Asianet Suvarna News Asianet Suvarna News

ಫೋನ್ ಕೊಳ್ಳಲಿದ್ದೀರಾ? ಸ್ವಲ್ಪ ತಡೆಯಿರಿ; ಬಿಡುಗಡೆಗೆ ಸಿದ್ದವಾಗಿವೆ ಸ್ಮಾರ್ಟ್’ಫೋನ್’ಗಳು

ಒನ್ ಪ್ಲಸ್ ೬ ಮಾರುಕಟ್ಟೆಗೆ ಬಂದು ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿದ್ದೇ ತಡ ಮಿಕ್ಕೆಲ್ಲಾ ಕಂಪನಿಯ ಫೋನ್‌ಗಳ ಬೇಡಿಕೆ ದೊಡ್ಡ ಮಟ್ಟದಲ್ಲಿ ಕುಸಿತ ಕಂಡಿತ್ತು. ಇದೀಗ ಎಚ್ಚೆತ್ತು, ಅಸೂಸ್, ರೆಡ್‌ಮೀ, ಸ್ಯಾಮ್‌ಸಂಗ್ ಸೇರಿದಂತೆ ಪ್ರತಿಷ್ಟಿತ ಕಂಪನಿಗಳು ಒನ್ ಪ್ಲಸ್‌ಗೆ ಸೆಡ್ಡು ಹೊಡೆದು ಕಡಿಮೆ ಬೆಲೆಯಲ್ಲಿ ಹೆಚ್ಚು ಸಾಮರ್ಥ್ಯದ ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಿದ್ಧವಾಗಿವೆ.

Latest Smart Phones coming with new attractive features

ಸ್ಮಾರ್ಟ್‌ಫೋನ್ ಲೋಕ ವಾರವಾರಕ್ಕೂ ಬದಲಾಗುತ್ತಲೇ ಹೋಗುತ್ತದೆ. ಇಂದು ಲೇಟೆಸ್ಟ್ ಎನ್ನಿಸಿಕೊಂಡ ಫೋನ್‌ಗಳು ನಾಳೆಗೆ ಔಟ್‌ಡೇಟೆಡ್ ಆಗಿರುತ್ತವೆ. ಹಾಗಾಗಿಯೇ ಎಲ್ಲರೂ ಸಾಧ್ಯವಾದಷ್ಟು ಲೇಟೆಸ್ಟ್ ಫೋನ್‌ಗಳನ್ನೇ ಕೊಳ್ಳಲು ಮನಸ್ಸು ಮಾಡುವುದು. ಆದರೆ ಇದಕ್ಕೆ ತಕ್ಕಂತೆ ಬೆಲೆಯೂ ಹೆಚ್ಚಾಗಿಯೇ ಇರುತ್ತದೆ. ಇದೇ ವೇಳೆಯಲ್ಲಿ ಸ್ಪರ್ಧೆ ಕೂಡ ಹೆಚ್ಚಾಗಿಯೇ ಇರುವುದರಿಂದ ಒಂದು ಕಂಪನಿಯನ್ನು ಮೀರಿಸುವ ಹಾಗೆ ಮತ್ತೊಂದು ಕಂಪನಿ ಫೋನ್‌ಗಳನ್ನು ತಯಾರಿಸಿ ಕಡಿಮೆ ಬೆಲೆಯಲ್ಲೇ ನೀಡುತ್ತದೆ. ಈ ಜುಲೈ ತಿಂಗಳಿನಲ್ಲಿ ಕೆಲವು ಕಂಪನಿಗಳ ಮಿನಿಮಮ್ ಬಜೆಟ್ ಸ್ಮಾರ್ಟ್‌ಫೋನ್‌ಗಳ ತುಲನೆ ಇಲ್ಲಿದೆ.

ಅಸೂಸ್ ಝೆನ್‌ಫೋನ್ 5 ಝಡ್
ಅಸೂಸ್ ಹಿಂದಿನಿಂದಲೂ ಸ್ಮಾರ್ಟ್‌ಫೋನ್ ಜಗತ್ತಿನಲ್ಲಿ ತಕ್ಕ ಮಟ್ಟಿಗೆ ವಿಶ್ವಾಸ ಉಳಿಸಿಕೊಂಡು ಬಂದ ಕಂಪನಿ. ಒನ್‌ಪ್ಲಸ್ ೬ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಂತೆಯೇ ಎಚ್ಚರಗೊಂಡ ಇದು ಗುಣಮಟ್ಟದ, ಹೆಚ್ಚು ಸಾಮರ್ಥ್ಯದ ಸ್ಮಾಟ್ ಫೋನ್ ತಯಾರಿಯಲ್ಲಿ ತೊಡಗಿ ಜುಲೈ 4  ಅಂದರೆ ನಿನ್ನೆ ತನ್ನ ಬಹುನಿರೀಕ್ಷಿತ ‘ಝೆನ್‌ಫೋನ್ 5 ಝಡ್’ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸಧ್ಯ ಫ್ಲಿಪ್ ಕಾಟ್ ನರ್ಲ್ಲಿ ಬುಕ್ಕಿಂಗ್ ಆಧಾರದಲ್ಲಿ ಸಿಕ್ಕುತ್ತಿರುವ ಈ ಸ್ಮಾರ್ಟ್‌ಫೋನ್ ಕೆಲವೇ ದಿನಗಳಲ್ಲಿ ಮುಕ್ತ ಮಾರುಕಟ್ಟೆಗೂ ಕಾಲಿಡಲಿದೆ.

