ಒನ್‌ಪ್ಲಸ್‌ ಟೀವಿ ಬಿಡುತ್ತೇನೆ ಎಂದು ಹೆದರಿಸುತ್ತಿದ್ದರೆ, ರೆಡ್‌ಮಿ 70 ಇಂಚ್‌ ಟೀವಿಯನ್ನು ಮಾರುಕಟ್ಟೆಗೆ ತರಲು ಸನ್ನದ್ಧವಾಗಿದೆ. ಎರಡು ಟೀವಿಗಳನ್ನು ಸದ್ಯದಲ್ಲೇ ಮಾರುಕಟ್ಟೆಗೆ ಬಿಡುವ ಮೂಲಕ ಟೀವಿ ಮಾರುಕಟ್ಟೆಯನ್ನೇ ಬುಡಮೇಲು ಮಾಡಲು ರೆಡ್‌ಮಿ ಹವಣಿಸುತ್ತಿದೆ ಎಂಬ ಗುಲ್ಲೆದ್ದಿದೆ.

70 ಇಂಚ್‌ ಸ್ಕ್ರೀನ್‌ನ ಒಂದು ಟೀವಿ, 40 ಇಂಚ್‌ ಪರದೆಯ ಮತ್ತೊಂದು ಟೀವಿಯನ್ನು ಈಗಾಗಲೇ ರೆಡ್‌ಮಿ ಅಭಿವೃದ್ಧಿಪಡಿಸಿದೆ. ಆಗಸ್ಟ್‌ 29ರಂದು ಇದು ಗ್ರಾಹಕರಿಗೆ ದೊರೆಯಲಿದೆ ಎಂಬುದು ಸದ್ಯದ ಸುದ್ದಿ. 

ಇದನ್ನೂ ಓದಿ: ಶೀಘ್ರದಲ್ಲೇ WhatsApp ಹೊಸ ನಿಯಮ; ಇಂಥವರ ಅಕೌಂಟ್‌ ನಿಷೇಧ!

ಈಗಾಗಲೇ ಎಂಐ ಟೀವಿಗೆ ಅದ್ಭುತ ಸ್ವಾಗತ ಸಿಕ್ಕಿರುವ ಹಿನ್ನೆಲೆಯಲ್ಲಿ ಈಗಲೇ 70 ಇಂಚಿನ ರೆಡ್‌ಮಿ ಟೀವಿಯನ್ನು ಸಂಸ್ಥೆ ಭಾರತದಲ್ಲೂ ರಿಲೀಸ್‌ ಮಾಡಲಿದೆಯಾ ಎಂಬ ಪ್ರಶ್ನೆಗಿನ್ನೂ ಉತ್ತರ ಸಿಕ್ಕಿಲ್ಲ.

4ಕೆ ರೆಸಲ್ಯೂಷನ್‌ ಅಲ್ಟಾ್ರ ಹೈ ರೆಸಲ್ಯೂಷನ್‌ ಇರುವ 70 ಇಂಚಿನ ಟೀವಿ ಬಂದರೆ ಎಂಟರ್‌ಟೇನ್‌ಮೆಂಟ್‌ ವ್ಯಾಖ್ಯಾನವೇ ಬದಲಾಗಲಿದೆ. ಇದರ ಬೆಲೆಯೂ ಅತ್ಯಂತ ಕಡಿಮೆ ಇರುತ್ತದೆ. ಹೀಗಾಗಿ ಎಲ್ಲೆಲ್ಲೂ ಈ ಟೀವಿಯೇ ರಾರಾಜಿಸಲಿದೆ ಎಂದೂ ಕಂಪೆನಿ ವಲಯದಲ್ಲಿ ಗುಸುಗುಸು ಕೇಳಿಬರಲಾರಂಭಿಸಿದೆ.