ಬಹುನಿರೀಕ್ಷೆಯ Nokia 8.1 ಬಿಡುಗಡೆ; ಹೊಸ OS ಬಳಸಿರುವ ಮೊದಲ ಫೋನ್!
Nokia 8.1 ಮಾರುಕಟ್ಟೆಗೆ ಎಂಟ್ರಿ ನೀಡಿದೆ. Android 9.0 Pie ತಂತ್ರಜ್ಞಾನ ಹೊಂದಿರುವ ಪ್ರಪ್ರಥಮ ಫೋನ್ ಇದಾಗಿದ್ದು, ಒಮ್ಮೆ ಚಾರ್ಜ್ ಮಾಡಿದರೆ ಬರೋಬ್ಬರಿ 2 ದಿನ ಬಳಸಬಹುದಾಗಿದೆ!
ಬಹುನಿರೀಕ್ಷಿತ Nokia 8.1ನ್ನು HMD Global ಅಂತರಾಷ್ಟ್ರೀಯ ಮಾರುಕಟ್ಟೆಗೆ ಬಿಟ್ಟಿದೆ. ಈ ತಿಂಗಳಿನಾಂತ್ಯದಲ್ಲಿ ಭಾರತದ ಮಾರುಕಟ್ಟೆಯಲ್ಲೂ Nokia 8.1 ಫೋನ್ ಲಭ್ಯವಾಗಲಿದೆ. Nokia 8.1 ಅನ್ನು, ಈ ವರ್ಷಾರಂಭದಲ್ಲಿ ಬಿಡುಗಡೆಯಾದ Nokia 7.1 ಫೋನಿನ ಮುಂದುವರಿದ ಭಾಗವೆನ್ನಬಹುದು.
Android 9.0 Pie ತಂತ್ರಜ್ಞಾನ ಹೊಂದಿರುವ ಪ್ರಪ್ರಥಮ ಫೋನ್ ಇದಾಗಿದ್ದು, ಒಮ್ಮೆ ಚಾರ್ಜ್ ಮಾಡಿದರೆ ಬರೋಬ್ಬರಿ 2 ದಿನ ಬಳಸಬಹುದೆಂದು ಕಂಪನಿಯು ಹೇಳಿದೆ.
Nokia 8.1 ಕೂಡಾ ನಾಚ್ಡ್ ಡಿಸ್ಪ್ಲೇ ಹೊಂದಿದ್ದು, ಹಿಂಬದಿಯಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಹೊಂದಿದೆ. Nokia 7.1 ಗೆ ಹೋಲಿಸಿದರೆ, Nokia 8.1 ಹೆಚ್ಚು ಕಾಂಪ್ಯಾಕ್ಟ್ ಆಗಿದ್ದು, ಒಂದೇ ಕೈಯಲ್ಲಿ ಬಳಸಬಹುದಾಗಿದೆ.
ಇದನ್ನೂ ಓದಿ: ವಿಶ್ವದ ಮೊದಲ 5G ಪೋನ್‌ನ ಡೆಮೋ ಕೊಟ್ಟ Xiaomi! ಹೇಗಿದೆ ನೋಡಿ...
Nokia 8.1 ಫೀಚರ್ ಗಳು
- ಡಿಸ್ಪ್ಲೇ : 6.1-ಇಂಚು 2280x1080 ಪಿಕ್ಸೆಲ್ಸ್
- ಆಪರೇಟಿಂಗ್ ಸಿಸ್ಟಮ್ (OS) : Android 9.0 Pie
- ಪ್ರೊಸೆಸರ್ : Octa-core Snapdragon 710
- RAM: 4GB
- ಸ್ಟೋರೆಜ್: 64GB
- ಹಿಂಬದಿ ಕ್ಯಾಮೆರಾ: 12MP + 13MP
- ಮುಂಬದಿ ಕ್ಯಾಮೆರಾ: 20MP
- ಬ್ಯಾಟರಿ: 3500mAh
ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಸ್ಟೋರೆಜನ್ನು 400 GB ವರೆಗೂ ವಿಸ್ತರಿಸಬಹುದಾಗಿದೆ. ಕಂಪನಿಯು ಬೆಲೆಯನ್ನು ಇನ್ನೂ ಪ್ರಕಟಿಸಿಲ್ಲವಾದರೂ, ₹25,000-₹ 30,000 ವರೆಗೆ ಇರಬಹುದೆಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ವೈರಸ್ ಹಾವಳಿ, 22 ಆ್ಯಪ್ ಪ್ಲೇಸ್ಟೋರ್‌ನಿಂದ ಡಿಲೀಟ್! ನಿಮ್ಮ ಫೋನಿನಲ್ಲಿದಿಯಾ?