ನವದೆಹಲಿ[ಮಾ.23]: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಮತ್ತು ರಾಷ್ಟ್ರೀಯ ಮಹತ್ವದ ವಿಷಯಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ 30457 ಜಾಹೀರಾತುಗಳು ತನ್ನ ಜಾಲತಾಣದಲ್ಲಿ ಪ್ರಕಟಗೊಂಡಿದೆ ಎಂದು ಫೇಸ್‌ಬುಕ್‌ ಮಾಹಿತಿ ನೀಡಿದೆ.

ಈ ಜಾಹೀರಾತುಗಳಿಗೆ 6.54 ಕೋಟಿ ಹಣ ಪಾವತಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಜಾಹೀರಾತು ನೀಡಿಕೆಯಲ್ಲಿ ಬಿಜೆಪಿ ಮೊದಲ ಸ್ಥಾನದಲ್ಲಿದೆ. ‘ನನ್ನ ಮೊದಲ ಮತ ಮೋದಿಗೆ’ ಎಂಬ ಪೇಜ್‌ ಅತಿ ಹೆಚ್ಚು ಸಂಖ್ಯೆಯ (2765) ಜಾಹೀರಾತು ಹೊಂದಿದ್ದು, ನಂತರದ ಸ್ಥಾನವನ್ನು ‘ಮನ್‌ ಕಿ ಬಾತ್‌’ ಮತ್ತು ಮೂರನೇ ಸ್ಥಾನದಲ್ಲಿ ‘ನಮೋ ಬೆಂಬಲಿಗರು’ ಎಂಬ ಗುಂಪು ಪಡೆದುಕೊಂಡಿದೆ.

ಇನ್ನು ‘ಭಾರತ್‌ ಕೆ ಮನ್‌ ಕಿ ಬಾತ್‌’ ಪೇಜ್‌ ಜಾಹಿರಾತು ವೆಚ್ಚದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ಮಾ.10ರಿಂದ 16ರವರೆಗೆ ಇದು .20 ಲಕ್ಷ ವೆಚ್ಚ ಮಾಡಲಾಗಿದೆ.