ನವದೆಹಲಿ (ಮಾ. 03): ಮಾ.1 ರಿಂದ ಜಾರಿಗೆ ಬರುವಂತೆ ಎಲ್ಲಾ ಕೇಬಲ್‌ ಟೀವಿ ಮತ್ತು ಡಿಟಿಎಚ್‌ ಸಂಸ್ಥೆಗಳು ತಮ್ಮ ಎನ್‌ಸಿಎಫ್‌ (ನೆಟ್‌ವರ್ಕ್ ಕೆಪಾಸಿಟಿ ಫೀ) ಕಡಿಮೆ ಮಾಡಬೇಕು ಮತ್ತು ಚಾನೆಲ್‌ಗಳು ದರ ಇಳಿಕೆ ಮಾಡಬೇಕೆಂಬ ದೂರ ಸಂಪರ್ಕ ನಿಯಂತ್ರಣಾ ಪ್ರಾಧಿಕಾರ ಟ್ರಾಯ್‌ನ ಆದೇಶ ಭಾಗಶಃ ಮಾತ್ರ ಜಾರಿಯಾಗಿದೆ.

ಕೆಲ ಡಿಟಿಎಚ್‌ ಮತ್ತು ಕೇಬಲ್‌ ಸಂಸ್ಥೆಗಳು ಮಾ.1ರಿಂದ ಜಾರಿಗೆ ಬರುವಂತೆ ಈ ಹಿಂದಿನ ಮಾಸಿಕ 153 (ಕನಿಷ್ಠ 130 ರು. ಮತ್ತು ಜಿಎಸ್‌ಟಿ) ರು.ಗೆ 100 ಚಾನೆಲ್‌ ಬದಲಾಗಿ 200 ಚಾನೆಲ್‌ಗಳನ್ನು ನೀಡುವ ಸೌಲಭ್ಯ ಆರಂಭಿಸಿವೆ. ಜೊತೆಗೆ ಹೆಚ್ಚುವರಿ ಚಾನೆಲ್‌ಗಳಿಗೆ ವಿಧಿಸುತ್ತಿದ್ದ ಸ್ಲಾ್ಯಬ್‌ ಶುಲ್ಕವನ್ನೂ ತೆಗೆದುಹಾಕಿವೆ. ಹೀಗಾಗಿ 100 ಉಚಿತ ಚಾನೆಲ್‌ಗಳ ಬಳಿಕ ಪ್ರತಿ 20 ಚಾನೆಲ್‌ಗಳಿಗೆ 25 ರು.ನಂತೆ ಹೆಚ್ಚುವರಿ ಸ್ಲಾ್ಯಬ್‌ ಶುಲ್ಕದ ಹೊರೆ ಗ್ರಾಹಕರಿಗೆ ಕಡಿಮೆಯಾಗಿದೆ.

ಜಿಯೋ ಗ್ರಾಹಕರಿಗೆ ಮತ್ತಷ್ಟು ಸ್ಪೀಡ್ ನೆಟ್..!

ಆದರೆ ಒಂದು ಚಾನೆಲ್‌ಗೆ ಗರಿಷ್ಠ 12 ರು. ಮಾತ್ರ ವಿಧಿಸಬಹುದು ಎಂಬುದು ಸೇರಿದಂತೆ ಚಾನೆಲ್‌ಗಳ ಮೇಲೆ ಹೇರಿದ್ದ ದರ ಇಳಿಕೆ ಸೂಚನೆಯನ್ನು ಈವರೆಗೆ ಯಾವುದೇ ಚಾನೆಲ್‌ಗಳು ಪಾಲಿಸಿಲ್ಲ. ಹೀಗಾಗಿ ಗ್ರಾಹಕರು ಈಗಲೇ ಹಿಂದಿನಂತೆಗೇ ತಮ್ಮ ನೆಚ್ಚಿನ ಚಾನೆಲ್‌ಗಳಿಗೆ ಗರಿಷ್ಠ 19 ರು.ಮತ್ತು ಜಿಎಸ್‌ಟಿ ಸೇರಿ 22 ರು.ವರೆಗೆ ಪಾವತಿಸುವಂತಾಗಿದೆ. ಹೀಗಾಗಿ ನಿಯಮ ಪಾಲಿಸದ ಚಾನೆಲ್‌ಗಳಿಗೆ ಟ್ರಾಯ್‌ ದಂಡ ವಿಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.