Asianet Suvarna News Asianet Suvarna News

Whatsapp ಹೊಸ ಫೀಚರ್: ಇನ್ನು ತಲೆ ನೋವಿಲ್ಲ, ಗ್ರೂಪ್‌ಗೆ ಸೇರಲು 3 ಆಪ್ಷನ್‌!

ವಾಟ್ಸಾಪ್‌ನಲ್ಲಿನ್ನು ನಿಮ್ಮನ್ನು ಕೇಳಿಯೇ ಗ್ರೂಪ್‌ಗೆ ಸೇರಿಸಬೇಕು!| ಗ್ರೂಪ್‌ಗೆ ಸೇರಲು ಬಳಕೆದಾರರಿಗೆ 3 ಆಪ್ಷನ್‌ ನೀಡಿದ ವಾಟ್ಸಾಪ್‌| 

Now WhatsApp Users Can Decide Who Adds Them To Groups
Author
Bangalore, First Published Apr 4, 2019, 10:34 AM IST

ನವದೆಹಲಿ[ಏ.04]: ಹೇಳದೆ ಕೇಳದೆ ಜನರು ನಿಮ್ಮನ್ನು ಯಾವ್ಯಾವುದೋ ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಸೇರಿಸುವುದರಿಂದ ನಿಮಗೆ ಕಿರಿಕಿರಿಯಾಗುತ್ತಿದೆಯೇ? ಹಾಗಿದ್ದರೆ ಇನ್ನು ಚಿಂತೆ ಬೇಡ. ನೀವು ಒಪ್ಪಿಗೆ ನೀಡಿದರಷ್ಟೇ ಗ್ರೂಪ್‌ಗೆ ಸೇರಿಸಲು ಸಾಧ್ಯವಿರುವ ಆಯ್ಕೆಯನ್ನು ವಾಟ್ಸ್‌ಆ್ಯಪ್‌ ನೀಡಿದೆ. ನಿನ್ನೆಯಿಂದಲೇ ಇದು ಜಾರಿಗೆ ಬಂದಿದ್ದು, ಆ್ಯಪ್‌ ಅಪ್‌ಡೇಟ್‌ ಮಾಡಿಕೊಂಡರೆ ಕೆಲವೇ ದಿನಗಳಲ್ಲಿ ಎಲ್ಲರಿಗೂ ಈ ಆಯ್ಕೆ ಸಿಗಲಿದೆ.

ದೇಶದಲ್ಲಿ ಚುನಾವಣೆಯ ಕಾವು ಏರುತ್ತಿರುವ ಹೊತ್ತಿನಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ಪ್ರಚಾರಕ್ಕಾಗಿ ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಜನರನ್ನು ಬೇಕಾಬಿಟ್ಟಿ ಸೇರಿಸುತ್ತಿದ್ದಾರೆಂಬ ಟೀಕೆಗಳಿವೆ. ಈ ವೇಳೆಯಲ್ಲೇ ಹೊಸ ಆಯ್ಕೆ ವಾಟ್ಸ್‌ಆ್ಯಪ್‌ ಬಳಕೆದಾರರಿಗೆ ಲಭ್ಯವಾಗುತ್ತಿರುವುದು ವಿಶೇಷ.

ನಿಮ್ಮ ಮೊಬೈಲ್‌ನಲ್ಲಿ ಈ ಫೀಚರ್‌ ಅಳವಡಿಸಿಕೊಳ್ಳಲು ನೀವು ಮಾಡಬೇಕಿರುವುದು ಇಷ್ಟು:

ವಾಟ್ಸ್‌ಆ್ಯಪ್‌ನಲ್ಲಿ ‘ಸೆಟ್ಸಿಂಗ್ಸ್‌’ಗೆ ಹೋಗಿ. ಅಲ್ಲಿ ಈ ಮೂರರಲ್ಲಿ ಒಂದು ಆಯ್ಕೆ ಆಯ್ದುಕೊಳ್ಳಿ - ನೋಬಡಿ, ಮೈ ಕಾಂಟಾಕ್ಟ್ಸ್, ಎವೆರಿಒನ್‌. ನೀವು ನೋಬಡಿ ಆಯ್ಕೆ ಮಾಡಿಕೊಂಡರೆ ಯಾರೂ ನಿಮ್ಮ ಒಪ್ಪಿಗೆಯಿಲ್ಲದೆ ನಿಮ್ಮನ್ನು ಗ್ರೂಪ್‌ಗೆ ಸೇರಿಸಲು ಸಾಧ್ಯವಿಲ್ಲ. ಸೇರಿಸಬೇಕು ಅಂದರೆ ನಿಮಗೆ ಆಹ್ವಾನ ಕಳಿಸಬೇಕು. ಅದಕ್ಕೆ 3 ದಿನದ ವ್ಯಾಲಿಡಿಟಿ ಇರುತ್ತದೆ. ಅಷ್ಟರೊಳಗೆ ನೀವು ಒಪ್ಪಿಕೊಂಡರೆ ಸೇರಿಸಬಹುದು. ಇಲ್ಲದಿದ್ದರೆ ಆಹ್ವಾನ ರದ್ದಾಗುತ್ತದೆ.

