App Privacy Report: ನಿಮ್ಮ ಐಫೋನ್‌ನನ್ನು ಟ್ರ್ಯಾಕ್ ಮಾಡುವ ಆ್ಯಪ್‌ಗಳನ್ನು ಪತ್ತೆ ಮಾಡುವುದು ಹೇಗೆ?

iOS 15.2 Update  ಹೊಸ ವೈಶಿಷ್ಟ್ಯ  App Privacy Report- ವಿವಿಧ ಅಪ್ಲಿಕೇಶನ್‌ಗಳಿಂದ ವೈಯಕ್ತಿಕ ಡೇಟಾ ಸಂಗ್ರಹಣೆಯ ಮಾಹಿತಿಯನ್ನು ಬಹಿರಂಗಪಡಿಸಲು ಸಹಾಯ ಮಾಡುತ್ತದೆ

How to Enable App Privacy Report on Your iPhone to Check Apps Tracking You mnj

Tech Desk: ಆ್ಯಪ್‌ಲ್‌ ಐಫೋನ್‌ ಟೆಕ್‌ ಜಗತ್ತಿನ ಪ್ರೀಮಿಯಂ ಫೋನ್‌ಗಳಲ್ಲೊಂದು. ಐಫೋನ್‌ ನೀಡುವ ಕೆಲವು ವಿಶಿಷ್ಟ ಫೀಚರ್‌ಗಳನ್ನು ಜನರು ಇಷ್ಟಪಡುತ್ತಾರೆ. ವಿಶೇಷವಾಗಿ  ಆ್ಯಪ್‌ಲ್ ತನ್ನ ಉತ್ಪನ್ನಗಳಲ್ಲಿ ನೀಡುವ ಸೆಕ್ಯೂರಿಟಿ ಫೀಚರ್‌ಗಾಗಿ ಹಲವರು ಐಫೋನ್‌ಗಳನ್ನು ಖರೀದಿಸುತ್ತಾರೆ.‌ ಹೀಗಾಗಿ ಆ್ಯಪ್‌ಲ್ ತನ್ನ ಅಪ್ಡೇಟ್‌ಗಳಲ್ಲಿ ಬಳಕೆದಾರರಿಗೆ ಹೊಸ ಫೀಚರ್ಸ್‌ ನೀಡುತ್ತಲೆ ಬಂದಿದೆ. ಈ ಪಟ್ಟಿಗೆ ಸೇರ್ಪಡೆ ಎಂಬಂತೆ  ಆ್ಯಪ್‌ಲ್  iOS 15  ಅಪ್ಡೇಟ್‌ನಲ್ಲಿ  ಅಪ್ಲಿಕೇಶನ್‌ ಪ್ರೈವೇಸಿ ರಿಪೋರ್ಟ್ (App Privacy Report) ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ.

ಜೂನ್‌ನಲ್ಲಿ ಕಂಪನಿಯ WWDC 2021 ಈವೆಂಟ್‌ನಲ್ಲಿ  iOS 15 ಅಪ್ಡೇಟ್ ಘೋಷಿಸಿದಾಗ ಆಪಲ್ ಬಹಿರಂಗಪಡಿಸಿದ ಅತ್ಯಂತ ಶಕ್ತಿಶಾಲಿ ಗೌಪ್ಯತೆ ವೈಶಿಷ್ಟ್ಯಗಳಲ್ಲಿ ಅಪ್ಲಿಕೇಶನ್‌ ಪ್ರೈವೇಸಿ ರಿಪೋರ್ಟ್ ಕೂಡ ಒಂದಾಗಿದೆ. ಈ ವೈಶಿಷ್ಟ್ಯವು ಬಳಕೆದಾರರು ತಮ್ಮ ಐಫೋನ್‌ನಲ್ಲಿ ತಮ್ಮ ಕ್ಯಾಮರಾ, ಮೈಕ್ರೊಫೋನ್, ಕಾಂಟ್ಯಾಕ್ಟ್ ಅಥವಾ ಅವರ ಲೊಕೆಶನ್ ಡೇಟಾವನ್ನು ಟ್ರ್ಯಾಕ್‌ ಮಾಡುವ ಅಪ್ಲಿಕೇಶನ್‌ಗಳ ಮೇಲೆ ಕಣ್ಣಿಡಲು ಅನುಮತಿಸುತ್ತದೆ. 

iOS 15.2 ಅಪ್‌ಡೇಟ್‌ನಲ್ಲಿ ಹೊಸ ವೈಶಿಷ್ಟ್ಯ ಬಿಡುಗಡೆ!

