ಭಾರತದಲ್ಲಿ ಬಿಡುಗಡೆಯಾಗಲಿದೆ ಕೆಟಿಎಮ್ 390 ಅಡ್ವೆಂಚರ್ ಬೈಕ್

KTM confirms India launch of 390 Adventure in 2019
Highlights

ಭಾರತದಲ್ಲಿನ ಅಡ್ವೆಂಚರ್ ರೈಡರ್‌ಗಳಿಗಾಗಿ ಕೆಟಿಎಮ್ ಸಂಸ್ಥೆ ಕೆಟಿಎಮ್ 390  ಅಡ್ವೆಂಚರ್ ಬೈಕ್ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಬೈಕ್‌ನ ವಿಶೇಷತೆ ಏನು? ಇಲ್ಲಿದೆ ವಿವರ.

ನವದೆಹಲಿ(ಜೂ.15): ಭಾರತದಲ್ಲಿ ಕೆಟಿಎಮ್ 390 ಅಡ್ವೆಂಚರ್ ಬೈಕ್‌ನ್ನು 2019ರ ಆರಂಭದಲ್ಲಿ ಬಿಡಡುಗಡೆ ಮಾಡಲಾಗುವುದು ಎಂದು ಆಸ್ಟ್ರೇಲಿಯಾ ಮೂಲದ ಸ್ಪೋರ್ಟ್ಸ್ ಬೈಕ್ ಕಂಪೆನಿ ಕೆಟಿಎಮ್ ಸ್ಪಷ್ಟಪಡಿಸಿದೆ.

ಸಂಪೂರ್ಣ ಅಡ್ವೆಂಚರ್ ಫೀಚರ್ ಒಳಗೊಂಡ ಕೆಟಿಎಮ್ 390 ಅಡ್ವೆಂಚರ್ ಬೈಕ್ ಭಾರತದ ಮಾರುಕಟ್ಟೆಯಲ್ಲಿ ಹೊಸ ದಾಖಲೆ ಬರೆಯಲಿದೆ ಎಂದು ಕೆಟಿಎಮ್ ಹೇಳಿದೆ. ಭಾರತದ 320 ನಗರಗಳಲ್ಲಿರುವ 430 ಕೆಟಿಎಮ್ ಶೋ ರೂಮ್‌ಗಳಲ್ಲಿ ಕೆಟಿಎಮ್ 390 ಅಡ್ವೆಂಚರ್ ಬೈಕ್ ಲಭ್ಯವಾಗಲಿದೆ.

ರ‍್ಯಾಲಿ ರೇಸ್ 1290 ಬೈಕ್ ವಿನ್ಯಾಸದಲ್ಲಿ ಇನ್ನಷ್ಚು ಆಕರ್ಷಕವಾಗಿ ನೂತನ ಬೈಕ್ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂದು ಸಂಸ್ಥೆ ಹೇಳಿದೆ. ಆದರೆ ಇದರ ಬೆಲೆ ಎಷ್ಟು ಅನ್ನೋದನ್ನ ಬಹಿರಂಗ ಪಡಿಸಿಲ್ಲ. ಜೊತೆಗೆ ನೂತನ ಅಡ್ವೆಂಚರ್ ಬೈಕ್‌ನ ವಿಶೇಷತಗಳೇನು ಅನ್ನೋದು ರಹಸ್ಯವಾಗಿ ಉಳಿದಿದೆ.

loader