ಭಾರತದ ಜನಪ್ರೀಯ ಬೈಕ್ ಬಜಾಜ್ ಪಲ್ಸಾರ್ ಇದೀಗ ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ನೂತನ ಬಜಾಬ್ ಪಲ್ಸಾರ್ ಕ್ಲಾಸಿಕ್ 150 ವಿಶೇಷತೆ ಏನು? ಇಲ್ಲಿದೆ ವಿವರ

ಬೆಂಗಳೂರು(ಜೂ.14): ಭಾರತದ ಬಹುಬೇಡಿತೆಯ ಬೈಕ್ ತಯಾರಿಕಾ ಸಂಸ್ಥೆ ಬಜಾಜ್ ಇದೀಗ ತನ್ನ ಜನಪ್ರೀಯ ಪಲ್ಸರ್ ಬೈಕ್ ಕ್ಲಾಸಿಕ್ ಬಿಡುಗಡೆ ಮಾಡಿದೆ. ನೂತನ ಬಜಾಜ್ ಪಲ್ಸಾರ್ ಕ್ಲಾಸಿಕ್ 150 ಬೈಕ್ ಕೆಲವು ಅಡೀಶನ್ ಫೀಚರ್‌ಗಳನ್ನ ನೀಡಿದೆ.

ನೂತನ ಬಜಾಜ್ ಪಲ್ಸಾರ್ ಕ್ಲಾಸಿಕ್ 150 ಬೈಕ್ ಬೆಲೆ 67,437(ಪುಣೆ ಎಕ್ಸ್ ಶೋರೂಮ್) ರೇರ್ ಡ್ರಮ್ ಬೈಕ್ ಬೆಲೆಗಿಂತ 6,636 ರೂಪಾಯಿ ಕಡಿಮೆ ಬೆಲೆಗೆ ನೂತನ ಪಲ್ಸಾರ್ ಲಭ್ಯವಿದೆ. ಜೊತೆಗೆ ಇದರ ಗ್ರಾಫಿಕ್ ಡಿಸೈನ್‌ನಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ.

ನೂತನ ಪಲ್ಸಾರ್ ಕ್ಲಾಸಿಕ್ 150 ಬೈಕ್ 149 ಸಿಸಿ ಇಂಜಿನ್ ಹೊಂದಿದೆ. 14ಪಿಸ್ ಪವರ್ ಹಾಗೂ 8000 ಆರ್‌ಪಿಎಮ್ ಹೊಂದಿದೆ. ಇನ್ನು 240ಎಮ್ಎಮ್ ಫ್ರಂಟ್ ಡಿಸ್ಕ್ ಹಾಗೂ 130ಎಮ್ಎಮ್ ರೇರ್ ಡ್ರಮ್ ಬ್ರೇಕ್ ಹೊಂದಿದೆ.