ಸ್ಕ್ರೀನ್ ನೋಡಿ ನೋಡಿ ಕಣ್ಣಿಗೆ ಆಯಾಸ? ನಿಮ್ಮ ಮೊಬೈಲ್‌ನಲ್ಲೇ ಇದೆ ಪರಿಹಾರ!

ಕೆಲವರು ಬೆಳಗ್ಗೆ ಎದ್ದಾಗ ಫೋನ್ ನೋಡೋದು ಶುರು ಮಾಡಿಬಿಟ್ರೆ, ರಾತ್ರಿ ನಿದ್ದೆ ಬರುವವರೆಗೂ ಫೋನ್ ಕೈಯಲ್ಲೇ, ಕಣ್ಣು ಪರದೆ ಮೇಲೆಯೇ! ಪಾಪ ಕಣ್ಣಿನ ಗತಿ ಏನಾಗಿರಬಹುದು? ಕಣ್ಣಿನ ಸುರಕ್ಷತೆಗಾಗಿ ಹೀಗೆ ಮಾಡಬಹುದು... 

Mobile User Tips Use Dark Mode in Smartphone  To Protect Eyes

ಫೋನ್‌ ನೋಡುವುದನ್ನು ತಪ್ಪಿಸಲಿಕ್ಕಂತೂ ಸಾಧ್ಯವಿಲ್ಲ. ಫೋನ್‌ನಲ್ಲೇ ಕಣ್ಣು ನೆಟ್ಟಿದ್ದರೂ ಕಣ್ಣಿಗೆ ಆಯಾಸವಾಗದಂತೆ ನೋಡಿಕೊಳ್ಳಲು ಏನು ಮಾಡಬೇಕು?

ಡಾರ್ಕ್‌ಮೋಡ್‌ಗೆ ಶಿಫ್ಟ್‌ ಆಗಿ ಅನ್ನುವುದು ಹೊಸ ಉಪಾಯ. ರಾತ್ರಿ ಹೊತ್ತಲ್ಲಂತೂ ಕತ್ತಲಲ್ಲಿ ಬೆಡ್‌ರೂಮಲ್ಲಿ ಲೈಟ್‌ ಮೋಡ್‌ನಲ್ಲಿ ಫೋನ್‌ ನೋಡುತ್ತಿದ್ದರೆ ನಿದ್ರಾಹೀನತೆ, ಸುಸ್ತು, ಕಣ್ಣಿನ ತೊಂದರೆಗಳು ಕಾಣಿಸಿಕೊಳ್ಳಬಹುದು. ಅದರಿಂದ ಪಾರಾಗಲು ಡಾರ್ಕ್‌ಮೋಡ್‌ ಅತ್ಯುತ್ತಮ ಎಂದು ವಿಜ್ಞಾನ ಹೇಳುತ್ತಿದೆ.

ಇದನ್ನೂ ಓದಿ | ದೈತ್ಯ ಟೀವಿ ಬಿಡುಗಡೆಗೆ ರೆಡ್‌ಮಿ ಸಿದ್ಧತೆ; ಟೀವಿ ಮಾರುಕಟ್ಟೆಯಲ್ಲಿ ಗುಲ್ಲೆದ್ದಿದೆ!

ಹೆಚ್ಚು ಬೆಳಕು ಇದ್ದಾಗ ಕಣ್ಣಿನ ಪಾಪೆ ಕುಗ್ಗುತ್ತದೆ. ಸಣ್ಣ ಕಣ್ಣಪಾಪೆಯಿಂದಾಗಿ ಫೋಕಲ್‌ ಪಾಯಿಂಟ್‌ ವಿಸ್ತಾರವಾಗುತ್ತದೆ. ಆದರೆ ಡಾರ್ಕ್‌ಮೋಡ್‌ ಇದ್ದಾಗ ಫೋಕಲ್‌ ಪಾಯಿಂಟ್‌ ಸ್ಪಷ್ಟವಾಗಿ ಏನನ್ನು ನೋಡಬೇಕೋ ಅದನ್ನಷ್ಟೇ ನೋಡುತ್ತದೆ. ಲೈಟ್‌ ಟೆಕ್ಸ್ಟ್‌ಇದ್ದಾಗ ಅಕ್ಷರಗಳಿಂದಲೂ ಬೆಳಕು ಚಿಮ್ಮುವುದರಿಂದ ಹ್ಯಾಲೋ ಎಫೆಕ್ಟ್ ಎದುರಾಗುತ್ತದೆ. ಅದರಿಂದಾಗಿಯೇ ಕಣ್ಣಿಗೆ ಆಯಾಸ ಹೆಚ್ಚಾಗುತ್ತದೆ. ಡಾರ್ಕ್ ಮೋಡ್‌ನಲ್ಲಿ ಅಕ್ಷರಗಳು ಕ್ರಿಸ್ಪ್  ಆಗಿ ಕಾಣಿಸಿ, ಓದು ಸುಲಭ.

ಇದರ ಜೊತೆಗೇ ಡಾರ್ಕ್‌ಮೋಡ್‌ ಇದ್ದಾಗ ನಮ್ಮ ಓದುವ, ನೋಡುವ ಆಸಕ್ತಿಯೂ ಬೇಗ ಕಡಿಮೆಯಾಗುತ್ತದೆ. ಹೀಗಾದಾಗ ಅನಗತ್ಯವಾಗಿ ಬ್ರೌಸ್‌ ಮಾಡುವ ಚಾಳಿ ನಿಂತುಹೋಗುತ್ತದೆ. ಇದಲ್ಲದೇ, ಫೋನಿನ ಬ್ಯಾಟರಿ ಶೇ.30ರಷ್ಟುಹೆಚ್ಚು ಸಮಯ ಬರುತ್ತದೆ. ಫೋಟೋಫೋಬಿಯಾದ ಮುಕ್ತಿ ಸಿಗಬಹುದು. ಸ್ಕ್ರೀನ್‌ ಫ್ಲಿಕರ್‌ ಆಗದೇ ಇರುವುದು ಕೂಡ ಒಂದು ಲಾಭ.

Latest Videos
Follow Us:
Download App:
  • android
  • ios