ಮಾರ್ಕೆಟ್ಸ್ ಡೇ ಕಾರ್ಯಕ್ರಮದಲ್ಲಿ ಹೊಸ ಸ್ಮಾರ್ಟ್ ಫೋನನ್ನ ಪರಿಚಯಿಸಲಿದ್ದು, 2017ರಲ್ಲಿ ಗ್ರಹಕರ ಕೈಗೆ ಸಿಗಲಿದೆ ಎಂದು ಕಂಪನಿ ಸ್ಪಷ್ಟಪಡಿಸಿರುವುದಾಗಿ ವರದಿಯಾಗಿದೆ.

ನವದೆಹಲಿ(ನ.19); ಜಗತ್ತಿನಾದ್ಯಂತ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ನೋಕಿಯಾ ಕಂಪನಿ ತನ್ನ ಸ್ಮಾರ್ಟ್ ಫೋನನ್ನ ಸದ್ಯದಲ್ಲೇ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಉತ್ಕೃಷ್ಟ ಮೊಬೈಲ್ ಫೋನ್ ಉತ್ಪಾದನೆಯಲ್ಲಿ ಹೆಸರುಮಾಡಿದ್ದ ನೋಕಿಯಾ ಸಂಸ್ಥೆ ತಮ್ಮ ಹಳೆಯ ಇಮೇಜ್ ಬಳಸಿಕೊಂಡು ಅಷ್ಟೇ ಗುಣಮಟ್ಟದ ಸ್ಮಾರ್ಟ್ ಫೋನನ್ನ 2017ಕ್ಕೆ ಮಾರುಕಟ್ಟೆಗೆ ತರಲಿದೆ.

ಮಾರ್ಕೆಟ್ಸ್ ಡೇ ಕಾರ್ಯಕ್ರಮದಲ್ಲಿ ಹೊಸ ಸ್ಮಾರ್ಟ್ ಫೋನನ್ನ ಪರಿಚಯಿಸಲಿದ್ದು, 2017ರಲ್ಲಿ ಗ್ರಹಕರ ಕೈಗೆ ಸಿಗಲಿದೆ ಎಂದು ಕಂಪನಿ ಸ್ಪಷ್ಟಪಡಿಸಿರುವುದಾಗಿ ವರದಿಯಾಗಿದೆ.