ವಾಷಿಂಗ್ಟನ್(ನ.1): ಮಾನವ ಜನಾಂಗಕ್ಕೆ ಹಲವಾರು ಬೇರೆ ಗ್ರಹಗಳ ಕುರಿತು ಮಾಹಿತಿ ನೀಡಿದ ಕೆಪ್ಲರ್‌ ಟೆಲಿಸ್ಕೋಪ್‌ಗೆ ನಾಸಾ ವಿದಾಯ ಹೇಳುವ ಸಮಯ ಬಂದಿದೆ. 2009ರಲ್ಲಿ ಸುಮಾರು 6 ವರ್ಷಕ್ಕೆ ಬೇಕಾಗುವಷ್ಟು ಇಂಧನದೊಂದಿಗೆ ಕೆಪ್ಲರ್ ಟೆಲಿಸ್ಕೋಪ್‌ನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗಿತ್ತು.

2009ರಲ್ಲಿ ನಭಕ್ಕೆ ನೆಗೆದಿದ್ದ ಕೆಪ್ಲರ್‌ ಟೆಲಿಸ್ಕೋಪ್‌ ಉಪಗ್ರಹ ತನ್ನ ನಿಗದಿತ ಸಾಮರ್ಥ್ಯಕ್ಕಿಂತಲೂ 4 ವರ್ಷ ಹೆಚ್ಚು ಕೆಲಸ ನಿರ್ವಹಿಸಿದೆ. ಕಳೆದ ಕೆಲ ತಿಂಗಳಿನಿಂದ ಕೆಪ್ಲರ್‌ನ ಇಂಧನ ಖಾಲಿಯಾಗುವ ಹಂತ ತಲುಪಿದೆ.

ಹೀಗಾಗಿ ಕೆಪ್ಲರ್‌ಗೆ ವಿದಾಯ ಹೇಳಲಾಗುತ್ತದೆ. ಇದರಲ್ಲಿರುವ ಎಲ್ಲ ಮಾಹಿತಿ, ದತ್ತಾಂಶಗಳನ್ನು ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ ಎಂದು ನಾಸಾ ಹೇಳಿದೆ.