ಫೇಸ್ ಬುಕ್’ನ್ನೇ ಹಿಂದಿಕ್ಕಿ ಯುವಜನರ ಸೆಳೆಯುತ್ತಿದೆ ಈ ಹೊಸ ಸಾಮಾಜಿಕ ಮಾಧ್ಯಮ

First Published 13, Feb 2018, 4:18 PM IST
Less cool Facebook losing youth at fast pace
Highlights

ಇಂದಿನ ಯುವಜನತೆ ಫೇಸ್’ಬುಕ್’ನಿಂದ ದೂರ ಸರಿಯುತ್ತಿದ್ದಾರೆ. ಅದಕ್ಕೆ ಕಾರಣ ಅವನರನ್ನು ಸೆಳೆಯುವ ಇನ್ನೊಂದು ಹೊಸ ಸಾಮಾಜಿಕ ಜಾಲತಾಣವೊಂದು ಹುಟ್ಟಿಕೊಂಡಿದೆ.  ಈಗ ಅಪ್ಪ, ಅಮ್ಮ, ಅಜ್ಜಿ ಫೇಸ್ ಬುಕ್ ಸೈನ್ ಇನ್ ಆದರೆ ಮಗ, ಮೊಮ್ಮಗ ಮಾತ್ರ ಫೇಸ್ ಬುಕ್ ಲಾಗ್ ಔಟ್ ಮಾಡುತ್ತಿದ್ದಾರೆ.

ವಾಷಿಂಗ್ಟನ್ : ಇಂದಿನ ಯುವಜನತೆ ಫೇಸ್’ಬುಕ್’ನಿಂದ ದೂರ ಸರಿಯುತ್ತಿದ್ದಾರೆ. ಅದಕ್ಕೆ ಕಾರಣ ಅವನರನ್ನು ಸೆಳೆಯುವ ಇನ್ನೊಂದು ಹೊಸ ಸಾಮಾಜಿಕ ಜಾಲತಾಣವೊಂದು ಹುಟ್ಟಿಕೊಂಡಿದೆ.  ಈಗ ಅಪ್ಪ, ಅಮ್ಮ, ಅಜ್ಜಿ ಫೇಸ್ ಬುಕ್ ಸೈನ್ ಇನ್ ಆದರೆ ಮಗ, ಮೊಮ್ಮಗ ಮಾತ್ರ ಫೇಸ್ ಬುಕ್ ಲಾಗ್ ಔಟ್ ಮಾಡುತ್ತಿದ್ದಾರೆ.

ಅದಕ್ಕೆ ಕಾರಣವೇನು ಗೊತ್ತಾ. ಅವರನ್ನು ಈಗ ಹೊಸ ಸಾಮಾಜಿಕ ಜಾಲತಾಣ ಆಕರ್ಷಿಸುತ್ತಿದೆ. ಅದೇನು ಗೊತ್ತಾ ಅದೇ ಸ್ನ್ಯಾಪ್ ಚಾಟ್, ಈಗ ಹೆಚ್ಚಿನ ಸಂಖ್ಯೆಯಲ್ಲಿ ಯುವಜನತೆಯನ್ನು ಸ್ನಾಪ್ ಚಾಟ್ ಸಳೆಯುತ್ತಿದೆ. ಫೇಸ್ ಬುಕ್’ನಿಂದ ಸ್ನಾಪ್ ಚಾಟ್ ಯುವಜನತೆಯನ್ನು ದೂರ ಸರಿಸುತ್ತಿದೆ.

ಅಮೆರಿಕದಲ್ಲಿ ಫೇಸ್ ಬುಕ್ ಮಾರುಕಟ್ಟೆ ಬೆಳೆಯುತ್ತಲೇ ಇದೆ. ಆದರೆ ಸಂಶೋಧನೆಗಳು ಹೇಳುವ ಪ್ರಕಾರ ವಯಸ್ಸಾದವರು ಮಾತ್ರವೇ ಫೇಸ್’ಬುಕ್ ಹೆಚ್ಚು ಬಳಸುತ್ತಿದ್ದಾರಂತೆ. ಅಲ್ಲದೇ ಯುವಜನತೆಯನ್ನು ಸೆಳೆಯಲು ಫೇಸ್ ಬುಕ್ ಇತ್ತೀಚಿನ ದಿನಗಳಲ್ಲಿ ಹಿಂದೆ ಬಿದ್ದಿದೆಯಂತೆ.

loader