ಇಸ್ರೋದ ಮಂಗಳಯಾನ ನೌಕೆ ಕಳುಹಿಸಿದ ಮಂಗಳ ಗ್ರಹದ ಫೋಟೋ! ಮೈನವಿರೇಳಿಸುವ ಮಂಗಳ ಗ್ರಹದ ಫೋಟೋ ನೀವೂ ನೋಡಿ! ನಾಲ್ಕು ವರ್ಷಗಳಿಂದ ಮಂಗಳ ಕಕ್ಷೆ ಸುತ್ತುತ್ತಿರುವ ಮಂಗಳಯಾನ! ಮಂಗಳ ಗ್ರಹದ ಕುರಿತು ಹೆಚ್ಚಿನ ಅಧ್ಯಯನಕ್ಕೆ ಸಹಾಯಕಾರಿ! ಗ್ರಹದ ಒಟ್ಟು 980 ಫೋಟೋಗಳನ್ನು ಕ್ಲಿಕ್ಕಿಸಿದ ಮಂಗಳಯಾನ ನೌಕೆ 

ಬೆಂಗಳೂರು(ಸೆ.28): ಇಸ್ರೋದ ಮಂಗಳಯಾನಕ್ಕೆ ಭರ್ತಿ 5 ವರ್ಷ. ಅದರಂತೆ ಮಂಗಳಯಾನ ನೌಕೆ ಮಂಗಳ ಕಕ್ಷೆ ತಲುಪಿ ಇಂದಿಗೆ ನಾಲ್ಕು ವರ್ಷಗಳು ಸಂದಿವೆ.

ಈ ಹಿನ್ನೆಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಮಂಗಳ ಗ್ರಹದ ಕಕ್ಷೆ ಸುತ್ತುತ್ತಿರುವ ಮಂಗಳಯಾನ ನೌಕೆ, ಮಂಗಳ ಗ್ರಹದ ಅದ್ಭುತ ಫೋಟೋಗಳನ್ನು ಕ್ಲಿಕ್ಕಿಸಿದೆ.

Scroll to load tweet…

Scroll to load tweet…

ಮಂಗಳಯಾನದಲ್ಲಿ ಅಳವಡಿಸಲಾಗಿರುವ ಕ್ಯಾಮರಾ ಗ್ರಹದ ಒಟ್ಟು 980 ಫೋಟೋಗಳನ್ನು ಕ್ಲಿಕ್ಕಿಸಿದ್ದು, ಬೇರೆ ಬೇರೆ ಪ್ರದೇಶಗಳ ಕುರಿತು ವಿಸ್ತೃತ ಮಾಹಿತಿ ದೊರೆತಿದೆ.

ಮಂಗಳ ಗ್ರಹದ ಸಂಪೂರ್ಣ ಪರಿಭ್ರಮಣೆಯನ್ನು ಸೆರೆ ಹಿಡಿದ ಏಕೈಕ ಮಾನವ ನಿರ್ಮಿತ ನೌಕೆ ಎಂಬ ಹೆಗ್ಗಳಿಕೆಗೂ ಇಸ್ರೋದ ಮಂಗಳಯಾನ ನೌಕೆ ಪಾತ್ರವಾಗಿದೆ.

Scroll to load tweet…