ಆ್ಯಪಲ್ ಸೆಪ್ಟೆಂಬರ್‌ನಲ್ಲಿ iOS 15 ಅನ್ನು ಬಿಡುಗಡೆ ಮಾಡಿದಾಗ, ಬಳಕೆದಾರರಿಗೆಪ್ರೈವೇಸಿ ರಿಪೋರ್ಟ್ ಪರಿಶೀಲಿಸುವ ಫೀಚರ್ ಒಳಗೊಂಡಿರಲಿಲ್ಲ. ಆದರೆ ಡಿಸೆಂಬರ್ 13 ರಂದು ಬಂದ iOS 15.2 ಅಪ್‌ಡೇಟ್‌ನಲ್ಲಿ ಇದನ್ನು ಸೇರಿಸಲಾಗಿದೆ. ಬಳಕೆದಾರರು ತಮ್ಮ ಮಾಹಿತಿಯನ್ನು ನಿರಂತರವಾಗಿ ಟ್ರ್ಯಾಕ್‌ ಮಾಡುತ್ತಿರುವ ಅಪ್ಲಿಕೇಶನ್‌ಗಳನ್ನು ಈಗ ಸುಲಭವಾಗಿ ಮೇಲ್ವಿಚಾರಣೆ ಮಾಡಬಹುದು ಮತ್ತು ಆ ಅಪ್ಲಿಕೇಶನ್‌ಗಳಿಗೆ ಅನುಮತಿಗಳನ್ನು ನಿರಾಕರಿಸಿ, ಯಾವ URL ಗಳ ಅಪ್ಲಿಕೇಶನ್‌ಗಳು ದಿನವಿಡೀ ಸಂಪರ್ಕಗೊಳ್ಳುತ್ತಿವೆ ಎಂಬುದನ್ನು ಪರೀಶೀಲಿಸಬಹುದು.

ನೀವು iPhone 6s ಅಥವಾ ಹೊಸ ಸ್ಮಾರ್ಟ್‌ಫೋನ್ ಹೊಂದಿದ್ದರೆ ಮತ್ತು iOS 15.2 ಗೆ ಅಪ್‌ಡೇಟ್ ಮಾಡಿದ್ದರೆ, ನಿಮ್ಮ ಲೊಕೆಶನ್ ಟ್ರ್ಯಾಕ್ ಮಾಡುವ ಅಥವಾ ನಿಮ್ಮ ಕ್ಯಾಮರಾ ರೋಲ್‌ಗೆ  ಆ್ಯಕ್ಸಸ್‌ ಪಡೆದಿರುವ Facebook, Twitter, Instagram ಅಥವಾ Tinder ನಂತಹ ಅಪ್ಲಿಕೇಶನ್‌ಗಳನ್ನು ನೀವು ತ್ವರಿತವಾಗಿ ಪರಿಶೀಲಿಸಲು ಮತ್ತು ನಿಲ್ಲಿಸಲು ಸಾಧ್ಯವಾಗುತ್ತದೆ. ಡೀಫಾಲ್ಟ್‌ ಆಗಿ ಈ ಫೀಚರ್‌ಅನ್ನು ಡಿಸೇಬಲ್‌ ಮಾಡಲಾಗಿದೆ. ಹಾಗಾಗಿ ಈ ವೈಶಿಷ್ಟ್ಯವನ್ನು ಬಳಕೆದಾರರು ಆ್ಯಕ್ಟಿವೇಟ್‌ ಮಾಡಬೇಕಾಗುತ್ತದೆ. 

App Privacy Report ಆ್ಯಕ್ಟಿವೇಟ್‌ ಮಾಡುವುದು ಹೇಗೆ?

1)Setting ಐಕಾನ್ ಮೇಲೆ ಟ್ಯಾಪ್ ಮಾಡಿ ಮತ್ತು Privacyಗೆ ಹೋಗಿ.

2)ಕೆಳಗೆ ಸ್ಕ್ರಾಲ್ ಮಾಡಿ ಮತ್ತು App Privacy Report ಟ್ಯಾಪ್ ಮಾಡಿ

3)ವೈಶಿಷ್ಟ್ಯವನ್ನು ಸಕ್ರಿಯಗೊಳಿಸಲು,  App Privacy Report- Turn On ಮಾಡಿ ಟ್ಯಾಪ್ ಮಾಡಿ.