ಮೈ ಕಾಂಟಾಕ್ಟ್ಸ್ ಆಯ್ಕೆ ಮಾಡಿಕೊಂಡರೆ ನಿಮ್ಮ ಅಡ್ರೆಸ್‌ ಬುಕ್‌ನಲ್ಲಿರುವ ವ್ಯಕ್ತಿಗಳು ಮಾತ್ರ ಅವರ ಗ್ರೂಪ್‌ಗೆ ನಿಮ್ಮನ್ನು ಸೇರಿಸಬಹುದು. ಆಗಲೂ ಅವರು ಆಹ್ವಾನ ನೀಡಿಯೇ ಸೇರಿಸಬೇಕು. ಇನ್ನು, ಎವೆರಿಒನ್‌ ಆಯ್ಕೆ ಮಾಡಿಕೊಂಡರೆ ಈಗಿರುವಂತೆಯೇ ಯಾರು ಬೇಕಾದರೂ ನಿಮ್ಮನ್ನು ಯಾವುದೇ ಗ್ರೂಪ್‌ಗೆ ಸೇರಿಸಬಹುದು.

ಈ ಹೊಸ ಫೀಚರ್‌ನಿಂದ ವಾಟ್ಸ್‌ಆ್ಯಪ್‌ ಬಳಕೆದಾರರಿಗೆ ಗ್ರೂಪ್‌ ಮೆಸೇಜ್‌ಗಳ ಮೇಲೆ ಹೆಚ್ಚಿನ ಹಿಡಿತ ಲಭ್ಯವಾಗಲಿದೆ ಎಂದು ಫೇಸ್‌ಬುಕ್‌ ಒಡೆತನದ ವಾಟ್ಸ್‌ಆ್ಯಪ್‌ ಕಂಪನಿ ಹೇಳಿಕೊಂಡಿದೆ.

ನೀವು ಏನು ಮಾಡಬೇಕು?

ವಾಟ್ಸ್‌ ಆ್ಯಪ್‌ನಲ್ಲಿ ‘ಸೆಟ್ಸಿಂಗ್ಸ್‌’ಗೆ ಹೋಗಿ. ಅಲ್ಲಿ ಈ ಮೂರರಲ್ಲಿ ಒಂದು ಆಯ್ಕೆ ಆಯ್ದುಕೊಳ್ಳಿ - ನೋಬಡಿ, ಮೈ ಕಾಂಟಕ್ಟ್ಸ್, ಎವೆರಿಒನ್‌.

ಯಾವ್ಯಾವ ಆಯ್ಕೆ, ಏನು ಲಾಭ?

- ನೋಬಡಿ: ನೋಬಡಿ ಆಯ್ಕೆ ಮಾಡಿಕೊಂಡರೆ ಯಾರೂ ನಿಮ್ಮ ಒಪ್ಪಿಗೆಯಿಲ್ಲದೆ ನಿಮ್ಮನ್ನು ಗ್ರೂಪ್‌ಗೆ ಸೇರಿಸಲು ಸಾಧ್ಯವಿಲ್ಲ. ಸೇರಿಸಬೇಕು ಅಂದರೆ ನಿಮಗೆ ಆಹ್ವಾನ ಕಳಿಸಬೇಕು. ಅದಕ್ಕೆ 3 ದಿನದ ವ್ಯಾಲಿಡಿಟಿ ಇರುತ್ತದೆ. ಅಷ್ಟರೊಳಗೆ ನೀವು ಒಪ್ಪಿಕೊಂಡರೆ ಸೇರಿಸಬಹುದು. ಇಲ್ಲದಿದ್ದರೆ ಆಹ್ವಾನ ರದ್ದಾಗುತ್ತದೆ.

- ಮೈ ಕಾಂಟಾಕ್ಟ್ಸ್: ಈ ಸೌಲಭ್ಯ ಆಯ್ಕೆ ಮಾಡಿಕೊಂಡರೆ ನಿಮ್ಮ ಅಡ್ರೆಸ್‌ ಬುಕ್‌ನಲ್ಲಿರುವ ವ್ಯಕ್ತಿಗಳು ಮಾತ್ರ ಅವರ ಗ್ರೂಪ್‌ಗೆ ನಿಮ್ಮನ್ನು ಸೇರಿಸಬಹುದು. ಆಗಲೂ ಅವರು ಆಹ್ವಾನ ನೀಡಿಯೇ ಸೇರಿಸಬೇಕು.

- ಎವೆರಿಒನ್‌: ಇದನ್ನು ಆಯ್ಕೆ ಮಾಡಿಕೊಂಡರೆ ಈಗಿರುವಂತೆಯೇ ಯಾರು ಬೇಕಾದರೂ ನಿಮ್ಮನ್ನು ಯಾವುದೇ ಗ್ರೂಪ್‌ಗೆ ಸೇರಿಸಬಹುದು.

Follow Us:
Download App:
  • android
  • ios