'ತಮ್ಮ ಸಮೀಪದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ನನಗೆ ಮತ್ತು ಸಹ ಪ್ರಯಾಣಿಕರಿಗೆ ಅಸಭ್ಯವಾದ ಪದ ಪ್ರಯೋಗ ಮಾಡಿದ್ದಾನೆ

ಸ್ಯಾನ್ ಫ್ರಾನ್ಸಿಸ್ಕೋ(ಡಿ.02): ಫೇಸ್'ಬುಕ್ ಸಂಸ್ಥಾಪಕ ಮಾರ್ಕ್ ಜುಕರ್'ಬರ್ಗ್ ಅವರ ಸೋದರಿ ಫೆಸ್'ಬುಕ್'ನ ಮಾರುಕಟ್ಟೆ ಅಭಿವೃದ್ಧಿ ವಿಭಾಗದ ಮಾಜಿ ನಿರ್ದೇಶಕಿ ರಾಂಡಿ ಜುಕರ್'ಬರ್ಗ್ ಅವರಿಗೆ ವಿಮಾನದಲ್ಲಿ ಲೈಂಗಿಕ ಕಿರುಕುಳ ನೀಡಲಾಗಿದೆ.

Add Asianetnews Kannada as a Preferred SourcegooglePreferred

ಅಲೆಸ್ಕಾ ಏರ್'ಲೈನ್ಸ್'ನ ವಿಮಾನದಲ್ಲಿ ಲಾಸ್ ಏಂಜಲೆಸ್ ಹಾಗೂ ಮಜಾಟ್ಲಾನ್ ನಡುವೆ ಈ ಘಟನೆ ನಡೆದಿದ್ದು, ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ರಾಂಡಿ ಅವರೊಂದಿಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಬಗ್ಗೆ ಏರ್'ಲೈನ್ಸ್'ಗೆ ಪತ್ರ ಬರೆದಿರುವ ರಾಂಡಿ ಅವರು 'ತಮ್ಮ ಸಮೀಪದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಮದ್ಯಪಾನ ಮಾಡಿ ನನಗೆ ಮತ್ತು ಸಹ ಪ್ರಯಾಣಿಕರಿಗೆ ಅಸಭ್ಯ ಪದ ಪ್ರಯೋಗ ಮಾಡಿದ್ದಾನೆ

ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರೂ ಅಶ್ಲೀಲ ಟೀಕೆಗಳನ್ನು ಮುಂದುವರಿಸಿದ'.ಈ ಬಗ್ಗೆ ಭದ್ರತಾ ಸಿಬ್ಬಂದಿಗೆ ದೂರು ನೀಡಿದರೂ ಆತ ಶಾಶ್ವತ ಪ್ರಯಾಣಿಕ. ನೀವೆ ಆಸನವನ್ನು ಬದಲಿಸಿಕೊಳ್ಳಿ'ಎಂದು ನನಗೆ ಬಿಟ್ಟಿ ಸಲಹೆ ನಿಡಿದರು. ವಿಮಾನದಲ್ಲಿ ಈ ರೀತಿ ಘಟನೆಗಳಾದರೆ ನಮ್ಮಂಥವರ ಸುರಕ್ಷತೆ ಹೇಗೆ'. ಏರ್'ಲೈನ್ಸ್'ಗೆ ನಮ್ಮಂಥವರ ಸುರಕ್ಷತೆಗಿಂತ ಡಾಲರ್ಸ್ ಮುಖ್ಯ' ಎಂದು ತಿಳಿಸಿದ್ದಾರೆ.

ಘಟನೆಯ ಬಗ್ಗೆ ತನಿಖೆ ಕೈಗೊಂಡಿರುವ ಅಲೆಸ್ಕಾ ಏರ್'ಲೈನ್ಸ್ ಆಡಳಿತ ಮಂಡಳಿ ಲೈಂಗಿಕವಾಗಿ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯನ್ನು ಏರ್'ಲೈನ್ಸ್ ವಿಮಾನಗಳ ಪ್ರಯಾಣ ಸೇವೆಯಿಂದ ತಾತ್ಕಾಲಿಕವಾಗಿ ಅಮಾನತು ಪಡಿಸಿದ್ದಾರೆ.