ನಿಸಾನ್ ಕಿಕ್ಸ್ ಎಸ್‌ಯುವಿ ಕಾರು ಬಿಡುಗಡೆ ತಡವಾಗಿದೆ. 2018ರಲ್ಲಿ ಬಿಡುಗಡೆಯಾಗಬೇಕಿದ್ದ ನಿಸಾನ್ ಕಿಕ್ಸ್ ಇದೀಗ 2019ರ ಆರಂಭದಲ್ಲಿ ಬಿಡುಗಡೆಯಾಗಲಿದೆ ಎಂದು ನಿಸಾನ್ ಸಂಸ್ಥೆ ಹೇಳಿದೆ. ನಿಸಾನ್ ಬಿಡುಗಡೆಗೆ ತಡವಾಗಲು ಕೆಲ ಕಾರಣಗಳಿವೆ.
ಬೆಂಗಳೂರು(ಜೂನ್.9): ನಿಸಾನ್ ಕಾರು ಸಂಸ್ಥೆಯ ಬಹು ನಿರೀಕ್ಷಿತ ನಿಸಾನ್ ಕಿಕ್ಸ್ ಕಾರು 2019ರ ವೇಳೆಗೆ ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ನಿಸಾನ್ ಸಂಸ್ಥೆ ಪ್ರಕಾರ 2018ರ ಮಧ್ಯಭಾಗದಲ್ಲಿ ನಿಸಾನ್ ಕಿಕ್ಸ್ ಭಾರತದ ಮಾರುಕಟ್ಟೆ ಪ್ರವೇಶಿಸಬೇಕಿತ್ತು. ಆದರೆ 2019ರ ಆರಂಭದಲ್ಲಿ ಕಿಕ್ಸ್ ಕಾರನ್ನ ಭಾರತಕ್ಕೆ ಪರಿಚಯಿಸಲು ನಿಸಾನ್ ಸಜ್ಜಾಗಿದೆ.

ನಿಸಾನ್ ಕಿಕ್ಸ್ ಎಸ್‌ಯುವಿ ಇಂಜಿನ್ ಕಾರು, ಹುಂಡೈ ಕ್ರೆಟಾ, ರೆನಾಲ್ಟ್ ಡಸ್ಟರ್, ರೆನಾಲ್ಟ್ ಕ್ಯಾಪ್ಟರ್, ಫೋರ್ಡ್ ಇಕೋಸ್ಪೋರ್ಟ್ ಸೇರಿದಂತೆ ಎಸ್‌ಯುವಿ ಕಾರುಗಳಿಗೆ ಸ್ಪರ್ಧೆ ನೀಡಲು ಸಜ್ಜಾಗಿದೆ. ಕಡಿಮೆ ಬೆಲೆಯಲ್ಲಿ ಭಾರತೀಯ ಗ್ರಾಹಕರಿಗೆ ನೀಡಲು ನಿಸಾನ್ ಸಜ್ಜಾಗಿದೆ. ಹೀಗಾಗಿ ನಿಸಾನ್ ಕಿಕ್ಸ್ ಬಿಡುಗಡೆ ತಡವಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ನಿಸಾನ್ ಕಿಕ್ಸ್ 1.6 ಪೆಟ್ರೋಲ್ ಇಂಜಿನ್ ಹೊಂದಿದೆ. ವಿನ್ಯಾಸದಲ್ಲೂ ಹೆಚ್ಚು ಆಕರ್ಷಕವಾಗಿ ಕಾಣಲಿದೆ. ಎಸ್‌ಯುವಿ ಇಂಜಿನ್ ಕಾರುಗಳಿಗೆ ಬಾರಿ ಕಾಂಪೀಟೀಶನ್ ನೀಡಲು ಇದೀಗ ಕಿಕ್ಸ್ ರೆಡಿಯಾಗಿದೆ. ಆದರೆ ಇದರ ಬೆಲೆ ಇನ್ನು ಬಹಿರಂಗವಾಗಿಲ್ಲ.
