Better.com ವಜಾಗೊಳಿಸಿದ್ದ 900 ಸಿಬ್ಬಂದಿಗೆ ಉದ್ಯೋಗ ಮೇಳ : ಮೈಕ್ರೋಸಾಫ್ಟ, ರಾಬಿನ್‌ಹುಡ್ ಭಾಗಿ!

*ಝೂಮ್ ಕಾಲ್ ಮೂಲಕ 900 ಉದ್ಯೋಗಿಗಳ ವಜಾ
*ಭಾರೀ ವಿವಾದ ಸೃಷ್ಟಿಸಿದ್ದ ಕಂಪನಿ ಸಿಇಓ ನಡೆ
*ವಜಾಗೊಂಡಿರುವವರಿಗೆ ಉದ್ಯೋಗ ಮೇಳ
*ಮೈಕ್ರೊಸಾಫ್ಟ್‌, ರಾಬಿನ್‌ಹುಡ್ ಸೇರಿ ಹಲವು ಕಂಪನಿ ಭಾಗಿ

Microsoft Robinhood willing to recruit 900 employees fired by Better com CEO on Zoom call mnj

ನವದೆಹಲಿ (ಡಿ. 11): ಇತ್ತಿಚೇಗೆ  ಬೆಟರ್‌ ಡಾಟ್‌ ಕಾಮ್‌ (Better.com) ಕಂಪನಿ ಸಿಇಓ ವಿಶಾಲ್‌ ಗಾರ್ಗ್ (Vishal Garg)  ಝೂಮ್ ಮೀಟಿಂಗ್‌ನಲ್ಲಿ 900 ಸಿಬ್ಬಂದಿಗಳನ್ನು ವಜಾಗೊಳಿಸಿದ್ದರು. ಝೂಮ್ ಮೀಟಿಂಗ್‌ ಆರಂಭವಾಗುತ್ತಿದ್ದಂತೆಯೇ ಸಿಇಓ ಸಿಬ್ಬಂದಿಗಳಿಗೆ ಶಾಕ್‌ ನೀಡಿದ್ದರು. ಇದು ದೇಶಾದ್ಯಂತ ಭಾರೀ ವಿವಾದ ಸೃಷ್ಟಿಸಿತ್ತು. ಈ ಬೆನ್ನಲ್ಲೇ ಪರ ವಿರೊಧದ ಚರ್ಚೆಗಳು ನಡೆದಿದ್ದವು. ಈ ಬೆಳವಣಿಗೆ ನಂತರ ಬೆಟರ್‌ ಡಾಟ್‌ ಕಾಮ್‌ ಸಿಇಓ ವಿಶಾಲ್‌ ಗಾರ್ಗ್‌ ಕ್ಷಮೆ ಕೂಡ ಕೇಳಿದ್ದರು. (Apologises). ಈಗ  Better.com ವಜಾಗೊಳಿಸಿದ್ದ 900 ಮಂದಿಯಲ್ಲಿದ್ದ  ಉದ್ಯೋಗಿಯೊಬ್ಬರು ಸ್ಥಳೀಯ ಸಂಸ್ಥೆಗಳೊಂದಿಗೆ ಸಹಕಾರದೊಂದಿಗೆ 900 ಜನರಿಗೆ ಉದ್ಯೋಗ ಮೇಳ ಆಯೋಜಿಸಲು ಮುಂದಾಗಿದ್ದಾರೆ. 

