ನೀವು BSNL ಬಳಕೆದಾರರಾ? ಹಾಗಿದ್ದರೆ ನಿಮಗಾಗಿ ಸಿಹಿ ಸುದ್ದಿಯೊಂದಿದೆ. BSNL ತನ್ನ ಗ್ರಾಹಕರಿಗಾಗಿ ಬಂಪರ್ ಆಫರ್ ಒಂದನ್ನು ಜಾರಿಗೊಳಿಸಿದ್ದು, ಇದರಿಂದ ತಿಂಗಳಿಡೀ ಅನ್'ಲಿಮಿಟೆಡ್ ಫ್ರೀ ಕರೆಗಳನ್ನು ಮಾಡಬಹುದಾಗಿದೆ.

ನವದೆಹಲಿಡಿ.17): ನೀವು BSNL ಬಳಕೆದಾರರಾ? ಹಾಗಿದ್ದರೆ ನಿಮಗಾಗಿ ಸಿಹಿ ಸುದ್ದಿಯೊಂದಿದೆ. BSNL ತನ್ನ ಗ್ರಾಹಕರಿಗಾಗಿ ಬಂಪರ್ ಆಫರ್ ಒಂದನ್ನು ಜಾರಿಗೊಳಿಸಿದ್ದು, ಇದರಿಂದ ತಿಂಗಳಿಡೀ ಅನ್'ಲಿಮಿಟೆಡ್ ಫ್ರೀ ಕರೆಗಳನ್ನು ಮಾಡಬಹುದಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದರೊಂದಿಗೆ ಗ್ರಾಹಕರಿಗೆ 300 MB ಡೇಟಾ ಸೌಲಭ್ಯವೂ ಸಿಗಲಿದೆ. ಇದಕ್ಕಾಗಿ ನೀವು ವ್ಯಯಿಸಬೇಕಾದದ್ದು ಕೇವಲ 99 ರೂಪಾಯಿಗಳು. BSNL ಈ ಕೊಡುಗೆಯನ್ನು ತನ್ನ ಪ್ರೀಪೈಡ್ ಬಳಕೆದಾರರಿಗಾಗಿ ಜಾರಿಗೊಳಿಸಿದೆ. ಈ ಆಫರ್'ನ ವಿಶೇಷವೆಂದರೆ ಕೇವಲ 99 ರೂಪಾಯಿಗೆ 30 MB ಡೇಟಾ ಸಿಗಲಿದ್ದು, ಇದನ್ನು ಬಳಸಲು 28 ದಿನಗಳ ಸಮಯಾವಕಾಶವಿದೆ.

ಯಾವೆಲ್ಲಾ ರಾಜ್ಯಗಳಿಗೆ ಅನ್ವಯಿಸುತ್ತದೆ ಈ ಪ್ಲಾನ್?

ಕೋಲ್ಕತ್ತಾ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಅಸ್ಸಾಂ, ಗುಜರಾತ್, ಮಧ್ಯ ಪ್ರದೇಶ, ಛತ್ತೀಸ್'ಗಡ್, ರಾಜಸ್ಥಾನ ಹಾಗೂ ಮಹಾರಾಷ್ಟ್ರದ ನೆಟ್ವರ್ಕ್'ನಲ್ಲಿ ಬರುವ ಗ್ರಾಹಕರಷ್ಟೇ ಈ ಆಫರ್'ನ ಲಾಭ ಪಡೆಯಬಹುದು. ಇತರ ರಾಜ್ಯದ ಗ್ರಾಹಕರು ಈ ಆಫರ್ ಪಡೆಯಲು 119 ರಿಂದ 149 ರೂ ವ್ಯಯಿಸಬೇಕಾಗುತ್ತದೆ.