ಕೇವಲ 249 ರೂ.ಗೆ ಸಿಗಲಿದೆ ಐಕಾಲ್ ಕೆ71 ಮೊಬೈಲ್

Now you can buy a feature phone for as low as Rs 249
Highlights

ದೇಶದ ಅತ್ಯಂತ ಕಡಿಮೆ ಬೆಲೆಯ ಫೀಚರ್ ಫೋನ್ ಐಕಾಲ್ ಕೆ71 ಅನ್ನು ಶಾಪ್'ಕ್ಲೂಸ್ ಕಂಪೆನಿ ಬಿಡುಗಡೆ ಮಾಡಿದೆ.

ಬೆಂಗಳೂರು (ಫೆ.03): ದೇಶದ ಅತ್ಯಂತ ಕಡಿಮೆ ಬೆಲೆಯ ಫೀಚರ್ ಫೋನ್ ಐಕಾಲ್ ಕೆ71 ಅನ್ನು ಶಾಪ್'ಕ್ಲೂಸ್ ಕಂಪೆನಿ ಬಿಡುಗಡೆ ಮಾಡಿದೆ.

ಈ ಫೋನ್ ಕೇವಲ 249 ರೂ,ಗೆ ಶಾಪ್'ಕ್ಲೂಸ್‌ನಲ್ಲಿ ಲಭ್ಯವಿರುತ್ತದೆ. ಬುಕ್ ಮಾಡಿದ 24 ಗಂಟೆಗಳಲ್ಲಿ ಮೊಬೈಲ್ ಗ್ರಾಹಕರ ಕೈ ಸೇರಲಿದ್ದು 1 ವರ್ಷದ ವಾರೆಂಟಿ ಇರುತ್ತೆ. ಐಕಾಲ್ ಕೆ 71 ಸಿಂಗಲ್ ಸಿಮ್ ಫೋನ್‌ಆಗಿದ್ದು 800 ಎಂಎಎಚ್ ಬ್ಯಾಟರಿ ಹೊಂದಿರುತ್ತದೆ. ಈ ಫೋನ್ 1.4 ಇಂಚುಗಳ ಮೊನೊಕ್ರೋಮ್ ಡಿಸ್‌'ಪ್ಲೇ ಜೊತೆಗೆ ಎಫ್‌ಎಂ ರೇಡಿಯೋ ಮತ್ತು ಟಾರ್ಚ್ ಸೌಲಭ್ಯ ಒಳಗೊಂಡಿದೆ. ಐಕಾಲ್ ಕೆ71  ಟ್ರೆಂಡಿ ನಿಯಾನ್ ಬಣ್ಣಗಳಾದ ಕೆಂಪು, ಹಳದಿ, ನೀಲಿ ಮತ್ತು ಗಾಢ ನೀಲಿ ಛಾಯೆಗಳಲ್ಲಿ ಬಿಐಎಸ್ ಮಾನ್ಯತೆಯೊಂದಿಗೆ ಲಭ್ಯವಿರುತ್ತವೆ.

loader