ಮಧ್ಯಮ ವರ್ಗಕ್ಕೆಟಕುವ ಬೆಲೆಯಲ್ಲಿ ಶ್ಯೋಮೀ ಕಂಪನಿಯ 4 ಹೊಸ ಟಿವಿಗಳು
ನೂರು ದಶಲಕ್ಷ ಸ್ಮಾರ್ಟ್‌ಫೋನುಗಳನ್ನು ಮಾರಿದ ಮೀ, ಅದೇ ಸಂತೋಷದಲ್ಲಿ ಮಧ್ಯಮ ವರ್ಗವನ್ನು ಆಕರ್ಷಿಸುವ ಬೆಲೆಯಲ್ಲಿ ನಾಲ್ಕು ಟಿವಿಗಳನ್ನು ಬಿಡುಗಡೆ ಮಾಡಿದೆ. ಈ ಟಿವಿಗಳನ್ನು ಸೆಪ್ಟೆಂಬರ್ 29 ಮಧ್ಯರಾತ್ರಿಯಿಂದ ಲಭ್ಯವಾಗಲಿವೆ.
ಕಂಪನಿಯ ಹೆಸರು ಶಿಯೋಮಿ ಅಂತಿದ್ದರೂ ಇದು ಮೀ ಅಂತಲೇ ಜನಜನಿತ. ಅದು ಎಷ್ಟರ ಮಟ್ಟಿಗೆ ಎಂದರೆ ಮೀ ಕಂಪನಿಯ ಹೊಸ ಸ್ಮಾರ್ಟ್‌ಫೋನ್ ಬರುತ್ತದೆ ಎಂದಾದರೆ ಮೊಬೈಲ್ ಪ್ರಿಯರ ಕಿವಿ ನೆಟ್ಟಗಾಗುತ್ತದೆ. ಇಂಥಾ ಕಂಪನಿ ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಆಳಲು ಶುರು ಮಾಡಿದ್ದೇ ಮಾಡಿದ್ದು, ಅದರ ಬೆನ್ನಿಗೆ ಟಿವಿ, ಸ್ಮಾರ್ಟ್‌ಬ್ಯಾಂಡ್, ವಾಟರ್ ಪ್ಯೂರಿಫೈಯರ್, ಸೌಂಡ್ ಬಾರ್ ತಯಾರಿಸಲು ಮುಂದಾಯಿತು.
ಈಗ ಮೀ ನೂರು ದಶಲಕ್ಷ ಸ್ಮಾರ್ಟ್‌ಫೋನುಗಳನ್ನು ಮಾರಿದೆ. ಅದೇ ಸಂತೋಷದಲ್ಲಿ ಮಧ್ಯಮ ವರ್ಗವನ್ನು ಆಕರ್ಷಿಸುವ ಬೆಲೆಯಲ್ಲಿ ನಾಲ್ಕು ಟಿವಿಗಳನ್ನು ಬಿಡುಗಡೆ ಮಾಡಿದೆ. ಈ ಟಿವಿಗಳನ್ನು ಸೆಪ್ಟೆಂಬರ್ 29 ಮಧ್ಯರಾತ್ರಿಯಿಂದ www.mi.com, ಫ್ಲಿಪ್‌ಕಾರ್ಟ್ ತಾಣಗಳಲ್ಲಿ ಖರೀದಿಸಬಹುದು.
1. ಮೀ ಟಿವಿ 4ಎಕ್ಸ್(65)
163.9 ಸೆಂಮೀ ಎಲ್‌ಐಡಿ ಡಿಸ್‌ಪ್ಲೇ ಇದರ ವಿಶೇಷತೆ. ಮೀ ಕಂಪನಿಯ ವಿವಿಡ್ ಪಿಚ್ಚರ್ ಇಂಜಿನ್ ಹೊಂದಿರುವುದರಿಂದ ಈ ಟಿವಿ ನೋಡುವ ಮಜಾನೇ ಬೇರೆ. ಇನ್ನು ನೆಟ್‌ಫ್ಲಿಕ್ಸ್ ಅಮೆಜಾನ್ ಪ್ರೈಮ್ ಸೇರಿದಂತೆ ಅನೇಕ ಸುದ್ದಿ ವಾಹಿನಿಗಳು ದೊರಕಲಿವೆ. ಆ್ಯಂಡ್ರಾಯ್ಡ್ 9 ಮೂಲಕ ಕಾರ್ಯ ನಿರ್ವಹಿಸುತ್ತದೆ. ಡೇಟಾ ಸೇವರ್ ಎಂಬ ಆಯ್ಕೆಯಿದ್ದು, ಆ ಆಯ್ಕೆ ಬಳಸಿಕೊಂಡರೆ ಡೇಟಾ ಉಳಿತಾಯವಾಗಲಿದೆ.
