್ಠಿಸಿ ಸ್ಮಶಾನವನ್ನು ತಮ್ಮದೆ ಜಾಗ ಎಂದು ಮಾರಾಟ ಮಾಡಿ ಈಗ ಸ್ಮಶಾನದಲ್ಲಿ ಅಕ್ರಮವಾಗಿ ಮನೆಯನ್ನ ನಿರ್ಮಾಣ ಮಾಡಲಾಗಿದೆ. ಬಸವನಗುಡಿ ಗ್ರಾಮವಿರುವುದು ಕಾಡಿನ ಸಮೀಪ.. ಈ ಗ್ರಾಮದಲ್ಲಿ ಕೊರಮಕತ್ರಿ ಹಾಗೂ ಸೋಲಿಗರು ವಾಸವಿದ್ದಾರೆ. ಈ ಹಿಂದೆ ಕಾಡಿನಲ್ಲೇ ಹುಟ್ಟಿ ಬೆಳೆದು ಕಾಡಿನಲ್ಲೇ ತಮ್ಮ ಜೀವನ ಸಾಗಿಸಿ ಕೊನೆಗೆ ಕಾಡಲ್ಲೇ ತಮ್ಮ ಜೀವವನ್ನ ಅಂತ್ಯವನ್ನಾಗಿಸಿ ಕೊಳ್ಳುತ್ತಿದ್ದವರಿಗೆ ಸರ್ಕಾರ ಸಕಲ ಸೌಲಭ್ಯದ ಭರವಸೆ ನೀಡಿ ಕಾಡಿನಿಂದ ನಾಡಿಗೆ ಕರೆ ತರಲಾಯ್ತು. ಆದ್ರೆ ಈಗ ಸರ್ಕಾರ ನೀಡಿದ ಸ್ಮಶಾನದ ಜಾಗವನ್ನೆ ಕೆಲವರು ತಮ್ಮ ಸೈಟ್ ಎಂದು ಮಾರಿ ನುಂಗಿ ಹಾಕಿದ್ದು ಈಗ ಮೃತ ಪಟ್ಟ ದೇಹಗಳ ಅಂತ್ಯ ಸಂಸ್ಕಾರವನ್ನ ಎಲ್ಲಿ ಮಾಡುವುದು ಎಂಬ ಆತಂಕ ಗ್ರಾಮಸ್ಥರಲ್ಲಿ ಮನೆ ಮಾಡಿದೆ.
ಚನ್ನಪಟ್ಟಣ ಉಪಚುನಾವಣೆಯಲ್ಲಿ ಯಾರೇ ಸ್ಪರ್ಧಿಸಿದರೂ ನಾನೇ ಅಭ್ಯರ್ಥಿ: ಡಿ.ಕೆ.ಶಿವಕುಮಾರ್
ಈ ಹಿಂದೆಯಾದ್ರೆ ಮರಣದ ಬಳಿಕ ಮೃತ ದೇಹವನ್ನ ಕಾಡಿಗೆ ತೆಗೆದುಕೊಂಡು ಅಂತ್ಯ ಸಂಸ್ಕಾರ ಮಾಡಲಾಗುತ್ತಿತ್ತು ಆದ್ರೆ ಈಗ ಟೈಗರ್ ರಿಸರ್ವ್ ಎಂದು ಘೋಷಣೆ ಮಾಡಿದ ಬಳಿಕ ಈಗ ಅಂತ್ಯ ಸಂಸ್ಕಾರಕ್ಕು ಅವಕಾಶವಿಲ್ಲದಂತಾಗಿದೆ. ಅದೇನೆ ಹೇಳಿ ಸ್ಮಶಾನದ ಜಾಗವನ್ನೆ ಉಳ್ಳವರು ಕಿತ್ತು ಕೊಂಡಿದ್ದಾರೆ.. ಅತ್ತ ಸೋಲಿಗರು ದಲಿತರಿಗೆ ಮಣ್ಣು ಮಾಡಲು ಇದ್ದ ಒಂದು ಸ್ಮಶಾನವು ಈಗ ಇಲ್ಲದಂತಾಗಿದೆ. ಇನ್ಮುಂದೆಯಾದ್ರು ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ದಲಿತರಿಗೆ ಆದ ಮೋಸಕ್ಕೆ ನ್ಯಾಯ ಕೊಡಿಸಲೆಂದೆ ನಮ್ಮ ಆಶಯವಾಗಿದೆ.