4)ವರದಿಯಲ್ಲಿ ಸೇರಿಸಲಾದ ಅಪ್ಲಿಕೇಶನ್‌ಗಳ ಪಟ್ಟಿಯನ್ನು ನೋಡಲು ಕೆಲವು ನಿಮಿಷಗಳ ನಂತರ ಮತ್ತೆ ಪರಿಶೀಲಿಸಿ.

iOS 15 ನಲ್ಲಿನ ಅಪ್ಲಿಕೇಶನ್‌ ಪ್ರೈವೇಸಿ ರಿಪೋರ್ಟ್ ವೈಶಿಷ್ಟ್ಯವು ಬಳಕೆದಾರರಿಗೆ ಅನುಮತಿ ಬಳಕೆ, ನೆಟ್‌ವರ್ಕ್ ಚಟುವಟಿಕೆ, ವೆಬ್‌ಸೈಟ್ ನೆಟ್‌ವರ್ಕ್ ಚಟುವಟಿಕೆ ಮತ್ತು ಸ್ಮಾರ್ಟ್‌ಫೋನ್‌ನಲ್ಲಿ ಹೆಚ್ಚಾಗಿ ಸಂಪರ್ಕಿಸುವ ಡೊಮೇನ್‌ಗಳನ್ನು ಪರಿಶೀಲಿಸಲು ಸುಲಭವಾದ ಮಾರ್ಗವನ್ನು ನೀಡುತ್ತದೆ. ಈ ಮಾಹಿತಿಯನ್ನು ಆನ್ ಮಾಡಿದ ನಂತರ, ನೀವು ಮಾಹಿತಿಯನ್ನು ಹೇಗೆ ಅರ್ಥಮಾಡಿಕೊಳ್ಳಬಹುದು ಎಂಬುದು ಇಲ್ಲಿದೆ:

App Privacy Report ಚೆಕ್ ಮಾಡುವುದು ಹೇಗೆ?

1)Setting ಐಕಾನ್ ಮೇಲೆ ಟ್ಯಾಪ್ ಮಾಡಿ ಮತ್ತು Privacyಗೆ ಹೋಗಿ

2)ಕೆಳಗೆ ಸ್ಕ್ರಾಲ್ ಮಾಡಿ ಮತ್ತು App Privacy Report ಟ್ಯಾಪ್ ಮಾಡಿ

3)ಈಗ Data and Sensor Access ಅಡಿಯಲ್ಲಿ ಯಾವುದೇ ಅಪ್ಲಿಕೇಶನ್ ಅನ್ನು ಟ್ಯಾಪ್ ಮಾಡಿ ಮತ್ತು ಪ್ರವೇಶಿಸಿದ ವಿವಿಧ ಆ್ಯಪ್‌ ಅನುಮತಿಗಳ ಟೈಮ್‌ಲೈನ್ ಅನ್ನು ಪರಿಶೀಲಿಸಿ.

4)App Network Activity ಅಡಿಯಲ್ಲಿ ಅಪ್ಲಿಕೇಶನ್ ಎಷ್ಟು ಮತ್ತು ಯಾವ ಡೊಮೇನ್‌ಗಳನ್ನು ಪ್ರವೇಶಿಸಿದೆ ಎಂಬುದನ್ನು ನೋಡಲು ನಿಮಗೆ ಬೇಕಾದ ಅಪ್ಲಿಕೇಶನ್ ಅನ್ನು ಟ್ಯಾಪ್ ಮಾಡಿ.

5)ಆ ಡೊಮೇನ್‌ಗೆ ಯಾವ ಅಪ್ಲಿಕೇಶನ್‌ಗಳು ಪ್ರವೇಶಿಸಿವೆ ಎಂಬುದನ್ನು ನೋಡಲು Most Contacted Domains ಅಡಿಯಲ್ಲಿ ಕೆಲವು ಡೊಮೇನ್‌ಗಳನ್ನು ಟ್ಯಾಪ್ ಮಾಡಿ ಪರೀಕ್ಷೀಸಿ.

