ನವದೆಹಲಿ[ಡಿ.09]: ಗ್ರಾಹಕರು ತಮ್ಮ ಮೊಬಬೈಲ್ ಪೋನಿನ ಕರೆಗಳ ವಿವರಗಳ ಮೆಲೆ ಕಣ್ಗಾವಲು ವಹಿಸಲಾಗಿದೆಯೇ ಎಂಬುವುದರ ಬಗ್ಗೆ ಮಾಹಿತಿ ಹಕ್ಕು ಕಾಯ್ದೆ ಮೂಲಕ ಪಡೆಯಬಹುದಾಗಿದೆ.

ಪಾರದರ್ಶಕತೆ ಕಾಪಾಡಲು ಗ್ರಾಹಕರ ಮೊಬೈಲ್ ವಿವರಗಳ ಮೇಲೆ ಕಣ್ಗಾವಲು ವಹಿಸಲಾಗಿದೆಯೇ ಎಂಬುವುದರ ಬಗ್ಗೆ ಗ್ರಾಹಕರಿಗೆ ಆರ್‌ಟಿಐ ಅಡಿ ಮಾಹಿತಿ ನೀಡಬೇಕು ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ[ಟ್ರಾಯ್]ಕ್ಕೆ ದೆಹಲಿ ಹೈ ಕೋರ್ಟ್‌ ಸೂಚನೆ ನೀಡಿದೆ.

ಈ ಬಗ್ಗೆ ಕಬೀರ್ ಶಂಕರ್ ಬೋಸ್ ಎಂಬ ವಕೀಲರೊಬ್ಬರು ಸ್ಲಲಿಸಿದ್ದ ಅರ್ಜಿ ವಿಚಾರಣೆ ವೇಳೆ ಕೋರ್ಟ್‌ ಈ ಆದೇಶ ನೀಡಿದೆ.