ಇದರ ಬೆಲೆ ರು.54,999.
2. ಮೀ ಟಿವಿ 4ಎಕ್ಸ್(50)
ದೊಡ್ಡ ಟಿವಿಗೆ ಹೋಲಿಸಿದರೆ ಇದು ಸ್ವಲ್ಪ ಸಣ್ಣದು. ಗಾತ್ರ ಸಣ್ಣದಾದರೂ ಇದರ ಕೀರ್ತಿ ಸಣ್ಣದಲ್ಲ. ಅದರಲ್ಲಿರುವ ಬಹುತೇಕ ಫೀಚರ್‌ಗಳು ಇದರಲ್ಲೂ ಇವೆ.
ಬೆಲೆ ರು.29,999
ಇದನ್ನೂ ಓದಿ | ಮೊಬೈಲ್ ಪ್ರಿಯರ ನಿದ್ದೆ ಗಾನ್! ಮಾರುಕಟ್ಟೆಗೆ ಬರುತ್ತಿದೆ Oneplus ಹೊಸ ಫೋನ್!
3. ಮೀ ಟಿವಿ 4ಎಕ್ಸ್(43)
ಬೆಲೆ ರು.24,999
4. ಮೀ ಟಿವಿ 4ಎ(40)
ಬೆಲೆ ರು.17,999
ಮೀ ಸ್ಮಾರ್ಟ್ ವಾಟರ್ ಪ್ಯೂರಿಫೈಯರ್
ಮೀ ಕಂಪನಿ ಒಂದು ಚೆಂದದ ಮೀ ಸ್ಮಾರ್ಟ್ ವಾಟರ್ ಪ್ಯೂರಿಫೈಯರ್ ಕೂಡ ಬಿಡುಗಡೆ ಮಾಡಿದೆ. ಇದರ ವಿಶೇಷತೆ ಎಂದರೆ ಇದರ ಫಿಲ್ಟರ್ ಬದಲಿಸುವ ಸಮಯ ಬಂದಾಗ ನೀವೇ ಆನ್‌ಲೈನ್ ಮೂಲಕ ಫಿಲ್ಟರ್ ತರಿಸಿ ಬದಲಿಸಬಹುದು. ಅಷ್ಟು ಸುಲಭ ವಿಧಾನ ರೂಪಿಸಲಾಗಿದೆ. ಇದರ ಬೆಲೆ ರು.11,999. ಇದೂ ಸೆಪ್ಟೆಂಬರ್ 29ರ ಮಧ್ಯರಾತ್ರಿಯಿಂದ ಲಭ್ಯ.
ಮೀ ಸ್ಮಾರ್ಟ್‌ಬ್ಯಾಂಡ್ 4
ಸ್ಮಾರ್ಟ್‌ಬ್ಯಾಂಡ್‌ನ ಹೊಸ ವರ್ಷನ್ ಬಂದಿದೆ. 0.95 ಇಂಚು ಡಿಸ್‌ಪ್ಲೇ ಇದೆ. ಇದರ ಬ್ಯಾಟರಿ 20 ದಿನಗಳ ಕಾಲ ಬಾಳಿಕೆ ಬರುತ್ತದೆ. ವಾಟರ್ ರೆಸಿಸ್ಟೆನ್ಸ್ ಆಗಿದ್ದು, ಸ್ವಿಮ್ ಟ್ರ್ಯಾಕರ್ ಫೀಚರ್ ಇದೆ.
ಇದರ ಬೆಲೆ ರು. 2,299.
ಮೀ ಸೌಂಡ್‌ಬಾರ್
ಇದುವರೆಗೆ ಮೀ ವೈಟ್ ಸ್ಪೀಕರ್ ಇತ್ತು. ಆದರೆ ಈಗ ಬೇಡಿಕೆಯ ಮೇರೆಗೆ ಬಿಳಿ ಸ್ಪೀಕರ್ ಒದಗಿಸುತ್ತಿದೆ ಮೀ. ಇದರ ಬೆಲೆ ರು.4999.