ಅಲ್ಲಿವೆಯಂತೆ ಜೀವಿಗಳು: ಹೇಗಿವೆ ಅಂದ್ರೆ...!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 17, Jan 2019, 3:14 PM IST
Newly Discovered Super Earth May Harbour Alien Life
Highlights

ಈ ಗ್ರಹದಲ್ಲಿ ಜೀವಿಗಳಿರಬಹುದೆಂಬ ಶಂಕೆ ವ್ಯಕ್ತಪಡಿಸಿದ ನಾಸಾ| ಏಲಿಯನ್ ಜಗತ್ತಿನ ಅನ್ವೇಷಣೆಯಲ್ಲಿ ನಿರತವಾಗಿರುವ ನಾಸಾ| ಭೂಮಿಯನ್ನು ಹೋಲುವ ಸೂಪರ್ ಅರ್ಥ್ ಬರ್ನಾರ್ಡ್ ಬಿ ಗ್ರಹ| ಜೀವಿಗಳ ಆವಾಸಕ್ಕೆ ಬೇಕಾದ ಜೈವಿಕ ಅಂಶಗಳು ಇರಬಹುದಾದ ಸಾಧ್ಯತೆ| ತನ್ನ ಸೂರ್ಯನನ್ನು 233 ದಿನಗಳಿಗೊಮ್ಮೆ ಸುತ್ತುವ ಬರ್ನಾರ್ಡ್ ಬಿ| ಭೂಮಿಗಿಂತ 3.2 ಪಟ್ಟು ದೊಡ್ಡದಿರುವ ಬರ್ನಾರ್ಡ್ ಬಿ ಗ್ರಹ

ವಾಷಿಂಗ್ಟನ್(ಜ.17): ಏಲಿಯನ್ ಜಗತ್ತಿನ ಅನ್ವೇಷಣೆಯಲ್ಲಿ ನಿರತವಾಗಿರುವ ಮಾನವನಿಗೆ ಈ ಬ್ರಹ್ಮಾಂಡದಲ್ಲಿ ತಾನೋಬನ್ನೇ ಇಲ್ಲ ಎಂಬ ಸತ್ಯದ ಅರಿವಾಗತೊಡಗಿದೆ.

ಜೀವಿಗಳ ಆವಾಸಕ್ಕೆ ಬೇಕಾದ ಎಲ್ಲಾ ನೈಸರ್ಗಿಕ ಅಂಶಗಳು ಭೂಮಿ ಬಿಟ್ಟು ಬೇರೊಂದು ಗ್ರಹದಲ್ಲೂ ಇರಲು ಸಾಧ್ಯ ಎಂಬ ಸತ್ಯ ವಿಜ್ಞಾನ ಜಗತ್ತಿಗೆ ಇದೀಗ ಅರಿವಾಗುತ್ತಿದೆ.

ಅದರಂತೆ ಅನ್ಯಗ್ರಹ ಜೀವಿಗಳ ಆವಾಸ ಸ್ಥಾನದ ಹುಡುಕಾಟದಲ್ಲಿ ನಿರತವಾಗಿರುವ ನಾಸಾಗೆ ಹಲವು ಅಚ್ಚರಿಯ ಸಂಗತಿಗಳು ಎದುರಾಗಿವೆ. ಈಗಾಗಲೇ ಭೂಮಿಯನ್ನು ಹೋಲುವ ಹಲವು ಗ್ರಹಗಳ ಶೋಧನೆ ಮಾಡಿರುವ ನಾಸಾ, ಕೆಲವು ಗ್ರಹಗಳಲ್ಲಿ ಜೀವಿಗಳು ಇರಬಹುದಾದ ಸಾಧ್ಯತೆಯನ್ನೂ ತೆರೆದಿಟ್ಟಿದೆ.

ಇತ್ತೀಚಿಗೆ ಪತ್ತೆ ಹಚ್ಚಲಾದ ಸೌರಮಂಡಲದ ಹೊರಗಿನ ಗ್ರಹವೊಂದರಲ್ಲಿ ಜೀವಿಗಳಿರಬಹುದೆಂಬ ಶಂಕೆಯನ್ನು ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ. ಬರ್ನಾರ್ಡ್ ಬಿ ಎಂಬ ಈ ಸೂಪರ್ ಅರ್ಥ್ ಭೂಮಿಗಿಂತ 3.2 ಪಟ್ಟು ದೊಡ್ಡದಿದೆ.

ಈ ಗ್ರಹ ತನ್ನ ಸೂರ್ಯನನ್ನು ಪ್ರತಿ 233 ದಿನಗಳಿಗೊಮ್ಮೆ ಸುತ್ತುತ್ತಿದ್ದು, ತನ್ನ ಸೂರ್ಯನಿಂದ ಹೆಚ್ಚು ಕಡಿಮೆ ನಮ್ಮ ಭೂಮಿ ಸೂರ್ಯನಿಂದ ಇರುವಷ್ಟೇ ದೂರದಲ್ಲಿದೆ. 

ಈ ದೂರದ ಪರಿಣಾಮವಾಗಿ ಈ ಬರ್ನಾರ್ಡ್ ಬಿ ಗ್ರಹದಲ್ಲಿ ನೀರು ಮತ್ತು ಆಮ್ಲಜನಕ ಮತ್ತು ಇತರ ಜೈವಿಕ ಅಂಶಗಳು ಇರಬಹುದಾದ ಸಾಧ್ಯತೆ ಇದೆ ಎಂದು ನಾಸಾ ತಿಳಿಸಿದೆ.

ಬರ್ನಾರ್ಡ್ ಬಿ ಗ್ರಹದ ವಾತಾವರಣದಲ್ಲಿ ಸ್ಥಿರತೆ ಇದ್ದು, ಇದು ಸೂಕ್ಷ್ಮಾಣು ಜೀವಿಗಳ ಆವಾಸ ಸ್ಥಾನವಾಗಿರುವ ಸಾಧ್ಯತೆ ಹೆಚ್ಚು ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

loader