‘ಏಲಿಯನ್ಸ್ ಭೂಮಿಗೆ ಬಂದಾಗಿದೆ, ಮಾನವ ಜನಾಂಗ ಆಪತ್ತಿನಲ್ಲಿದೆ’!
ಈ ಬ್ರಹ್ಮಾಂಡದಲ್ಲಿ ನಾವು ಏಕಾಂಗಿಯೇ?| ಇನ್ನೆಲ್ಲೋ ಮತ್ತೊಂದು ಗ್ರಹದಲ್ಲಿ ಜೀವ ಸಂಕುಲ ಇದೆಯೇ?| ಏಲಿಯನ್ಸ್ ಥಿಯರಿ ನಿಜಕ್ಕೂ ನಿಜವೇ?| ಭೂಮಿ ಮೇಲೆ ಈಗಾಗಲೇ ಅನ್ಯಗ್ರಹ ಜೀವಿ ಬಂದಾಗಿದೆ ಎಂದ ನಾಸಾ ವಿಜ್ಞಾನಿ| ಏಲಿಯನ್ಸ್ ಗಳನ್ನು ಗುರಿತಿಸುವಲ್ಲಿ ಮಾನವ ವಿಫಲವಾಗಿದ್ದಾನಂತೆ| ನಾಸಾ ಅಮೆಸ್ ಸಂಶೋಧನಾ ಕೇಂದ್ರದ ವಿಜ್ಞಾನಿ ಪ್ರೊಫೆಸರ್ ಸಿಲ್ವನೋ ಪಿ ಕೊಲೊಂಬನೊ
ವಾಷಿಂಗ್ಟನ್(ಡಿ.08): ಈ ಬ್ರಹ್ಮಾಂಡದಲ್ಲಿ ನಾವು ಏಕಾಂಗಿಯೇ?. ಅಥವಾ ನಮ್ಮಂತೆ ಇನ್ನೆಲ್ಲೋ ಮತ್ತೊಂದು ವಸುಧೆ ಜೀವಿಗಳನ್ನು ಸಲಹುತ್ತಿದ್ದಾಳಾ? ಎಂಬ ಪ್ರಶ್ನೆ ಇಂದು ನಿನ್ನೆಯದಲ್ಲ.
ಮಾನವನಿಗೆ ಬ್ರಹ್ಮಾಂಡದ ಅರಿವಾದಾಗಿನಿಂದ ಇಂತದ್ದೊಂದು ಪ್ರಶ್ನೆ ಆತನನ್ನು ಕಾಡುತ್ತಲೇ ಇದೆ. ಅದರಲ್ಲೂ ವಿಜ್ಞಾನ ವಿಕಾಸವಾದಂತೆ ಬ್ರಹ್ಮಾಂಡದ ಅನಂತತೆಯ ಸ್ಪಷ್ಟತೆ ಸಿಗತೊಡಗಿದಂತೆ ಈ ಪ್ರಶ್ನೆ ಮತ್ತಷ್ಟು ಹೆಚ್ಚು ಮಹತ್ವ ಪಡೆದುಕೊಂಡಿದೆ.
ಮುಖ್ಯ ಧಾರೆಯ ವಿಜ್ಞಾನಿಗಳು ಈ ಬ್ರಹ್ಮಾಂಡದಲ್ಲಿ ಭೂಮಿ ಹೊರತುಪಡಿಸಿ ಮತ್ತೆಲ್ಲೂ ಜೀವ ಜಗತ್ತು ಇಲ್ಲ ಎಂದೇ ವಾದಿಸುತ್ತಿದ್ದಾರೆ. ಆದರೆ ಿನ್ನೂ ಕೆಲವು ವಿಜ್ಞಾನಿಗಳು ಅನ್ಯಗ್ರಹ ಜೀವಿಗಳ ಇರುವಿಕೆ ಕುರಿತು ಹಕ್ಕು ಮಂಡಿಸುತ್ತಿದ್ದಾರೆ.
ಆದರೆ ಇವರೆಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ನಾಸಾ ವಿಜ್ಞಾನಿ ಪ್ರೊಫೆಸರ್ ಸಿಲ್ವನೋ ಪಿ ಕೊಲೊಂಬನೊ, ಅನ್ಯಗ್ರಹ ಜೀವಿಗಳು ಈಗಾಗಲೇ ಭೂಮಿಯನ್ನು ಪ್ರವೇಶಿಸಿದ್ದು, ವುಗಳನ್ನು ಗುರುತಿಸಲು ನಾವು ವಿಫಲವಾಗಿದ್ದೇವೆ ಎಂದು ಹೇಳುವ ಮೂಲಕ ಖಗೋಳ ವಿಜ್ಞಾನ ಜಗತ್ತನ್ನು ಅಲುಗಾಡಿಸಿದ್ದಾರೆ.
ಹೌದು, ಅನ್ಯಗ್ರಹ ಜೀವಿಗಳು ಈಗಾಗಲೇ ಭೂಮಿಯನ್ನು ಪ್ರವೇಶ ಮಾಡಿದ್ದು, ಅವುಗಳನ್ನು ಪತ್ತೆ ಹಚ್ಚುವ ತುರ್ತು ಅಗತ್ಯವಿದೆ ಎಂದು ಕ್ಯಾಲಿಫೋರ್ನಿಯಾದ ಮೌಂಟೇನ್ ವ್ಯೂನಲ್ಲಿನ ನಾಸಾ ಅಮೆಸ್ ಸಂಶೋಧನಾ ಕೇಂದ್ರದ ವಿಜ್ಞಾನಿ ಪ್ರೊಫೆಸರ್ ಸಿಲ್ವನೋ ಪಿ ಕೊಲೊಂಬನೊ ವಾದ ಮಂಡಿಸಿದ್ದಾರೆ.
ಈಗಾಗಲೇ ಪತ್ತೆ ಮಾಡಲಾಗದ ಅನ್ಯಗ್ರಹದ ಜೀವಿಗಳು ಭೂಮಿಗೆ ಬಂದಿರಬಹುದು, ನಾವು ಅವುಗಳ ಬಗ್ಗೆ ಇರುವ ಕಲ್ಪನೆಗಳನ್ನು ಪಾಲಿಸಬೇಕು ಎಂದು ಕೊಲೊಂಬನೊ ಸಲಹೆ ನೀಡಿದ್ದಾರೆ.
ನಾವು ಕೇವಲ ಕಲ್ಪನೆ ಮಾತ್ರದಿಂದ ಅವುಗಳನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ. ಉನ್ನತ ತಂತ್ರಜ್ಞಾನ ಹಾಗೂ ಇಂಟೆಲಿಜೆನ್ಸ್ ಬಳಸಿ ಇವುಗಳನ್ನು ಪತ್ತೆ ಹಚ್ಚಲು ಮುಂದಾಗಬೇಕು ಎಂದು ಕೊಲೊಂಬನೊ ಹೇಳಿದ್ದಾರೆ.