ಮೊದಲ ಸ್ಥಾನದಲ್ಲಿ ಅಮೆರಿಕಾದ 6,76,773 ಮಂದಿ, 2ನೇ ಸ್ಥಾನದಲ್ಲಿ ಚೀನಾದ ದೇಶದವರಿದ್ದು ಒಟ್ಟು 2,62,752 ಪ್ರವಾಸಿಗರಿದ್ದಾರೆ.

ಮುಂಬೈ(ನ.09): ನಾಸಾ ಸಂಸ್ಥೆ ಆಯೋಜಿಸಿರುವ ಮಂಗಳನ ಗ್ರಹ ಅಂತರಿಕ್ಷ ಪ್ರವಾಸಕ್ಕೆ ಭಾರತದಿಂದ 1,38,889 ಮಂದಿ ನೋಂದಾಯಿಸಿದ್ದಾರೆ. ಅಮೆರಿಕಾದ ಅಂತರಿಕ್ಷ ಸಂಸ್ಥೆ ಆಯೋಜಿಸಿರುವ ಮಂಗಳಗ್ರಹ ಪ್ರವಾಸ 2018, ಮೇ 5 ರಂದು ಉದ್ಘಾಟನೆಗೊಳ್ಳಲಿದ್ದು, ಪ್ರವಾಸಕ್ಕೆ ನೋಂದಾಯಿಸಿರುವವರಿಗೆ ಬೋರ್ಡಿ'ಗ್ ಪಾಸ್'ಗಳನ್ನು ಆನ್'ಲೈನ್ ಮೂಲಕ ವಿತರಿಸುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಂಗಳ ಪ್ರವಾಸಕ್ಕೆ ತೆರಳುವವರಲ್ಲಿ ಭಾರತೀಯರು 3ನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಅಮೆರಿಕಾದ 6,76,773 ಮಂದಿ, 2ನೇ ಸ್ಥಾನದಲ್ಲಿ ಚೀನಾದ ದೇಶದವರಿದ್ದು ಒಟ್ಟು 2,62,752 ಪ್ರವಾಸಿಗರಿದ್ದಾರೆ. ಈ ಯಾನಕ್ಕೆ ವಿಶ್ವಾದಾದ್ಯಂತ 24,29,807 ಮಂದಿ ನೋಂದಾಯಿಸಿದ್ದಾರೆ. ಒಟ್ಟು 720 ದಿನಗಳ ಯೋಜನೆಯಾಗಿದ್ದು, ಅಂತರಿಕ್ಷ ಯಾನಿಗಳು ಮಂಗಳ ಗ್ರಹದ ಬಳಿ ನವೆಂಬರ್ 26, 2018 ರಂದು ಇಳಿಯುವ ಸಾಧ್ಯತೆಯಿದೆ.

ನಾಸಾ ಈ ಯೋಜನೆಗಾಗಿ ಇನ್‌ಸೈಟ್ (ಇಂಟೀರಿಯರ್ ಎಕ್ಸ್‌ಪ್ಲೋರೇಷನ್ ಯೂಸಿಂಗ್ ಸಿಸ್ಮಿಕ್ ಇನ್ವೆಸ್ಟಿಗೇಷನ್, ಜಿಯೋಡೆಸಿ ಆ್ಯಂಡ್ ಹೀಟ್ ಟ್ರಾನ್ಸ್‌ಪೋರ್ಟ್) ವಿಶೇಷ ವಿಮಾನದ ಮೂಲಕ ಪ್ರಯಾಣಿಕರನ್ನು ಮಂಗಳನತ್ತ ರವಾನಿಸುತ್ತದೆ. ಈ ಯೋಜನೆಗೆ ಹೆಸರು ನೊಂದಾಯಿಸುವ ಪ್ರಕ್ರಿಯೆ ಕಳೆದ ವಾರ ಮುಕ್ತಾಯವಾಗಿದ್ದು, ಕೊನೆಯ ದಿನಾಂಕದಂದು ಬರುವ ಪ್ರಸ್ತಾವಗಳನ್ನು ತಿರಸ್ಕರಿಸಲಾಗುತ್ತದೆ ಎಂದು ನಾಸಾ ತಿಳಿಸಿದೆ. ಪ್ರವಾಸದಲ್ಲಿ ಏಕೈಕ ಕೆಂಪು ಗ್ರಹವಾದ ಮಂಗಳದ ವಿವಿಧ ಅಂಶಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತದೆ.