Asianet Suvarna News Asianet Suvarna News

Ola Cabs: ರೈಡ್‌ ಸ್ವೀಕರಿಸುವ ಮುನ್ನವೇ ಚಾಲಕರಿಗೆ ಡ್ರಾಪ್‌ಲೊಕೇಶನ್‌, ಪೇಮೆಂಟ್‌ ಮಾಹಿತಿ ಲಭ್ಯ!

*ಓಲಾ ಚಾಲಕರಿಗೆ ಡ್ರಾಪ್‌ ಲೊಕೇಶನ್‌, ಪೇಮೆಂಟ್‌  ಮಾಹಿತಿ
*ಬುಕ್ಕಿಂಗ್‌  ನಂತರ ಕ್ಯಾನ್ಸಲ್‌  ತಪ್ಪಿಸಲು ಈ ಕ್ರಮ
*ನನಗೆ ಕೇಳುವ 2ನೇ ಅತ್ಯಂತ ಜನಪ್ರಿಯ ಪ್ರಶ್ನೆ ಎಂದ ಸಿಇಓ

Ola aims to reduce driver cancellations by providing better location and payment visibility mnj
Author
Bengaluru, First Published Dec 22, 2021, 8:58 AM IST
  • Facebook
  • Twitter
  • Whatsapp

ನವದೆಹಲಿ (ಡಿ. 22): ಓಲಾ ಕ್ಯಾಬ್‌/ಆಟೋ ಚಾಲಕರು (Ola Auto-Cabs  ಇನ್ನು ಮುಂದೆ ಜನರಿಂದ ರೈಡ್‌ ಸ್ವೀಕರಿಸುವ ಮುನ್ನವೇ ಪ್ರಯಾಣಿಕರು ತಲುಪಬೇಕಿರವ ನಿಗದಿತ ಲೋಕೇಶನ್‌ (Location) ಹಾಗೂ ಪೇಮೆಂಟ್‌ ವಿಧಾನ (Payment Mode) ತಿಳಿಯಬಹುದಾದ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಇದರಿಂದ ಬುಕ್ಕಿಂಗ್‌ ಮಾಡಿದ ನಂತರ ಕ್ಯಾನ್ಸಲ್‌ (Cancel) ಆಗುವುದನ್ನು ತಪ್ಪಿಸಬಹುದಾಗಿದೆ. ಬೆಂಗಳೂರು ಮೂಲದ ಓಲಾ ಸಹ ಸಂಸ್ಥಾಪಕ ಭವಿಷ್‌ ಅಗರ್‌ವಾಲ್‌ (Bhavish Aggarwal) ಈ ಬಗ್ಗೆ ಟ್ವೀಟ್‌ ಮಾಡಿದ್ದಾರೆ.

ಈವರೆಗೆ ಪ್ರಯಾಣಿಕರು ಓಲಾ ಅಥವಾ ಊಬರ್‌ ಬುಕ್‌ ಮಾಡಿದಾಗ ಚಾಲಕರಿಗೆ, ಪ್ರಯಾಣಿಕರು ಹೋಗುವ ಸ್ಥಳ ಹಾಗೂ ಪೇಮೆಂಟ್‌ ಮೋಡ್‌ ಗೊತ್ತಾಗುತ್ತಿರಲಿಲ್ಲ. ಆಗ ಚಾಲಕರು ‘ಎಲ್ಲಿಗೆ ಹೋಗುತ್ತಿದ್ದೀರಿ’ ಹಾಗೂ ‘ಕ್ಯಾಷಾ? ಆನ್‌ಲೈನಾ?’ ಎಂದು ಕೇಳುತ್ತಿದ್ದರು. ‘ಆನ್‌ಲೈನ್‌’ ಎಂಬ ಉತ್ತರ ಬಂದಾಗ ‘ಕ್ಯಾಷ್‌ ಕೊಡಿ’ ಎಂದು ಒತ್ತಾಯಿಸುತ್ತಿದ್ದರು ಅಥವಾ ಬುಕ್ಕಿಂಗ್‌ ರದ್ದು ಮಾಡುತ್ತಿದ್ದರು. ಇದರಿಂದ ಪ್ರಯಾಣಿಕರಿಗೆ ಭಾರಿ ಫಜೀತಿ ಆಗಿ ಸಮಯ ವ್ಯರ್ಥವಾಗುತ್ತಿತ್ತು.

 

 

"ನನಗೆ ಕೇಳುವ 2ನೇ ಅತ್ಯಂತ ಜನಪ್ರಿಯ ಪ್ರಶ್ನೆಯನ್ನು ತಿಳಿಸುತ್ತಿದ್ದೇನೆ - ನನ್ನ ಚಾಲಕ ನನ್ನ ಓಲಾ ಸವಾರಿಯನ್ನು ಏಕೆ ರದ್ದುಗೊಳಿಸುತ್ತಾನೆ?!! ಈ ಉದ್ಯಮ-ವ್ಯಾಪಿ ಸಮಸ್ಯೆಯನ್ನು ಪರಿಹರಿಸಲು ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ... ಓಲಾ ಡ್ರೈವರ್‌ಗಳು ಈಗ ರೈಡ್‌ ಸ್ವೀಕರಿಸುವ ಮೊದಲು ಸರಿಸುಮಾರು ಡ್ರಾಪ್ ಸ್ಥಳ ಮತ್ತು ಪಾವತಿ ಮೋಡ್ ಅನ್ನು ನೋಡುತ್ತಾರೆ. ಚಾಲಕರಿಗೆ ಈ ಮಾಹಿತಿ ನೀಡುವುದು ರೈಡ್ ರದ್ದುಗೊಳಿಸುವಿಕೆಯನ್ನು ಕಡಿಮೆ ಮಾಡಲು ಸಹಾಯಕವಾಗುತ್ತೆ" ಎಂದು ಅಗರ್ವಾಲ್  ಡಿಸೆಂಬರ್ 21 ರಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಈ ಟ್ವೀಟ್‌ಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. " ನಾವು ಹೋಗುವ ಲೋಕೇಶನ್‌ ಮೊದಲೇ ಗೊತ್ತಾದರೆ, ಚಾಲಕರು ರೈಡ್‌ಗಳನ್ನೇ ಸ್ವೀಕರಿಸುವುದಿಲ್ಲ" ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ಇದೊಂದು ಉತ್ತಮ ಬೆಳವಣಿಗೆ ಎಂದು ಹೇಳಿದ್ದಾರೆ.

Ola, Uberಗೂ ಶೇ.5ರಷ್ಟು GST : ದುಬಾರಿಯಾಗಲಿದೆ ಆಟೋ ಸೇವೆ!

ಓಲಾ (Ola), ಊಬರ್‌ನಂಥ (Uber) ಇ-ಕಾಮರ್ಸ್‌ ವೇದಿಕೆಗಳ ಮೂಲಕ ಆಟೋ ರಿಕ್ಷಾ ಸೇವೆ  ಒದಗಿಸುವುದಕ್ಕೆ 2022 ಜನವರಿ 1ರಿಂದ ಶೇ.5ರಷ್ಟುಸರಕು ಮತ್ತು ಸೇವಾ ತೆರಿಗೆ (Goods and Service Tax) ವಿಧಿಸಲಾಗುತ್ತದೆ. ಇ-ಕಾಮರ್ಸ್‌ (E-Commerce) ವೇದಿಕೆಗಳ ಮೂಲಕ ಆಟೋ ರಿಕ್ಷಾ ಸೇವೆ ಒದಗಿಸುವವರಿಗೆ ನೀಡಲಾಗಿದ್ದ ಜಿಎಸ್‌ಟಿ (GST) ವಿನಾಯಿತಿಯನ್ನು ವಾಪಸ್‌ ಪಡೆಯುತ್ತಿರುವುದಾಗಿ ಕೇಂದ್ರ ಹಣಕಾಸು ಸಚಿವಾಲಯದ ಕಂದಾಯ ಇಲಾಖೆ (Ministry of finance) ನ.18ರಂದು ತಿಳಿಸಿದೆ. 