How to Enable App Privacy Report on Your iPhone to Check Apps Tracking You mnj

App Network Activity  ಮತ್ತು Most Contacted Domains ವಿಭಾಗಗಳನ್ನು ವಿವಧ ಅಪ್ಲಿಕೇಶನ್‌ಗಳು ನಿರ್ದಿಷ್ಟ ಡೊಮೇನ್ ಅನ್ನು ಪ್ರವೇಶಿಸುತ್ತಿದ್ದರೆ ಅದರ ಬಗ್ಗೆ  ತಿಳಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಆ್ಯಪ್‌ಲ್‌ ಹೇಳಿದೆ. ಈ ಅಪ್ಲಿಕೇಶನ್‌ಗಳು ನಿಮ್ಮ ಚಟುವಟಿಕೆಯನ್ನು ಸಂಯೋಜಿಸುವ ಮೂಲಕ ಡೊಮೇನ್ ಅಥವಾ ವೆಬ್‌ಸೈಟ್ ನಿಮ್ಮ ಪ್ರೊಫೈಲ್ ಅನ್ನು ನಿರ್ಮಿಸುತ್ತಿದೆ ಎಂಬುದರ ಸಂಕೇತವಾಗಿರಬಹುದು. ಹಾಗಾಗಿ ಬಳಕೆದಾರರಿಗೆ ಈಫೋನ್‌ ಈ ವೈಶಿಷ್ಟ್ಯ ನೀಡಿದೆ.

ಅಪ್ಲಿಕೇಶನ್‌ ಪ್ರೈವೇಸಿ ರಿಪೋರ್ಟ್ ವೈಶಿಷ್ಟ್ಯವು ನಿಮ್ಮ ಬಳಕೆಯ ಕೊನೆಯ ಏಳು ದಿನಗಳ ಡೇಟಾವನ್ನು ಸಂಗ್ರಹಿಸುತ್ತದೆ ಮತ್ತು ಪ್ರದರ್ಶಿಸುತ್ತದೆ, ಆದರೆ ನೀವು ಯಾವುದೇ ಸಮಯದ ಮಾಹಿತಿ ಪಡೆಯಲು ಅದನ್ನು ರಿಸೇಟ್‌ ಮಾಡಬಹುದು. iOS 15.2 ನಲ್ಲಿ ಅಪ್ಲಿಕೇಶನ್ ಗೌಪ್ಯತೆ ವರದಿಯನ್ನು ಮರುಹೊಂದಿಸಲು ಅಥವಾ ನಿಷ್ಕ್ರಿಯಗೊಳಿಸಲು ಹಂತಗಳು ಇಲ್ಲಿವೆ:‌

App Privacy Report ನಿಷ್ಕ್ರಿಯಗೊಳಿಸುವುದು ಹೇಗೆ?

1)Setting ಐಕಾನ್ ಮೇಲೆ ಟ್ಯಾಪ್ ಮಾಡಿ ಮತ್ತು Privacyಗೆ ಹೋಗಿ

2)ಕೆಳಗೆ ಸ್ಕ್ರಾಲ್ ಮಾಡಿ ಮತ್ತು App Privacy Report ಟ್ಯಾಪ್ ಮಾಡಿ

3)ಈಗ ಕೆಳಭಾಗದಲ್ಲಿರುವ Turn Off App Privacy Report ಟ್ಯಾಪ್ ಮಾಡಿ.

4)ನೀವು ವೈಶಿಷ್ಟ್ಯವನ್ನು ನಿಷ್ಕ್ರಿಯಗೊಳಿಸಲು ಬಯಸಿದರೆ, ಸೆಟ್ಟಿಂಗ್‌ಗಳ ಅಪ್ಲಿಕೇಶನ್‌ನಿಂದ ನಿರ್ಗಮಿಸಿ. ಬಳಕೆಯ ಡೇಟಾವನ್ನು ಮರುಹೊಂದಿಸಲು ಮತ್ತು ಹೊಸದಾಗಿ ಪ್ರಾರಂಭಿಸಲು, ಲೇಖನದ ಆರಂಭದಲ್ಲಿ ತಿಳಿಸಲಾದ ಹಂತಗಳನ್ನು ಬಳಸಿಕೊಂಡು ಅಪ್ಲಿಕೇಶನ್ ಅಪ್ಲಿಕೇಶನ್‌ ಪ್ರೈವೇಸಿ ರಿಪೋರ್ಟ್ ಸಕ್ರಿಯಗೊಳಿಸಿ.

Latest Videos
Follow Us:
Download App:
  • android
  • ios