ಶಾರ್ಲೆಟ್ ಸಿಟಿ ಮತ್ತು NCWorks ಕೆರಿಯರ್ ಸೆಂಟರ್ ಸಹಭಾಗಿತ್ವದಲ್ಲಿ ವಜಾ ಗೊಂಡ ಸಿಬ್ಬಂದಿಗಳಿಗೆ  ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತಿದೆ. ಮೈಕ್ರೋಸಾಫ್ಟ್ (Microsoft), ರಾಬಿನ್‌ಹುಡ್ (Robinhood), ಆಲ್‌ಸ್ಟೇಟ್ (Allstate) ಮತ್ತು ಇಂಟರ್‌ಕಾಂಟಿನೆಂಟಲ್ ಕ್ಯಾಪಿಟಲ್ ಗ್ರೂಪ್‌ನಂತಹ ((Intercontinental Capital Group)) ಹಲವಾರು ದೊಡ್ಡ ಕಂಪನಿಗಳು ಉದ್ಯೋಗ ಮೇಳಕ್ಕೆ ಹಾಜರಾಗಲು ಆಸಕ್ತಿಯನ್ನು ತೋರಿಸಿವೆ. ಈ ಸಮಯದಲ್ಲಿ ಅವರು Better.com ನ ಈಗ ವಜಾ ಮಾಡಿರುವ ಉದ್ಯೋಗಿಗಳನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಏಕಾಏಕಿ ಉದ್ಯೋಗ ಕಳೆದುಕೊಂಡಿದ್ದ 900 ಸಿಬ್ಭಂದಿಗಳಲ್ಲಿ ಕೊಂಚ ನಿರಾಳತೆ ಮೂಡಿದೆ. ಆದಾಗ್ಯೂ ಉದ್ಯೋಗ ಮೇಳದಲ್ಲಿ ಭಾಗವಹಿಸುವ ಕಂಪನಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅರ್ಹತೆ ಪಡೆಯುವ ಸಿಬ್ಬಂದಿಗಳಿಗೆ ಮಾತ್ರ ಉದ್ಯೋಗವಕಾಶಗಳು ಸಿಗಲಿವೆ. 

ಝೂಮ್ ಕಾಲ್ ಮೂಲಕ 900 ಉದ್ಯೋಗಿಗಳ ವಜಾ

ಕಳೆದ ವಾರ ಬೆಟರ್‌ ಡಾಟ್‌ ಕಾಮ್‌  ಕಂಪನಿ ಸಿಇಓ ವಿಶಾಲ್‌ ಗಾರ್ಗ್  ಝೂಮ್ ಮೀಟಿಂಗ್‌ನಲ್ಲಿ 900 ಸಿಬ್ಬಂದಿಗಳನ್ನು ವಜಾಗೊಳಿಸಿದ್ದರು. ವರ್ಷಾಂತ್ಯದ ಬೋನಸ್ ಮೀಟಿಂಗ್, ಇದು ಹೊಸ ವರ್ಷದಿಂದ ವೇತನ ಹೆಚ್ಚಳದ ಮೀಟಿಂಗ್, ಇದು ಕಂಪನಿಯ ಹೊಸ ಘೋಷಣೆಗಳ ಮೀಟಿಂಗ್ ಇರಬಹುದು ಅಂದುಕೊಂಂಡು  ಸಿಬ್ಬಂದಿಗಳು (Employees) ನಗು ಮುಖದಿಂದ ಝೂಮ್ ಮೀಟಿಂಗ್‌ಗೆ ಹಾಜರಾಗಿದ್ದರು. ಆದರೆ ಮೀಟಿಂಗ್‌ ಆರಂಭವಾಗುತ್ತಿದ್ದಂತೆ ಸಿಬ್ಬಂದಿಗಳನ್ನು ವಜಾಗೊಳಿಸುತ್ತಿರುವುದಾಗಿ ಗರ್ಗ್‌ ತಿಳಿಸಿದ್ದರು.

IOCL Recruitment 2021: 300 ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಿದ ಇಂಡಿಯನ್ ಆಯಿಲ್

