ಕಂಪ್ಯೂಟರ್ ಮಾರುಕಟ್ಟೆಯಲ್ಲಿ ಆಪಲ್ ಪ್ರತಿ ಸ್ಫರ್ಧಿಯಾಗಿರುವ ಮೆಕ್ರೋ ಸಾಫ್ಟ್ ಆಲ್ ಇನ್ ಒನ್ ಪಿಸಿಯೊಂದನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಇದಕ್ಕೆ ಸರ್ಫೆಸ್ ಸ್ಟುಡಿಯೋ ಎಂದು ನಾಮಕರಣ ಮಾಡಿದ್ದು, ಹೆಚ್ಚಾಗಿ ಗ್ರಾಫಿಕ್ಸ್, ಎಡಿಟಿಂಗ್ ಮಾಡುವವರನ್ನು ಗುರಿಯಾಗಿರಿಸಿಕೊಂಡೇ ಈ ಕಂಪ್ಯೂಟರ್ ಅನ್ನು ತಯಾರಿಸಲಾಗಿದೆ ಎಂದರೆ ತಪ್ಪಾಗುವುದಿಲ್ಲ. 

ಕಂಪ್ಯೂಟರ್ ಮಾರುಕಟ್ಟೆಯಲ್ಲಿ ಆಪಲ್ ಪ್ರತಿ ಸ್ಫರ್ಧಿಯಾಗಿರುವ ಮೆಕ್ರೋಸಾಫ್ಟ್ ನೂತನವಾಗಿ ಆಲ್ ಇನ್ ಒನ್ ಪಿಸಿಯೊಂದನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಇದಕ್ಕೆ ಸರ್ಫೆಸ್ ಸ್ಟುಡಿಯೋ ಎಂದು ನಾಮಕರಣ ಮಾಡಿದ್ದು, ಹೆಚ್ಚಾಗಿ ಗ್ರಾಫಿಕ್ಸ್, ಎಡಿಟಿಂಗ್ ಮಾಡುವವರನ್ನು ಗುರಿಯಾಗಿರಿಸಿಕೊಂಡೇ ಈ ಕಂಪ್ಯೂಟರ್ ಅನ್ನು ತಯಾರಿಸಲಾಗಿದೆ ಎಂದರೆ ತಪ್ಪಾಗುವುದಿಲ್ಲ. 

ನೋಡಲು ತೀರ ತೆಳುವಾಗಿರುವ ಈ ಸ್ಕ್ರಿನ್, 4.5 ಕೆ ಆಲ್ಟ್ರಾ ಹೆಚ್ ಡಿ 28 ಇಂಚಿನ ಸ್ಪರ್ಶ ಸಂವೇದಿಯಾಗಿದೆ. ಇಂಟೆಲ್ ಐ5 ಇಲ್ಲವೇ ಇಂಟೆಲ್ ಐ 7 ಕ್ವಾಟ್ ಕೋರ್ ಪ್ರೋಸೆಸರ್ (6ನೇ ತಲೆಮಾರು) ಇರುವ ಈ ಕಂಪ್ಯೂಟರ್'ನಲ್ಲಿ 4 ಜಿಬಿ ಗ್ರಾಫಿಕ್ಸ್ ಕಾರ್ಡ್, 32 ಜಿಬಿ ರಾಮ್ ಮತ್ತು 1 ಟಿಬಿ ಇಂಟರ್ನಲ್ ಮೆಮೋರಿ ಇದೆ. ಇದನ್ನು ಬದಲಾಯಿಸಲು ಸಹ ಸಾಧ್ಯವಿದೆ. 

ಯುಸೆಬಿ 3.0 ಪೋರ್ಟ್, ಎಸ್ ಡಿ ಕಾರ್ಡ್ ರೀಡರ್, 3.5 ಹೆಡ್ ಪೋನ್ ಜಾಕ್ ಹೊಂದಿರುವ ಈ ಕಂಪ್ಯೂಟರ್ ನಲ್ಲಿ 5 ಎಂಪಿ ಕ್ಯಾಮರೆ ಇದ್ದು, 2.1 ಆಡಿಯೋ ಇಂಜಿನ್ ಸಹ ಇದೆ. ಈ ಸರ್ಫೆಸ್ ಸ್ಟುಡಿಯೋ ಗಾಗಿಯೇ ವಿಶೇಷವಾಗಿ ಸರ್ಫೆಸ್ ಕಿಬೋರ್ಡ್, ಸರ್ಫೆಸ್ ಮೌಸ್, ಸರ್ಫೆಸ್ ಪೆನ್ ಮತ್ತು ಪವರ್ ಕಾರ್ಡ್ ಸಹ ಅಭಿವೃದ್ಧಿ ಪಡಿಸಲಾಗಿದೆ. 

ಇಷ್ಟೆಲ್ಲ ಸೌಲಭ್ಯಗಳನ್ನು ಹೊಂದಿರುವ ಈ ಸರ್ಫೆಸ್ ಸ್ಟುಡಿಯೋದ ಆರಂಭಿಕ ಬೆಲೆ ಸುಮಾರು 2 ಲಕ್ಷ ರೂ ಆಗಲಿದ್ದು, ಇಂಟರ್ ನಲ್ ಮೆಮೊರಿ, ರಾಮ್ ಮತ್ತು ಗ್ರಾಫಿಕ್ಸ್ ಕಾರ್ಡ್ ಗಳ ಗುಣಮಟ್ಟ ಹೆಚ್ಚಾದಂತೆ ಬೆಲೆಯೂ ಹೆಚ್ಚಾಗಲಿದೆ.