ಈ ನೂತನ ಪ್ಯಾಕ್‌ಗಳು 28 ದಿನಗಳ ಕಾಲ ಇರಲಿದ್ದು, 50 ಎಂಬಿ ಡೇಟಾ ಉಚಿತವಾಗಿ ಸಿಗಲಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ನವದೆಹಲಿ(ಡಿ.10): ಏರ್‌ಟೆಲ್ ಮತ್ತು ಐಡಿಯಾ ಟೆಲಿಕಾಮ್ ಮಾದರಿಯಲ್ಲೇ ಇದೀಗ ವೊಡಾಫೋನ್ ಸಹ ತನ್ನ ಪ್ರೀಪೇಯ್ಡ್ ಗ್ರಾಹಕರಿಗೆ ಅನಿಯಮಿತ ಉಚಿತ ಕರೆಯ ಸೌಲಭ್ಯ ನೀಡಲು ಮುಂದಾಗಿದೆ.

ಗ್ರಾಹಕರಿಗೆ ಕೇವಲ ₹144 ಮತ್ತು ₹344 ದರಗಳಲ್ಲಿ ವೊಡಾಫೋನ್ ಉಚಿತ ಕರೆಯ ಸೌಲಭ್ಯ ನೀಡಲು ನಿರ್ಧರಿಸಿದೆ.

ಈ ನೂತನ ಪ್ಯಾಕ್‌ಗಳು 28 ದಿನಗಳ ಕಾಲ ಇರಲಿದ್ದು, 50 ಎಂಬಿ ಡೇಟಾ ಉಚಿತವಾಗಿ ಸಿಗಲಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

‘‘ನಾವು ಭಾರತದ ಯಾವುದೇ ಪ್ರದೇಶದಲ್ಲಿದ್ದವರಿಗೆ ಉಚಿತ ರೋಮಿಂಗ್ ವ್ಯವಸ್ಥೆ ಕಲ್ಪಿಸುತ್ತಿದ್ದೇವೆ. 4ಜಿ ಸೌಲಭ್ಯ ಹೊಂದಿರುವ ಗ್ರಾಹಕರು 1ಜಿಬಿ ಉಚಿತ ಡೇಟಾ ಪಡೆಯಬಹುದಾಗಿದೆ,’’ ಎಂದು ವೊಡಾಫೋನ್ ಮುಖ್ಯ ವಾಣಿಜ್ಯಾಧಿಕಾರಿ ಸಂದೀಪ್ ಕಟಾರಿಯಾ ತಿಳಿಸಿದ್ದಾರೆ.