ವಿಡಿಯೋ ಮೀಟಿಂಗ್‌ನಲ್ಲಿ, ನೀವು ಕೇಳ ಬಯಸಿದ ಸುದ್ದಿ ಇದಲ್ಲ. ನೀವೆಲ್ಲಾ ವಜಾಗೊಳಿಸುತ್ತಿರುವ ಸಿಬ್ಬಂದಿಗಳ ಗುಂಪಿನ ಭಾಗವಾಗಿದ್ದೀರಿ. ಈ ಕಂಪನಿ ಜೊತೆಗಿನ ನಿಮ್ಮ ಉದ್ಯೋಗ ಇಲ್ಲಿಗೆ ಅಂತ್ಯವಾಗುತ್ತಿದೆ ಎಂದು ಇಂಡೋ ಅಮೆರಿಕನ್ ಸಿಇಓ ವಿಶಾಲ್ ಗರ್ಗ್ ಝೂಮ್ ವಿಡಿಯೋ ಕಾಲ್‌ನಲ್ಲಿ ಹೇಳಿದ್ದರು. ಸಿಬ್ಬಂದಿಗಳನ್ನು ವಜಾಗೊಳಿಸಲು ಇದು ಸರಿಯಾದ ವಿಧಾನವಲ್ಲ ಎಂದು ಹಲವರು ಹೇಳಿದ್ದರು.

ಕ್ಷಮೆಯಾಚಿಸಿದ ಬೆಟರ್‌ ಡಾಟ್‌ ಕಾಮ್‌ ಸಿಇಓ!

ಈ ಚರ್ಚೆ ವ್ಯಾಪಕವಾಗುತ್ತಿದ್ದಂತೆಯೇ  "ವಜಾಗೊಳಿಸುವಿಕೆಯನ್ನು ತಿಳಿಸುವಲ್ಲಿ ನಾವು ಎಡವಿದ್ದು ಇದನ್ನು ಕಾರ್ಯಗತಗೊಳಿಸುವಲ್ಲಿ ಪ್ರಮಾದವಾಗಿದೆ" ಎಂದು ಅವರು ಹೇಳುವ ಮೂಲಕ ಸಿಇಓ ಗರ್ಗ್ ಕ್ಷಮೆಯಾಚಿಸಿದ್ದರು. "ನಾನು ಈ ಸುದ್ದಿಯನ್ನು ತಿಳಿಸಲು  ಬಳಸಿದ ವಿಧಾನವು ಕಠಿಣ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ" ಎಂದು ಗಾರ್ಗ್ ಮಂಗಳವಾರ (ಡಿ. 7) ಪತ್ರದ ಮೂಲಕ ತಿಳಿಸಿದ್ದಾರೆ.

ತಾತ್ಕಾಲಿಕ ಅತಿಥಿ ಶಿಕ್ಷಕರ ನೇಮಕಾತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ 

ಕರ್ನಾಟಕದ (Karnataka)ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕ (Teachers) ಹುದ್ದೆಗಳಿಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ ಹೊರಬಿದ್ದಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ  ಖಾಲಿ ಇರುವ ಶಿಕ್ಷಕರ ಹುದ್ದೆಯನ್ನು ಮರುಹೊಂದಾಣಿಕೆ ಮಾಡಲು ಆದೇಶಿಸಲಾಗಿದೆ. ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಜಾಲ್ತಿಯಲ್ಲಿದ್ದು, ಖಾಲಿ ಹುದ್ದೆಗೆ ಶಿಕ್ಷಕರು ವರ್ಗಾವಣೆಗೊಂಡು ಕರ್ತವ್ಯಕ್ಕೆ ಹಾಜರಾದ ಕೂಡಲೇ ಅತಿಥಿ ಶಿಕ್ಷಕರನ್ನು  ಶಾಲೆಯಿಂದ ಬಿಡುಗಡೆ ಮಾಡದೆ ಖಾಲಿ ಇರುವ ಜಿಲ್ಲೆಯ ಇತರ ಶಾಲೆಗಳಿಗೆ ನೇಮಕ ಮಾಡಲು ಇಲಾಖೆಯು ಸಂಬಂಧಿಸಿದ ಜಿಲ್ಲೆಯ ಶಿಕ್ಷಣ ಅಧಿಕಾರಿಗಳಿಗೆ , ಸಂಬಂಧಿಸಿದ ಕ್ಷೇತ್ರ ಶಿಕ್ಷಣ ಅಧಿಕಾರಿಗಳಿಗೆ ಸೂಚನೆ ಹೊರಡಿಸಲಾಗಿದೆ.

Latest Videos
Follow Us:
Download App:
  • android
  • ios