ಹೀಗಾಗಿ ಇಂಥ ಸೇವೆಗೆ ಜ.1, 2022ರಿಂದ ಶೇ.5ರಷ್ಟುಜಿಎಸ್‌ಟಿ ವಿಧಿಸಲಾಗುತ್ತದೆ. ಆದರೆ ಆಫ್‌ಲೈನ್‌ ಮೂಲಕ ಪ್ರಯಾಣಿಕ ಸೇವೆ ಒದಗಿಸುವ ರಿಕ್ಷಾ ಚಾಲಕರಿಗೆ ತೆರಿಗೆಯಿಂದ ವಿನಾಯಿತಿ ಮುಂದುವರೆಯುತ್ತದೆ. ಹೀಗಾಗಿ ಓಲಾ, ಊಬರ್‌ನಂಥ ಈ ಕಾಮರ್ಸ್‌ ವೇದಿಕೆಗಳಿಂದ ಆಟೋ ಬುಕ್‌ ಮಾಡುವ ಗ್ರಾಹಕರಿಗೆ ಇನ್ಮುಂದೆ ದುಬಾರಿ ಶುಲ್ಕ ಬೀಳಬಹುದು.

ಈ ಬದಲಾವಣೆ  ಆಟೋ ರಿಕ್ಷಾ ಚಾಲಕರನ್ನು ರೈಡರ್‌ಗಳೊಂದಿಗೆ (Rider) ಸಂಪರ್ಕಿಸುವ  ಇ-ಕಾಮರ್ಸ್ ಉದ್ಯಮ ಸಂಸ್ಥೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ.  ಕಡಿಮೆ ವೆಚ್ಚದ ಮತ್ತು ಹೆಚ್ಚು ಅನುಕೂಲಕರ ವ್ಯವಸ್ಥೆಯಿಂದಾಗಿ, ಇ-ಕಾಮರ್ಸ್ ವ್ಯಾಪಾರವು ಪ್ರಯಾಣಿಕರ ಸಾರಿಗೆ ಸೇವೆಗಳಿಗೆ ಅನುಕೂಲವಾಗುವಂತೆ ಮಾರುಕಟ್ಟೆಯಲ್ಲಿ ಬಹಳ ಮುಖ್ಯವಾದ ಸ್ಥಾನವನ್ನು ಪಡೆದಿದೆ. ಆದರೆ  ಜಿಎಸ್‌ಟಿ  ವಿನಾಯಿತಿಯನ್ನು ವಾಪಸ್‌ ಪಡೆಯುತ್ತಿರುವುದು ಈ ಸೇವೆಗಳನ್ನು ದುಬಾರಿಯಾಗಿಸಲಿದೆ.

ಇದನ್ನೂ ಓದಿ:

1) Card Stuck in ATM : ಎಟಿಎಂ ಯಂತ್ರದಲ್ಲಿ ಕಾರ್ಡ್ ಸಿಕ್ಕಿಬಿದ್ರೆ ಚಿಂತೆ ಬೇಡ,ಹೀಗೆ ಮಾಡಿ!

2) First Tesla Baby: ಆಟೋಪೈಲಟ್‌ನಲ್ಲಿ ಚಲಿಸುತ್ತಿದ್ದ ಟೆಸ್ಲಾ ಕಾರಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ!

3) App Privacy Report: ನಿಮ್ಮ ಐಫೋನ್‌ನನ್ನು ಟ್ರ್ಯಾಕ್ ಮಾಡುವ ಆ್ಯಪ್‌ಗಳನ್ನು ಪತ್ತೆ ಮಾಡುವುದು ಹೇಗೆ?

Follow Us:
Download App:
  • android
  • ios