ಆಗಸ್ಟ್‌ನಲ್ಲಿ ಲೆಕ್ಸಸ್ ನ್ಯೂ ಜನರೇಶನ್ ಕಾರು ಬಿಡುಗಡೆ: ಬೆಲೆ 60 ಲಕ್ಷ

New Generation Lexus ES 300h India Launch in August 2018
Highlights

ಲೆಕ್ಸಸ್ ಕಾರು ಸಂಸ್ಥೆ ನೂತನ ಕಾರನ್ನ ಭಾರತಕ್ಕೆ ಪರಿಚಯಿಸುತ್ತಿದೆ. ನ್ಯೂಜನರೇಶನ್ ಇಎಸ್300 ಹೆಚ್ ಕಾರು ಹಲವು ವಿಶೇಷತೆಗಳಿಂದ ಕೂಡಿದೆ. 60 ಲಕ್ಷ ರೂಪಾಯಿ ಬೆಲೆ ಬಾಳುವ ಈ ಕಾರು ಇತರ ಕಾರಿಗಿಂತ ಹೆೇಗೆ ವಿಭಿನ್ನ? ಇಲ್ಲಿದೆ ವಿವರ.

ಬೆಂಗಳೂರು(ಜೂ.26): ಲಕ್ಸುರಿ ಕಾರುಗಳಲ್ಲಿ ಹೆಚ್ಚು ಜನಪ್ರೀಯವಾಗಿರೋ ಲೆಕ್ಸಲ್ ಕಾರು ಸಂಸ್ಥೆ ಇದೀಗ ನ್ಯೂಜನರೇಶನ್ ಇಎಸ್300 ಹೆಚ್ ಕಾರು ಬಿಡುಗಡೆಗೆ ಮಾಡಲು ಸಜ್ಜಾಗಿದೆ. ಇದೇ ಆಗಸ್ಟ್‌ನಲ್ಲಿ ಭಾರತದ ಮಾರುಕಟ್ಟೆಯಲ್ಲಿ ಲಕ್ಸಸ್ ನ್ಯೂಜನರೇಶನ್ ಇಎಸ್300 ಹೆಚ್ ಕಾರು ಮಾರುಕಟ್ಟೆ ಪ್ರವೇಶಿಸಲಿದೆ.

ನೂತನ ಲಕ್ಸಸ್ ನ್ಯೂಜನರೇಶನ್ ಇಎಸ್300 ಹೆಚ್ ಕಾರಿನ ಬೆಲೆ 60 ಲಕ್ಷ  ರೂಪಾಯಿ(ಎಕ್ಸ್ ಶೋರೂಮ್) ಸೆಡಾನ್ ಕಾರು ಸ್ಪೈಂಡಲ್ ಗ್ರಿಲ್‌ನಿಂದ ಹೊಸ ಲುಕ್ ನೀಡಲಾಗಿದೆ. ಎಲ್ಇಡಿ ಹೆಡ್‌ಲ್ಯಾಂಪ್ಸ್, ಹೊಸ ವಿನ್ಯಾಸದ ಚಕ್ರ ಹಾಗೂ ಅಲೋಯ್, ಮ್ಯಾಗ್ ವೀಲ್ಸ್ ಹೊಂದಿದೆ . ಜೊತೆಗೆ ಬಲಿಷ್ಠ ಇಂಜಿನ್ ಸಾಮರ್ಥ್ಯ ಹೊಂದಿದೆ.

12.3 ಟಚ್ ಸ್ಕ್ರೀನ್, ವಾಯ್ಸ್ ರಿಕಗ್ನಿನೀಷನ್ ಟೆಕ್ನಾಲಜಿ. 12 ಸೌಂಡ್ ಸ್ವೀಕರ್ ನೀಡಲಾಗಿದೆ. 2.5 ಲೀಟರ್ ಪೆಟ್ರೋಲ್ ಇಂಜಿನ್ ಹೊಂದಿರುವ ಈ ಕಾರು 215 ಬಿಹೆಚ್‌ಪಿ ಪವರ್ ಹೊಂದಿದೆ.
 

loader