ಮಾನವ ನಿರ್ಮಿತ ಯಂತ್ರದ ಮೇಲೆ ಮಂಗಳನಿಗೇಕೆ ಸಿಟ್ಟು?| ಮಾರ್ಸ್ ರೋವರ್ ಅಪಾರ್ಚುನಿಟಿ ನೌಕೆ ಆಪೋಷಣ ಪಡೆದ ಅಂಗಾರಕ| ಮಂಗಳ ಗ್ರಹದ ಭೀಕರ ಚಂಡಮಾರುತಕ್ಕೆ ಮಾರ್ಸ್ ರೋವರ್ ಅಪಾರ್ಚುನಿಟಿ ನೌಕೆ ಬಲಿ| ಭುಮಿಯೊಂದಿಗೆ ಸಂಪರ್ಕ ಕಡಿದುಕೊಂಡ ಮಾರ್ಸ್ ರೋವರ್ ಅಪಾರ್ಚುನಿಟಿ ನೌಕೆ| ನೌಕೆ ನಿಷ್ಕ್ರೀಯಗೊಂಡಿರುವ ಕುರಿತು ನಾಸಾ ಅಧಿಕೃತ ಹೇಳಿಕೆ|

ವಾಷಿಂಗ್ಟನ್(ಫೆ.14): ಪ್ರೇಮಿಗಳ ದಿನದಂದೇ ಖಗೋಳ ಪ್ರೀಯರಿಗೆ ನಾಸಾ ದು:ಖದ ಸುದ್ದಿಯೊಂದನ್ನು ನೀಡಿದೆ. ಕಳೆದ 15 ವರ್ಷಗಳಿಂದ ಕೆಂಪು ಗ್ರಹದ ಅಧ್ಯಯನದಲ್ಲಿ ನಿರತವಾಗಿದ್ದ ಮಾರ್ಸ್ ರೋವರ್ ಅಪಾರ್ಚುನಿಟಿ ನೌಕೆ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದೆ.

ಹೌದು, ಮಂಗಳ ಗ್ರಹದ ಕುರಿತ ಮಾನವನ ಜ್ಞಾನ ವೃದ್ಧಿಯಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದ ಮಾರ್ಸ್ ರೋವರ್ ಅಪಾರ್ಚುನಿಟಿ ನೌಕೆ, ತನ್ನ ಕಾರ್ಯವನ್ನು ಸ್ಥಗಿತಗೊಳಿಸಿ ಇದೀಗ ನಿಷ್ಕ್ರೀಯಗೊಂಡಿದೆ.

ಈ ಕುರಿತು ಅಧಿಕೃತ ಮಾಹಿತಿ ನೀಡಿರುವ ನಾಸಾ, ಮಂಗಳ ಗ್ರಹದಲ್ಲಿ ಕಳೆದ ಜೂನ್ 10, 2018ರಂದು ಬೀಸಿದ ಭೀಕರ ಧೂಳಿನ ಚಂಡಮಾರುತದ ಕಾರಣ ಮಾರ್ಸ್ ರೋವರ್ ಅಪಾರ್ಚುನಿಟಿ ನೌಕೆಯ ಸೋಲಾರ್ ಪೆನಲ್ ಗಳು ನಿಷ್ಕ್ರೀಯಗೊಂಡಿವೆ ಎಂದು ಹೇಳಿದೆ.

Scroll to load tweet…

ಈ ಹಿನ್ನೆಲೆಯಲ್ಲಿ ಭುಮಿಯೊಂದಿಗಿನ ಸಂಪರ್ಕ ಕಡಿದುಕೊಂಡಿರುವ ಮಾರ್ಸ್ ರೋವರ್ ಅಪಾರ್ಚುನಿಟಿ ನೌಕೆ, ಭುಮಿಗೆ ಯಾವುದೇ ಸಿಗ್ನಲ್ ಕಳುಹಿಸುತ್ತಿಲ್ಲ. ಹಲವು ಪ್ರಯತ್ನಗಳ ಹೊರತಾಗಿಯೂ ನೌಕೆಯಿಂದ ಸಿಗ್ನಲ್ ಪಡೆಯುವಲ್ಲಿ ನಾಸಾ ವಿಫಲವಾಗಿದೆ.

ಜುಲೈ 7, 2003ರಂದು ಮಂಗಳ ಗ್ರಹದ ಅಧ್ಯಯನಕ್ಕಾಗಿ ನಭಕ್ಕೆ ಚಿಮ್ಮಿದ್ದ ಮಾರ್ಸ್ ರೋವರ್ ಅಪಾರ್ಚುನಿಟಿ ನೌಕೆ, ಸತತ 15 ವರ್ಷಗಳ ಕಾಲ ಕೆಂಪು ಗ್ರಹದ ಕುರಿತು ಅನೇಕ ಕುತೂಹಲಕಾರಿ ಮಾಹಿತಿಗಳನ್ನು ಭೂಮಿಗೆ ರವಾನಿಸಿತ್ತು.