ಮಿಡ್ ನೈಟ್ ಬ್ಲೂ, ಸಿಲ್ವರ್ ಎರಡು ಬಣ್ಣಗಳಲ್ಲಿ ಲಭ್ಯವಿರುವ ಈ ಫೋನ್ 64 ಜಿಬಿ, 128  ಜಿಬಿ, 256 ಜಿಬಿ ಸಾಮರ್ಥ್ಯಗಳನ್ನು ಹೊಂದಿರಲಿದೆ. 6 ಜಿಬಿ ರ್ಯಾಮ್ , 64 ಜಿಬಿ ಇಂಟರ್‌ನಲ್ ಮೆಮೋರಿ ಹೊಂದಿರುವ ಫೋನ್ ಬೆಲೆ 29,999, 8 ಜಿಬಿ, 128 ಜಿಬಿ ಸಾಮರ್ಥ್ಯ- 32,999, 8 ಜಿಬಿ, 256 ಜಿಬಿ ಸಾಮರ್ಥ್ಯ- 36,999ಕ್ಕೆ ಮಾರುಕಟ್ಟೆಯಲ್ಲಿ ದೊರೆಯಲಿವೆ.  ಒನ್ ಪ್ಲಸ್ 6 ನ 6 ಜಿಬಿ/ 64 ಜಿಬಿ ಫೋನ್ ಬೆಲೆ 34,999 ಇದಕ್ಕೆ ಹೋಲಿಕೆ ಮಾಡಿಕೊಂಡರೆ ಅಸೂಸ್‌ನಲ್ಲಿ ಕಡಿಮೆ ಬೆಲೆಗೆ ಹೆಚ್ಚು ಸಾಮರ್ಥ್ಯದ ಸ್ಮಾರ್ಟ್ ಫೋನ್ ದಕ್ಕಲಿದೆ. 

ಮೋಟೋ ಜಿ 6 
4 ಜಿಬಿ/ 64 ಜಿಬಿ ಸಾಮರ್ಥ್ಯ, ಲೇಟೆಸ್ಟ್ ಓರಿಯೋ ಆಂಡ್ರಾಯ್ಡ್ ವರ್ಷನ್, ಆಕರ್ಷಕ ಡಿಸೈನ್ ಹೊತ್ತು 15,999 ರುಪಾಯಿಗೆ ಲಭ್ಯವಾಗುತ್ತಿದೆ. ಮೋಟೋ ಜಿ 6.  ಇಷ್ಟೇ ಸಾಮರ್ಥ್ಯದ ಇತರ ಯಾವ ಫೋನ್‌ಗಳೂ ಇಷ್ಟು ಕಡಿಮೆ ಬೆಲೆಗೆ ಸಿಕ್ಕದೇ ಇರುವುದು ಈ ಫೋನ್‌ನ ವಿಶೇಷ. ಇದೂ ಕೂಡ ಮುಂದೆ 128 ಜಿಬಿ ಸಾಮರ್ಥ್ಯದ, ಮತ್ತಷ್ಟು ಗುಣಮಟ್ಟದ ಕ್ಯಾಮರಾದೊಂದಿಗೆ 2019 ರ ವೇಳೆಗೆ ಮಾರುಕಟ್ಟೆಗೆ ಬರಲಿದೆ.

ರೆಡ್‌ಮೀ ನೋಟ್ 5 ಪ್ರೋ
ಒನ್ ಪ್ಲಸ್ 5, 5 ಟಿ, 6 ಗಳಿಗೆ ಸೆಡ್ಡು ಹೊಡೆಯಬೇಕು ಎನ್ನುವ ದೃಷ್ಟಿಯಿಂದ ಅತಿ ಕಡಿಮೆ ಎನ್ನುವಷ್ಟು ಬೆಲೆಗೆ ಸ್ಮಾರ್ಟ್ ಫೋನ್ ಒದಗಿಸುತ್ತಾ ಬಂದಿರುವ ರೆಡ್ ಮೀ ಈಗ ನೋಟ್ 5 ಪ್ರೋ ಮಾರುಕಟ್ಟೆಗೆ ತಂದಿದೆ. ಅದೂ ಕೂಡ 17,599 ರುಪಾಯಿಗೆ. 4 ಜಿಬಿ/ 64 ಜಿಬಿ ಸಾಮರ್ಥ್ಯದ 4000 ಎಂಎಎಚ್ ಬ್ಯಾಟರಿ ದಕ್ಷತೆಯ ಫೋನ್ ಅನ್ನು ಬಿಡುಗಡೆ ಮಾಡಿದೆ. 

Follow Us:
Download App:
  • android
  • ios